More

    ಕಲ್ಯಾಣ್‌ ಬಳಿ ಭೂಕುಸಿತ, ರೈಲು ಸಂಚಾರ ವ್ಯತ್ಯಯ

    ಮಂಗಳೂರು: ಕೊಂಕಣ ರೈಲ್ವೆಯ ಚಿಪ್ಲುನ್‌ ಬಳಿ ವಶಿಷ್ಟಿ ನದಿ ಮಟ್ಟ ಏರಿಕೆಯಾಗಿರುವುದು ಹಾಗೂ ಕೇಂದ್ರ ರೈಲ್ವೆಯ ಕಲ್ಯಾಣ್‌ ಸೆಕ್ಷನ್‌ ಬಳಿ ಭೂಕುಸಿತ ಆಗಿರುವ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ಅನೇಕ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
    ಜು.21ರಂದು ಹೊರಟಿರುವ ನಂ.02618 ಹಜರತ್‌ ನಿಜಾಮುದ್ದೀನ್‌ ಎರ್ನಾಕುಳಂ ಡೈಲಿ ರೈಲು ಮನ್ಮಾಡ್‌ ಜಂಕ್ಷನ್‌, ದೌಂಡ್‌ ಕೋರ್ಡ್‌ ಲೈನ್‌, ಪೂನಾ ಜಂಕ್ಷನ್‌, ಮೀರಜ್‌ ಜಂಕ್ಷನ್‌, ಲೋಂಡ ಜಂಕ್ಷನ್‌, ಮಡಗಾಂವ್‌ ಜಂಕ್ಷನ್‌ ಮೂಲಕ ಸಂಚರಿಸುವುದು.
    21ರಂದು ಹೊರಟಿರುವ ನಂ.06001 ತಿರುವನಂತಪುರಂ ಸೆಂಟ್ರಲ್ ಹಜರತ್‌ ನಿಜಾಮುದ್ದೀನ್‌ ರೈಲು ವೈಭವವಾಡಿ ಸ್ಟೇಷನ್‌ನಲ್ಲಿ ತಡೆಹಿಡಿಯಲ್ಪಡುವುದು. ನಂ.01224 ಎರ್ನಾಕುಲಂ ಲೋಕಮಾನ್ಯ ತಿಲಕ್‌ ದುರಂತೊ ಸಾಪ್ತಾಹಿಕ ರೈಲು ಕುಡಾಳ್‌ ಸ್ಟೇಷನ್‌ನಲ್ಲಿ ತಡೆಹಿಡಿಯಲ್ಪಡುವುದು. ನಂ.04560 ಚಂಡಿಗಢ ಕೊಚ್ಚುವೇಲಿ ಕೇರಳ ಸಂಪರ್ಕ ಕ್ರಾಂತಿ ರೈಲು ಜು.21ರಂದು ವೀರ್‌ನಲ್ಲಿ ತಡೆಹಿಡಿಯಲ್ಪಟ್ಟಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts