More

    ರೋಹಿತ್​-ದ್ರಾವಿಡ್​ಗೆ ಪರೋಕ್ಷವಾಗಿ ಟಾಂಗ್​ ನೀಡಿದರೇ ಅಶ್ವಿನ್​?

    ನವದೆಹಲಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಫೈನಲ್​ಗೇರಲು ನೆರವಾದ ಆಟಗಾರರಲ್ಲಿ ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಪ್ರಮುಖರು. ಆದರೆ ಆಸ್ಟ್ರೆಲಿಯಾ ವಿರುದ್ಧ ಓವಲ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಅಶ್ವಿನ್​ಗೆ ಆಡುವ ಹನ್ನೊಂದರ ಬಳಗದಲ್ಲೇ ಸ್ಥಾನ ಸಿಗಲಿಲ್ಲ. ಇದರಿಂದಾಗಿ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರವಾಗಿತ್ತು. ಸ್ವತಃ ಅಶ್ವಿನ್​ಗೆ ಕೂಡ ಆಡುವ ಅವಕಾಶ ಸಿಗದ ಬಗ್ಗೆ ಅಷ್ಟೇ ಬೇಸರವಾಗಿದ್ದು ಇದೀಗ ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಅಲ್ಲದೆ ತಮ್ಮನ್ನು ಕೈಬಿಟ್ಟ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಮತ್ತು ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ಗೂ ಅಶ್ವಿನ್​ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

    ಯುಟ್ಯೂಬ್​ ಚಾನಲ್​ನಲ್ಲಿ ಮಾತನಾಡಿರುವ ಅಶ್ವಿನ್​, ಆಟಗಾರರಿಗೆ ತಂಡದಲ್ಲಿ ನೀಡಬೇಕಾದ ಭದ್ರತೆಯ ವಿಷಯದಲ್ಲಿ ಧೋನಿ ಅವರನ್ನು ಹೊಗಳಿದ್ದಾರೆ. ಈ ಮೂಲಕ ತಂಡದ ಹಾಲಿ ಮ್ಯಾನೇಜ್​ಮೆಂಟ್​ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

    ಡಬ್ಲ್ಯುಟಿಸಿ ಫೈನಲ್​ ಪಂದ್ಯವನ್ನು ಗೆಲ್ಲಲು ಪ್ಯಾಟ್​ ಕಮ್ಮಿನ್ಸ್​ ಸಾರಥ್ಯದ ಆಸ್ಟ್ರೆಲಿಯಾ ತಂಡ ಅರ್ಹವಾಗಿತ್ತು ಎಂದೂ ಅಭಿಪ್ರಾಯ ವ್ಯಕ್ತಪಡಿಸಿರುವ ಅಶ್ವಿನ್​, ತನಗೆ ಲಭಿಸಿದ ಸಣ್ಣ ಲಾಭವನ್ನು ಆಸೀಸ್​ ಸಮರ್ಥವಾಗಿ ಬಳಸಿಕೊಂಡಿತು ಎಂದಿದ್ದಾರೆ.

    ಇದೇ ವೇಳೆ ಟೀಮ್​ ಇಂಡಿಯಾದ ಹಾಲಿ ಐಸಿಸಿ ಟ್ರೋಫಿ ಬರ ಮತ್ತು ಧೋನಿ ನಾಯಕತ್ವದ ಬಗ್ಗೆ ಉಲ್ಲೇಖಿಸಿರುವ ಅಶ್ವಿನ್​, “ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಯಾವ ಆಟಗಾರನನ್ನು ಆಡಿಸಬೇಕು, ಯಾವ ಆಟಗಾರನನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಓರ್ವ ಆಟಗಾರನ ಗುಣಮಟ್ಟ ರಾತ್ರಿಹಗಲು ಆಗುವುದರೊಳಗೆ ಬದಲಾಗುವುದಿಲ್ಲ. ಹಲವರು ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಾಯಕತ್ವದ ಸರಳ ವಿಷಯವೊಂದು ಹೆಚ್ಚಿನವರಿಗೆ ಗೊತ್ತಿಲ್ಲ. ಧೋನಿ ನಾಯಕರಾಗಿದ್ದ ಸಮಯದಲ್ಲಿ 15 ಆಟಗಾರರ ರ್ನಿದಿಷ್ಟ ತಂಡವಿರುತ್ತಿತ್ತು ಮತ್ತು ಬಹುತೇಕ ಪಂದ್ಯಗಳಲ್ಲಿ ಒಂದೇ ರೀತಿಯ ಆಡುವ ಹನ್ನೊಂದರ ಬಳಗವನ್ನು ಆಡಿಸಲಾಗುತ್ತಿತ್ತು. ತಂಡದ ಆಟಗಾರನೊಬ್ಬನಿಗೆ ಧೋನಿ ಅವರು ಅಷ್ಟರ ಮಟ್ಟಿಗೆ ಸ್ಥಾನ ಭದ್ರತೆಯನ್ನು ಒದಗಿಸುತ್ತಾರೆ’ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts