More

  ಮದ್ದೂರು ಕ್ಷೇತ್ರ ಮಾದರಿಯಾಗಿಸಲು ಯತ್ನ

  ಕೆ.ಎಂ.ದೊಡ್ಡಿ: ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ನನ್ನೊಂದಿಗೆ ಸಹಕರಿಸಬೇಕು ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

  ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಪಕ್ಷದಲ್ಲಿದ್ದು ನನಗೆ ಚುನಾವಣೆ ಮಾಡದಿದ್ದರೂ ಬೇಸರವಿಲ್ಲ. ಕೆಲಸವಾಗಬೇಕಾದರೆ ಈಗಲಾದರೂ ಕಾಂಗ್ರೆಸ್ ಸೇರಿ ಎಂದು ಆಹ್ವಾನ ನೀಡಿದರು.

  ಮದ್ದೂರು ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಮಾಡಬೇಕೆಂಬ ಗುರಿಯಿದೆ. ಈಗಾಗಲೇ ಅಗತ್ಯ ಅನುದಾನ ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು ಎಂದರು.

  ಜಿ.ಪಂ. ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಖಂಡರಾದ ಪೂಜಾರಿ ಮಹೇಶ್, ಕದಲೂರು ತಿಮ್ಮೇಗೌಡ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts