More

    ಬಾಲ್ಯವಿವಾಹ ತಡೆಗೆ ಸರ್ವರೂ ಶ್ರಮಿಸೋಣ

    ಸಂಡೂರು: ಬಾಲ್ಯವಿವಾಹ ತಡೆಯಲು ಸರ್ವರೂ ಶ್ರಮಿಸೋಣ ಎಂದು ಜ್ಞಾನರತ್ನ ಮಹಿಳಾ ಸಬಲೀಕರಣ ಟ್ರಸ್ಟ್ ಖಜಾಂಚಿ ಭೋೀವಿ ಪೆದ್ದಣ್ಣ ಹೇಳಿದರು.

    ತಾಲೂಕಿನ ನರಸಿಂಗಪುರದಲ್ಲಿ ಆಯೋಜಿಸಿದ್ದ ಗ್ರಾಪಂ ಆರೋಗ್ಯ ಆಮೃತ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು. ಬಾಲ್ಯ ವಿವಾಹ ತಡೆಯುವುದು ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲ ದೇಶದ ಅಭಿವೃದ್ಧಿಗೆ ಶ್ರೇಯಸ್ಕರವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ಹದಿನೆಂಟು ವರ್ಷದ ವರೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ. ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸೋಣ. ಮದುವೆ ಮಾಡಿದರೆ ದಂಡ ಮತ್ತು ಶಿಕ್ಷೆ ಕುರಿತು ಅರಿವು ಮೂಡಿಸೋಣ ಎಂದರು.

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಬಾಲ್ಯ ವಿವಾಹ ಕಾಯ್ದೆ, ಮಾನಸಿಕ ಆರೋಗ್ಯ, ಅಸಾಂಕ್ರಾಮಿಕ ರೋಗಗಳ ತಡೆ, ಕ್ಷಯ ಮುಕ್ತ ಭಾರತ ರೂಪಿಸುವ ಬಗ್ಗೆ ಮಾಹಿತಿ ನೀಡಿದರು. ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಹದಿಹರೆಯದವರ ಆರೋಗ್ಯ, ಸ್ನೇಹಾ ಕ್ಲಿನಿಕ್, ಅನಿಮಿಯಾ, ಅಪೌಷ್ಟಿಕತೆ, ಮುಟ್ಟಿನ ನೈರ್ಮಲ್ಯತೆ ಕುರಿತು ಮಾಹಿತಿ ನೀಡಿದರು. ಗ್ರಾಮದ ಮುಖಂಡರಾದ ಎರ‌್ರಿಸ್ವಾಮಿ, ಕೆಎಚ್‌ಪಿಟಿ ಸಂಯೋಜಕಿ ಮಂಜುಳಾ, ಅನುರಾಧಾ, ಸ್ವಸಹಾಯ ಸಂಘದ ಪ್ರತಿನಿಧಿ ಸರಸ್ವತಿ, ಗೌರಮ್ಮ, ಮಾರೆಕ್ಕ, ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ, ರೇಣುಕಾ, ಲಲಿತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts