More

    ಕ್ರೀಡಾ ಪ್ರತಿಭೆಗಳಿಗೆ ಸೌಕರ್ಯ ಒದಗಿಸಲು ಕ್ರಮ

    ರಾಯಚೂರು: ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಕ್ರೀಡಾ ಪಟುಗಳಿಗೆ ಸ್ಥಳೀಯವಾಗಿ ಬೇಕಾದ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
    ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನಿಂದ ಭಾನುವಾರ ಆಯೋಜಿಸಿದ್ದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
    ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾಗಿದೆ. ಕ್ರೀಡಾಪಟುಗಳು ತಮ್ಮ ಪ್ರತಿಭೆ ತೋರಲು ಅವಕಾಶ ನೀಡಬೇಕಾದ ಅಗತ್ಯವಿದ್ದು, ಅವರಿಗೆ ಎಲ್ಲ ರೀತಿಯ ಅಗತ್ಯ ಸಹಾಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
    8 ಕಿ.ಮೀ. ಓಟದಲ್ಲಿ ಚಿಂಚೋಡಿ ಗ್ರಾಮದ ಮಲ್ಲಣ್ಣ ದೇಸಾಯಿ ಪ್ರಥಮ, ವಡವಾಟಿಯ ತಾಯಪ್ಪ ನಾಯಕ ದ್ವಿತೀಯ, ಗೋವಿಂದ ತೃತೀಯ ಸ್ಥಾನ ಪಡೆದರು. 4 ಕಿ.ಮೀ. ಓಟದಲ್ಲಿ ಸುರೇಶ ಪ್ರಥಮ, ವಿಜಯಕುಮಾರ ದ್ವಿತೀಯ, ಉಮೇಶ ತೃತೀಯ ಸ್ಥಾನ ಪಡೆದರು.
    ಬಾಲಕಿಯರಿಗಾಗಿ ಏರ್ಪಡಿಸಿದ್ದ 1.5 ಕಿ.ಮೀ. ಓಟದಲ್ಲಿ ವಿಆರ್‌ಇಟಿ ಕಾಲೇಜಿನ ನಾಗಶ್ರೀ ಪ್ರಥಮ, ಬಾಪೂರಿನ ನಂದಮ್ಮ ದ್ವಿತೀಯ, ಗೀತಮ್ಮ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಸಚಿವರು ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಿದರು.
    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ ನಾಯಕ, ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ಅಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ತಿಮ್ಮಾರೆಡ್ಡಿ, ಮಾಜಿ ಅಧ್ಯಕ್ಷ ಕೆ.ಸತ್ಯನಾರಾಯಣ, ಪದಾಕಾರಿಗಳಾದ ಕಿರಣ್ ಬೆಲ್ಲಂ, ಜಿ.ತಿಮ್ಮಾರೆಡ್ಡಿ, ಭಗತಸಿಂಗ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts