More

    ಜ್ಞಾನ-ಧ್ಯಾನದಿಂದ ಜಾಗೃತರಾಗಿ

    ಬಾಗಲಕೋಟೆ: ಶಿವರಾತ್ರಿ ಎಂದರೆ ನಮ್ಮನ್ನು ನಾವು ಜಾಗೃತಿಗೊಳಿಸಿಕೊಳ್ಳುವ ರಾತ್ರಿ. ಜ್ಞಾನ ಮತ್ತು ಧ್ಯಾನದಿಂದ ಜಾಗೃತಿಗೊಳ್ಳಬೇಕು. ಶಿವರಾತ್ರಿಯಿಂದ ಶಿವಯೋಗಿಗಳಾಗಬೇಕು. ಶಿವಶರಣರ ಅಣತಿಯಂತೆ ನಿತ್ಯ ಶಿವರಾತ್ರಿ ಆಚರಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶರಣಬಸವ ಅಪ್ಪಂಗಳ ಆಶ್ರಮದಲ್ಲಿ ಶನಿವಾರ ರಾತ್ರಿ ಜರುಗಿದ ಶಿವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಮೂಲಾಧರ ಚಕ್ರದಲ್ಲಿ ಆಚಾರಲಿಂಗ, ಸ್ವಾಧಿಷ್ಟಾನ ಚಕ್ರದಲ್ಲಿ ಗುರುಲಿಂಗ, ಮಣಿಪುರ ಚಕ್ರದಲ್ಲಿ ಶಿವಲಿಂಗ, ಅನಾಹುತ ಚಕ್ರದಲ್ಲಿ ಜಂಗಮಲಿಂಗ, ವಿಶುದ್ಧ ಚಕ್ರದಲ್ಲಿ ಪ್ರಾಸದಲಿಂಗ, ಅಜ್ಞಾಚಕ್ರದಲ್ಲಿ ಮಹಾಲಿಂಗ, ಸಹಾಸ್ರಾರು ಚಕ್ರದಲ್ಲಿ ನಿರಂಜನ ಲಿಂಗ ಜಾಗೃತಿ ಮಾಡಿಕೊಂಡು ಕುಂಡಲಿನಿ ಜಾಗೃತಿ ಮಾಡಿಕೊಳ್ಳಬೇಕು. ತನ್ಮೂಲಕ ಯೋಗಿಗಳಾಗಬೇಕು ಎಂದು ತಿಳಿಸಿದರು.

    ಚಳ್ಳಕೆರೆ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, ಶಿವಯೋಗದಿಂದ ವೈಯಕ್ತಿಕ ಅಧ್ಯಾತ್ಮದ ಬೆಳವಣಿಗೆ, ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥೃ ಉತ್ತಮಗೊಳ್ಳುತ್ತದೆ. ಇಂತಹ ಶಿವಯೋಗದಿಂದ ಕುಂಡಲಿನಿ ಜಾಗೃತಿಯಾಗಿ ಆಂತರಿಕ ಜ್ಞಾನದ ಜಾಗೃತಿಯನ್ನು ವ್ಯಕ್ತಪಡಿಸುತ್ತದೆ. ಅದರ ಜತೆಗೆ ಪರಿಶುದ್ಧ ಆನಂದ, ಜ್ಞಾನ, ಪ್ರೀತಿ ಹುಟ್ಟು ಹಾಕುತ್ತದೆ. ವ್ಯಕ್ತಿಯ ಮನಸ್ಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ, ಒಳ ದೃಷ್ಟಿಯನ್ನು ಬೆಳೆಸುತ್ತದೆ, ಆತ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ಹುದುಗಿರುವ ಅಗಾಧವಾದ ಸೃಜನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಶಿವಯೋಗ ದೇಹ ಮತ್ತು ಮನಸ್ಸನ್ನು ಉತ್ತಮ ಮಟ್ಟದಲ್ಲಿರಿಸಲು ಸಾಧ್ಯವಿದೆ ಎಂದು ಹೇಳಿದರು.

    ಸಮಾಜದ ಮುಖಂಡರಾದ ಅಶೋಕ ಲಿಂಬಾವಳಿ, ಗೋಕಾಕನ ಸುನೀಲ ಜಮಖಂಡಿ, ಸಂಗಣ್ಣ ನಂದೂರು, ಯಲ್ಲಪ್ಪ ಪಾತ್ರೋಟಿ ಉಪಸ್ಥಿತಿ ಇದ್ದರು. ಶ್ರೀಕಾಂತ ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಕೊಲ್ಹಾರ ನಿರೂಪಿಸಿದರು. ಗುರುರಾಜ ಪಿ ಸ್ವಾಗತಿಸಿದರು. ಉಮೇಶ ಪತ್ತಾರ ವಚನ ಸಂಗೀತೋತ್ಸವ ಹಾಗೂ ಭೀಮಶಿ ಬದಾಮಿ ಅವರ ತಂಡದಿಂದ ಭಜನೆ ನಡೆಯಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts