More

    ಶಾಲೆಗೆ ಅಡುಗೆ ಸಿಬ್ಬಂದಿ ನೇಮಿಸಿ

    ಅರಕೇರಾ: ಜರದಬಂಡಿ ಮತ್ತು ಆರ್.ಕರಡಿಗುಡ್ಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಹಾಗೂ ಸಹಾಯಕ ಅಡುಗೆ ಸಿಬ್ಬಂದಿ ನೇಮಿಸಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಕಲ್ಯಾಣ ಕರ್ನಾಟಕ ವಿಮೋಚನೆ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್ ಒತ್ತಾಯಿಸಿದರು.

    ತಾಪಂ ವ್ಯವಸ್ಥಾಪಕ ಸಂಗಪ್ಪಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.ಮುಷ್ಟೂರು ಗ್ರಾಪಂ ವ್ಯಾಪ್ತಿಯ ಜರದಬಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇವಲ ಒಬ್ಬ ಅಡುಗೆ ಸಹಾಯಕರಿದ್ದಾರೆ. ಅಲ್ಲದೇ ಮಲದಕಲ್ ಗ್ರಾ.ಪಂ ವ್ಯಾಪ್ತಿಯ ಆರ್.ಕರಡಿಗುಡ್ಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಮುಖ್ಯ ಅಡುಗೆಯವರನ್ನು ನೇಮಿಸಿರುವುದಿಲ್ಲ.

    ಪ್ರತಿ ಶಾಲೆಗೆ ಒಬ್ಬರು ಮುಖ್ಯ ಹಾಗೂ ಇಬ್ಬರು ಸಹಾಯಕ ಅಡುಗೆ ಸಿಬ್ಬಂದಿ ಅವಶ್ಯ ಇದೆ. ಅವಶ್ಯವಿರುವ ಅಡುಗೆ ಸಿಬ್ಬಂದಿಯನ್ನು ನೇಮಿಸದೆ ಇರುವುದರಿಂದ ಮಕ್ಕಳಿಗೆ ಬಿಸಿಯೂಟ ಒದಗಿಸುವಲ್ಲಿ ವ್ಯತ್ಯಯವಾಗುತ್ತಿದೆ. ಸಿಬ್ಬಂದಿ ಕೊರತೆ ಇರುವ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕಿದ್ದರೂ ಉದಾಸೀನತೆ ತೋರುತ್ತಿದ್ದಾರೆ. ಇದರಿಂದ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಕೂಡಲೇ ಸಿಬ್ಬಂದಿ ನೇಮಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಎಸ್‌ಡಿಎ ಮಲ್ಲಿಕಾರ್ಜುನ ಗೌಡ ಕೊಪ್ಪರ, ಹನುಮಂತ ಸಮುದ್ರ, ಪ್ರಭು ಕೊತ್ತದೊಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts