More

    ಯಡಿಯೂರಪ್ಪರನ್ನು ಹೊಗಳಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮೀ ಹೆಬ್ಬಾಳ್ಕರ್​..!

    ಬೆಳಗಾವಿ: ಬಿ.ಎಸ್​. ಯಡಿಯೂರಪ್ಪ ಅವರು ಪಕ್ಷಾತೀತವಾಗಿ ಲೆಜೆಂಡ್ ನಾಯಕರು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಪ್ರಶಂಸಿಸಿದರು.

    ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಎಸ್​ವೈ ಅವರಿಗೆ 50 ವರ್ಷ ರಾಜಕೀಯದಲ್ಲಿ ಅನುಭವ ಇದೆ. ಬಿಜೆಪಿ ಕಟ್ಟಿ ಬೆಳೆಸಿದ್ದ ಬಿಎಸ್​ವೈ ಬಹಳಷ್ಟು ದುಃಖದಿಂದ ಭಾಷಣ ಮಾಡಿದರು. ಆ ಕ್ಷಣದಲ್ಲಿ ಯುಗಾಂತ್ಯ ಆಯಿತು ಅನಿಸಿತು ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

    2023ರ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್, ಬಿಜೆಪಿಯ ಬೆಳವಣಿಗೆಗೆ ಕಾತುರದಿಂದ ನೋಡುತ್ತಿದೆ. ಯಡಿಯೂರಪ್ಪರಿಗೆ ಅಭಿನಂದನೆ ಸಲ್ಲಿಸುತ್ತೇ‌ನೆ. ಅವರ ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ. ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ. ದುಖಃದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದರು.

    ರಾಜ್ಯದಲ್ಲಿ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ. ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಈ ಬೆಳವಣಿಗೆ ಅವಶ್ಯಕತೆ ಇತ್ತಾ? ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಆಡಳತಕ್ಕಿಂತ ಬಿಜೆಪಿ ರಾಜಕೀಯ ಮುಖ್ಯ ಎಂದು ಅನಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)

    ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ, ಹಂಗಾಮಿ ಸಿಎಂ ಆಗಿ ಯಡಿಯೂರಪ್ಪ ಮುಂದುವರಿಕೆ

    2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ… ಎನ್ನುತ್ತಲೇ ನೂತನ ಸಿಎಂ ಬಗ್ಗೆ ಬಿಎಸ್​ವೈ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ

    ಐಪಿಎಸ್​ ಅಧಿಕಾರಿ ಚನ್ನಣ್ಣನವರ್ ನನ್ನಣ್ಣ ಎಂದು ಭಕ್ತರಿಂದ ಲಕ್ಷ ಲಕ್ಷ ಲಪಟಾಯಿಸಿ ಎಸ್ಕೇಪ್​ ಆದ ಅರ್ಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts