More

    ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ

    ಧಾರವಾಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ ೭ರಂದು ಜರುಗಲಿರುವ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ತಾಲೂಕುಗಳಲ್ಲಿ ಸ್ವೀಪ್ ಸಮಿತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
    ಪ್ರಕಟಣೆ ನೀಡಿರುವ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಕ್ಷೇತ್ರಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾರರನ್ನು ಸೆಳೆಯಲು ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ, ಬಸ್, ರೈಲು ನಿಲ್ದಾಣ, ಆಸ್ಪತ್ರೆ ಹಾಗೂ ಮಹಾನಗರ ಪಾಲಿಕೆಗಳ ವಾರ್ಡ್ ಮತ್ತು ಗ್ರಾಮಗಳಲ್ಲಿ ಮತದಾರರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಶೇ. ೫೦ಕ್ಕಿಂತ ಕಡಿಮೆ ಮತದಾನವಾಗಿರುವ ೭೧ ಮತ್ತು ೭೩ ಮತಕ್ಷೇತ್ರಗಳ ೬ ಮತಗಟ್ಟೆಗಳು, ಕಲಘಟಗಿ ಪಟ್ಟಣದ ೨ ಮತಗಟ್ಟೆಗಳು ಮತ್ತು ಶಿಗ್ಗಾಂವಿ ಕ್ಷೇತ್ರದ ೧ ಮತಗಟ್ಟೆ ಸೇರಿ ೯ ಮತಗಟ್ಟೆಗಳಲ್ಲಿ ಮತದಾನ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
    ವಿವಿಧ ರೀತಿಯ ಕಲಾತಂಡಗಳ ಮೂಲಕ ಜಿಂಗಲ್ಸ್ ಪ್ರಸಾರ, ಭಿತ್ತಿಚಿತ್ರ, ಬ್ಯಾನರ್, ಫಲಕಗಳ ಮೂಲಕ ಜಾಗೃಇ, ಮಾನವ ಸರಪಳಿ, ಸಹಿ ಸಂಗ್ರಹಣೆ ಅಭಿಯಾನ, ಬೈಕ್ ರ‍್ಯಾಲಿ, ಹೂವಿನ ಅಲಂಕಾರ ಸ್ಪರ್ಧೆ, ರಂಗೋಲಿ, ಮೆಹಂದಿ, ಉಡಿ ತುಂಬುವ ಕಾರ್ಯಕ್ರಮ, ಪಂಜಿನ ಹಾಗೂ ಮೇಣಬತ್ತಿ ರ‍್ಯಾಲಿಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
    ಸಾಮಾಜಿಕ ಜಾಲತಾಣ ಬಳಸಿ ಯುವಕರನ್ನು ಪ್ರೇರೇಪಿಸುವುದು. ಸೆಲ್ಪಿ ವೀಡಿಯೋ ಸ್ಪರ್ಧೆ, ಕಾಲೇಜುಗಳಲ್ಲಿ ಅಂಬಾಸಿಡರ್ ಆಯ್ಕೆ ಸ್ಪರ್ಧೆ ಆಯೋಜಿಸಲಾಗುವುದು. ಹಾಸ್ಯ ಕಲಾವಿದರನ್ನು ಸಹ ಬಳಸಿಕೊಳ್ಳಲಾಗುವುದು ಎಂದು ಸಿಇಒ ಸ್ವರೂಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts