More

    ಭರವಸೆ ಈಡೇರಿಸದ ಸರ್ಕಾರ

    ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಬಾಗಲಕೋಟೆ ತಾಲೂಕು ಘಟಕದಿಂದ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು, ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

    ಅಧ್ಯಕ್ಷ ನಿಂಗಪ್ಪ ಕೋಟಿ ಮಾತನಾಡಿ, ಬೆಂಗಳೂರಿನಲ್ಲಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ರ‌್ಯಾಲಿ, ನಿರಂತರ ಧರಣಿಯನ್ನು ಹಮ್ಮಿಕೊಂಡಾಗ ಸರ್ಕಾರ ಸದನದಲ್ಲಿ ಪಂಚಮಸಾಲಿಗಳಿಗೆ ಸೆ.15 ರ ಒಳಗಾಗಿ 2ಎ ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಇದನ್ನು ಸರ್ಕಾರ ನೆರವೇರಸಲಿಲ್ಲ. ಸರ್ಕಾರ ಕೇಳಿದ ಕಾಲಾವಕಾಶ ಮುಕ್ತಾಯಗೊಂಡಿದೆ. ಮೀಸಲಾತಿ ನೀಡದೆಹೋದಲ್ಲಿ ಅ.1 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಮುಖಂಡರಾದ ಮಂಜುನಾಥ ಪುರತಗೇರಿ, ವಿಜಯ ಮುಳ್ಳೂರ, ಗಿರೀಶ ಹೆಬ್ಬಾಳ, ಮಂಜುನಾಥ ಕಳ್ಳಿಗುಡ್ಡ, ಎಸ್.ಎಂ.ರಾಂಪೂರ, ಸಂಗಮೇಶ ಕಾಳಗಿ, ನಾಗರಾಜ ಕೊಟಗಿ ಇದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts