More

    ಈ ರಾಶಿಯವರು ತಂದೆ-ತಾಯಿಯನ್ನು ಪೂಜಿಸಿದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ: ವಾರಭವಿಷ್ಯ

    ಈ ರಾಶಿಯವರು ತಂದೆ-ತಾಯಿಯನ್ನು ಪೂಜಿಸಿದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ: ವಾರಭವಿಷ್ಯಮೇಷ

    ಮಾಘಾದಿ ಪಂಚ ಶುಭಮಾಸಗಳು ಇದ್ದು, ಮೇಷಕ್ಕೆ ಹನ್ನೊಂದರಲ್ಲಿ ಗುರುವು ಲಾಭವನ್ನು, ಕೀರ್ತಿಯನ್ನು ತರುತ್ತಾನೆ. ಬುಧ-ಶನಿಯರು ದಶಮದಲ್ಲಿ ಇದ್ದು, ದೋಷವಿಲ್ಲದ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ. ದ್ರೋಹಚಿಂತನೆ ಮಾಡದೆ ವ್ಯಾಪಾರ-ವ್ಯವಹಾರ ಸಾಗಿಸಿ, ದೈನಂದಿನದಲ್ಲಿ ತೊಡಗಿಕೊಳ್ಳಿ. ರಾಜಕಾರಣದಲ್ಲಿ ಆಸಕ್ತಿ ಇರುವವರು ಶುದ್ಧವಾಗಿದ್ದರೆ ಮಿಂಚಿನಂತೆ ಹೊಳೆಯುವ ಕಾಲ. ಅನಂತನನ್ನು, ನಾಗದೇವರನ್ನು ಪೂಜಿಸಿ.

    ವೃಷಭ

    ಹತ್ತರ ಗುರುವು ಏಪ್ರಿಲ್ ತಿಂಗಳಿನಿಂದ ಏಕಾದಶಕ್ಕೆ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಹಿತವನ್ನೂ, ನ್ಯಾಯವನ್ನೂ ಕೊಡುತ್ತಾನೆ. ಅನಂತವಾದ ಭಕ್ತಿಯಿಂದ ಸರಸ್ವತಿಯ ಮೂಲಮಂತ್ರ ಜಪಿಸಿ. ಸುಜ್ಞಾನವನ್ನು ಕೊಟ್ಟು ಶೃಂಗೇರಿಯಲ್ಲಿ ಶಾರದೆ ಕುಳಿತಿದ್ದಾಳೆ, ದಾರಿಕಾಣದಾದಾಗ ಅವಳನ್ನು ಸಂದರ್ಶಿಸಿ. ಗುರುದ್ವಯರ ಆಶೀರ್ವಾದ ಪಡೆದು ಬನ್ನಿ. ಶುಭವಾಗಲಿ.

    ಮಿಥುನ

    ನವಮಕ್ಕೆ ಗುರುವು ನಿಮ್ಮನ್ನು ಕಾಪಾಡಲು ಬಂದಿದ್ದಾನೆ. ದುರಾಲೋಚನೆ-ದುರ್ಬುದ್ಧಿಯನ್ನು ದೂರ ಮಾಡಿ. ಧರ್ವಧಿಪತಿ ಶನಿಯು ಮನುಷ್ಯ ಮಾಡುವ ಕರ್ಮವನ್ನು ನೋಡುತ್ತಾನಾದರೂ, ಸತ್ಯವನ್ನು ಕಂಡರೆ ಸುಮ್ಮನಿರುತ್ತಾನೆ. ದುಷ್ಟಚಿಂತನೆ, ದುರಹಂಕಾರ ಎಲ್ಲಕ್ಕೂ ಶಿಕ್ಷೆ ಇಟ್ಟಿರುತ್ತಾನೆ. ಶನಿಯನ್ನು ಪ್ರಾರ್ಥಿಸಿ.

    ಕಟಕ

    ಧರ್ವಧರ್ಮವನ್ನು ತೂಗುವ ಶನಿಯು ಸಪ್ತಮದಲ್ಲೂ, ಶನಿ ಮನೆಯಲ್ಲಿ ಗುರುವೂ ಇರುವುದರಿಂದ ಕೆಲವೊಂದು ಖೇದಗಳು ಮನಸ್ಸಿಗೆ ಉಂಟಾಗುತ್ತವೆ. ಮತ್ತೆ ನಿಮ್ಮನ್ನು ಕಾಪಾಡುವುದು ಕರ್ಕಾಟಕ ರಾಶ್ಯಾಧಿಪತಿ ಶ್ರೀರಾಮಚಂದ್ರನೇ ಎಂಬುದನ್ನು ಮರೆಯದಿರಿ. ಈ ಕಾಲದಲ್ಲಿ ನೀವು ಧ್ಯಾನವನ್ನು ಮಾಡಿ, ಧರ್ಮದೃಷ್ಟಿಯನ್ನು ಉಳ್ಳವರಾಗಿ ಉತ್ತಮ ಚಿಂತನೆ ಮಾಡಿದರೆ ಪರಮಾತ್ಮನೇ ನಿಮ್ಮನ್ನು ಈ ಸಂಕಷ್ಟದಿಂದ ಹೊರತಂದು ಕಾಪಾಡುತ್ತಾನೆ. ರಾಮಮಂತ್ರ ಜಪಿಸಿ.

    ಸಿಂಹ

    ಈ ರಾಶಿಯವರು ಧೈರ್ಯಕ್ಕೆ, ಸಾಹಸಕ್ಕೆ ಹೆಸರು ಮಾಡಿದವರು. ಎಲ್ಲವೂ ಇದ್ದು ಧೈರ್ಯವೂ ಉತ್ಸಾಹವೂ ಇಲ್ಲದಿದ್ದರೆ ಯಾವ ಕಾರ್ಯಗಳಲ್ಲೂ ಜಯಿಸಲಾಗುವುದಿಲ್ಲ. ಸಪ್ತಮ ಗುರು ಒಬ್ಬನೇ ಸಾಕು ಎಲ್ಲವನ್ನೂ ಕೊಟ್ಟು, ನೀವು ಪೂರ್ವಜನ್ಮದಲ್ಲಿ ಮಾಡಿದ ಪುಣ್ಯಾಂಶದಿಂದ ವಿಜಯದತ್ತ ಕೊಂಡೊಯುತ್ತಾನೆ. ಅನುಮಾನ ಬೇಡ. ಸಿಂಹ ರಾಶಿಯಲ್ಲಿ ಜನಿಸಿದ ನೀವು ಸದಾಕಾಲವೂ ಸಂಬಂಧಗಳ ಬಗ್ಗೆ ಲೆಕ್ಕಿಸದೆ ಉಪಕಾರಿಗಳಾಗಿ ಬದುಕಬೇಕು. ಸೂರ್ಯನಂತೆ ಸ್ವಚ್ಛವಾಗಿರಬೇಕು. ಎಲ್ಲ ಜಾತಿ-ಮತಗಳನ್ನು ಮರೆತು ಸೂರ್ಯನಂತೆ ಉಪಕಾರಿಯಾಗಿ ಬಾಳಬೇಕು. ಆದಿತ್ಯ-ಹೃದಯ, ಸೂರ್ಯಾಷ್ಟಕವನ್ನು ಪಠಿಸಿ.

    ಕನ್ಯಾ

    ಜಗತ್ತಿಗೆ ಅಂದ ಚಂದವನ್ನು ಕೊಟ್ಟು ಮಾತೆಯ ರೂಪದಲ್ಲಿ ಜಗತ್ತನ್ನೇ ಕಾಪಾಡುತ್ತಿರುವವಳು ದುರ್ಗೆ. ಅವಳೇ ಈ ಲೋಕವನ್ನು ನಡೆಸುತ್ತಿದ್ದಾಳೆ. ಮೊದಲು ನಿಮ್ಮ ತಾಯಿ-ಸಹೋದರಿಯನ್ನು ಪ್ರೀತಿಸಿ, ಆದರಿಸಿ. ನೀವು ವಿವಾಹವಾದ ಸ್ತ್ರೀಗೆ ಯಾವ ಲೋಪ ಬರದಂತೆ ಅವಳಿಗೆ ಆಶ್ರಯ ಕೊಟ್ಟು ನಡೆದರೆ ನಿಮಗೆ ಶೀಘ್ರ ಒಳ್ಳೆಯ ಕಾಲ ಬರಲಿದೆ. ಈ ವಾರವಿಡೀ ದಿನಂಪ್ರತಿ ಕಾಳಿಕಾಷ್ಟೋತ್ತರ, ದುರ್ಗಾಷ್ಟೋತ್ತರ ಪಾರಾಯಣ ಮಾಡಿ.

    ತುಲಾ

    ವೃಷಭ-ತುಲಾ ರಾಶಿಯವರ ಅಧಿದೇವತೆಯೇ ಶುಕ್ರಾಧಿಪತ್ಯದಲ್ಲಿದ್ದು, ಸಿಂಹವಾಹಿನಿಯು, ನಂದಿ ವಾಹನದಲ್ಲಿ ಕುಳಿತ ಪಾರ್ವತಿಸಹಿತ ಸಾಂಬಸದಾಶಿವನೇ ನಿಮ್ಮನ್ನು ಎತ್ತಲಿಂದೆತ್ತಲೋ ಕೊಂಡೊಯ್ಯುತ್ತಾನೆ. ನಿತ್ಯವೂ ಸಾಂಬಸದಾಶಿವನ ಅಷ್ಟೋತ್ತರ ಪಾರಾಯಣ ಮಾಡಿ. ಪಂಚಮದಲ್ಲಿ ಗುರುವಿರುವುದರಿಂದ ಒಳ್ಳೆಯ ಕೆಲಸಗಳನ್ನೇ ಮಾಡಿ.

    ವೃಶ್ಚಿಕ

    ರಾಹು, ಕೇತುಗಳು ವೃಷಭ-ವೃಶ್ಚಿಕ ರಾಶಿಗಳಿಂದ ನಿರ್ಗಮಿಸುವ ಕಾಲ ದೂರವಿಲ್ಲ. ಹಿಂದೆ ದೇವರಿಂದ ಪಡೆದ ಲಾಭ-ಕೀರ್ತಿಗಳನ್ನು ಮರೆಯದೆ ಒಳ್ಳೆಯ ಚಿಂತನೆ, ಸತ್ಪುರುಷರ ಸಂಗವಿರಬೇಕು. ಆಗಲೇ ಮನುಷ್ಯನು ಗುರಿಯನ್ನು ಮುಟ್ಟಲು ಸಾಧ್ಯ. ಜನ್ಮದಾತರನ್ನು ಮರೆಯದಿರಿ. ನಿಮಗೆ ಋಣ ಬಾಧಿಸುವುದಿಲ್ಲ. ಧನಲಕ್ಷ್ಮೀಯು ನಿಮ್ಮ ಮನೆಯಲ್ಲಿ ಕೂತಿರುತ್ತಾಳೆ. ಋಣಮುಕ್ತವಾಗಲು ಧನವನ್ನು ನೀಡುತ್ತಾಳೆ. ವಿಘ್ನೇಶ್ವರನನ್ನು, ಷಣ್ಮುಖನನ್ನು ಪೂಜಿಸಿ.

    ಧನು

    ಸಂತೋಷಕ್ಕೆ ಕೊರತೆ ಇಲ್ಲ. ಶ್ರಮವಹಿಸಿದ ಬಾಳು ಎಂದೂ ವ್ಯರ್ಥವಾಗುವುದಿಲ್ಲ. ನ್ಯಾಯಮಾರ್ಗ ಒಂದಿದ್ದರೆ ದೇವರು ನೀವು ಬಯಸಿದ್ದನ್ನು ಕೊಟ್ಟೇ ಕೊಡುತ್ತಾನೆ. ದೇವರಲ್ಲಿ, ಧರ್ಮದಲ್ಲಿ ಅಸಡ್ಡೆ ಬೇಡ. ಪೂಜೆ, ಧ್ಯಾನದಲ್ಲಿ ಏಕಾಗ್ರತೆ ಇರಲಿ. ಸ್ವಾಮಿ ವಿವೇಕಾನಂದರು ಹೇಳಿದಂತೆ ಗುರಿ ಮುಟ್ಟುವವರೆಗೂ ಹಿಂದೆ ನೋಡುವುದು ಬೇಡ. ಮುಂದೆ ಶುಭಫಲಗಳು ಕಾದಿವೆ.

    ಮಕರ

    ಮಕರಾಧಿಪತಿ ಶನಿ ದುಃಖವನ್ನು, ಕೆಲವೊಮ್ಮೆ ಆಯಾಸ, ಅನಾರೋಗ್ಯವನ್ನು, ಧರ್ಮಚಿಂತನೆಯನ್ನೂ ಕೊಟ್ಟಿರಬಹುದು. ಇದೆಲ್ಲವನ್ನು ಕೊಟ್ಟಿರುವುದು ನಿಮ್ಮ ಒಳಿತಿಗಾಗಿ ಹಾಗೂ ಮನಸ್ಸನ್ನು-ಮಾರ್ಗವನ್ನು ಸ್ವಚ್ಛವಾಗಿರಿಸಲು. ಕಾಲಾಯ ತಸ್ಮೈ ನಮಃ ಎಂಬಂತೆ ಶನಿಯ ಸಂಚಾರವು ಕುಂಭಕ್ಕೆ ಬಂದಾಗ ಸಮಸ್ಯೆಗೆ ಪರಿಹಾರವೂ, ಸದ್ಯ ದ್ವಿತೀಯದಲ್ಲಿ ಗುರು ಇರುವುದರಿಂದ ಒಳ್ಳೆಯ ಫಲವು ದೊರೆಯಲಿದೆ. ಶನಿ ಅಷ್ಟೋತ್ತರ ಪಠಿಸಿ. ನಿಮ್ಮ ಕಾರ್ಯಗಳು ಸಿದ್ಧಿಸುತ್ತವೆ. ದೇವರಲ್ಲಿ ಅಚಲ ನಂಬಿಕೆ ಇರಲಿ.

    ಕುಂಭ

    ಮೇಷ ರಾಶಿಯಿಂದ ಕುಂಭರಾಶಿಯು ಹನ್ನೊಂದನೆ ಮನೆಯಲ್ಲಿದ್ದು, ಅದರ ಆಧಿಪತ್ಯವು ಶನಿಯ ಕೈಯಲ್ಲಿದೆ. ಲಗ್ನದಲ್ಲಿ ಗುರುವೇ ಇದ್ದು, ನಿಮ್ಮನ್ನು ಎಲ್ಲ ಸಂಕಷ್ಟದಿಂದ ಪಾರು ಮಾಡಿದ ಘಟನೆ ನಡೆದುಹೋಗಿದೆ. ಮಾನವ ರೂಪವನ್ನು ತಳೆದು ಸಾಕ್ಷಾತ್ ಶಂಕರನೇ ಅತ್ರಿನಂದನನಾಗಿ ದತ್ತಾತ್ರೇಯನೆಂಬ ನಾಮದಿಂದ ನೆಲೆಸಿರುವ ಕ್ಷೇತ್ರವೇ ಗಾಣಗಾಪುರ. ಒಮ್ಮೆ ಗಾಣಗಾಪುರವನ್ನು ಸಂದರ್ಶಿಸಿ ಬನ್ನಿ. ನಿಮ್ಮ ಕೆಲಸ ಕಾರ್ಯ ಮುನ್ನಡೆಯತ್ತ ಸಾಗುತ್ತವೆ. ಪ್ರತಿ ಗುರುವಾರ ಉಪವಾಸವಿದ್ದು ಗುರುದತ್ತನಾಮ ಸ್ಮರಣೆ ಮಾಡಿ. ಸಕ್ಕರೆಯನ್ನು ನೈವೇದ್ಯ ಮಾಡಿ ಹಂಚಿರಿ. ಶುಭವಾಗುತ್ತದೆ.

    ಮೀನ

    27 ನಕ್ಷತ್ರಗಳ ಪೈಕಿ ಅಂತ್ಯ ನಕ್ಷತ್ರವೇ ಮೀನರಾಶಿಯ ಅಧಿಪತಿ ಗುರುವು. ಪೂರ್ವಭಾದ್ರ -1, ಉತ್ತರಾಭಾದ್ರ-4 ರೇವತಿ-4 ಪಾದಗಳು ಸೇರಿ ಮೀನ ರಾಶಿಯ ಸಂಪರ್ಕವೂ ಬಂದು ಸದ್ಯದಲ್ಲಿ ಶನಿಯು ಅತ್ಯಂತ ಶುಭಸ್ಥಾನದಲ್ಲಿ ಇದ್ದಾನೆ. ಅತ್ಯಂತ ಶುಭವೂ ಆಗುತ್ತದೆ. ಅಶುಭವನ್ನು ಚಿಂತಿಸಬಾರದು. ರಾಶ್ಯಾಧಿಪತಿ ಗುರುವೇ ಆಗಿರುವುದರಿಂದ ನಿಮ್ಮ ಕುಲಗುರುಗಳನ್ನು ಸಂದರ್ಶಿಸಿ. ಎಲ್ಲ ದೇವತೆಗಳಿಗಿಂತ ಮಿಗಿಲಾದ ನಿಮಗೆ ಲೋಕವನ್ನು ತೋರಿಸಿಕೊಟ್ಟ ಪ್ರಥಮ ಗುರುಗಳಾದ ತಂದೆ-ತಾಯಿಯನ್ನು ಪೂಜಿಸಿದರೆ ನೀವು ಕೈಯಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಸೌಂದರ್ಯ ಲಹರಿ ಪಾರಾಯಣ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts