More

    ದಾವಣಗೆರೆ ಬಿಎಸ್​ಸಿ ಸಂಸ್ಥೆಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

     ಸೇವೆ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಗ್ರಾಹಕರ ನಂಬಿಕೆ, ವಿಶ್ವಾಸದ ತಳಹದಿ ಮೇಲೆ 8 ದಶಕಗಳಿಂದ ಜವಳಿ ಮಾರಾಟದಲ್ಲಿ ರಾಜ್ಯದ ಜನರ ಮನೆ ಮಾತಾಗಿರುವ ದಾವಣಗೆರೆಯ ಬಿ.ಎಸ್​. ಚನ್ನಬಸಪ್ಪ ಆ್ಯಂಡ್​ ಸನ್ಸ್​ ಸಂಸ್ಥೆಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ವಿಜಯರತ್ನ-2022 ಪ್ರಶಸ್ತಿ ಒಲಿದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ದಾವಣಗೆರೆಯ ಬಿ.ಎಸ್​. ಚನ್ನಬಸಪ್ಪ ಆ್ಯಂಡ್​ ಸನ್ಸ್​ ಸಂಸ್ಥೆಯೂ ಒಂದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್​, ಚಿತ್ರನಟ ರಮೇಶ್​ ಅರವಿಂದ್​, ನಟಿ ಶರ್ಮಿಳಾ ಮಾಂಡ್ರೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್​ ಸದಸ್ಯ ಬಿ.ಜಿ. ಪಾಟೀಲ್​ ಇತರರಿದ್ದರು.

    ತಲೆಮಾರುಗಳ ಇತಿಹಾಸ: ಬಿ.ಎಸ್​.ಸಿ.ಯ ಪರಂಪರೆಗೆ ತಲೆಮಾರುಗಳ ಇತಿಹಾಸವಿದೆ. ಬಿ.ಎಸ್​.ನಂಜುಂಡಪ್ಪ ಅವರು ತಲೆಯ ಮೇಲೆ ಬಟ್ಟೆ ಗಂಟು ಹೊತ್ತು ಹಳ್ಳಿಗಳನ್ನು ಸುತ್ತುವುದರಿಂದ ಆರಂಭವಾದ ವ್ಯಾಪಾರ ಇಂದು ಆನ್​ಲೈನ್​ ವೇದಿಕೆವರೆಗೆ ಹಲವು ರೂಪಗಳಲ್ಲಿ ವಿಸ್ತಾರಗೊಂಡಿದೆ. 1934ರಲ್ಲಿ ಹಳೇ ದಾವಣಗೆರೆಯ ಹಂಚಿನ ಮನೆಯಲ್ಲಿ ಶುರುವಾಯಿತು. ಶಾಸ್ತ್ರಿಗಳು ನೀಡಿದ ಸಲಹೆಯಂತೆ ನಂಜುಂಡಪ್ಪ ಅವರು 1938ರಲ್ಲಿ ಅಂಗಡಿಗೆ ತಮ್ಮ ಪುತ್ರ ಬಿ.ಎಸ್​. ಚನ್ನಬಸಪ್ಪ ಅವರ ಹೆಸರಿಟ್ಟರು. ಅಲ್ಲಿಂದ ಅವರ ಯಶಸ್ಸಿನ ಪಯಣ ಆರಂಭವಾಯಿತು. ನಂಜುಂಡಪ್ಪ ಅವರ ನಂತರ ಬಿ.ಎಸ್​. ಚನ್ನಬಸಪ್ಪ ಅವರು ಜವಾಬ್ದಾರಿ ವಹಿಸಿಕೊಂಡರು. ತಂದೆ ಹಾಕಿಕೊಟ್ಟ ದಾರಿಯಲ್ಲೆ ಸಾಗಿ ಸಂಸ್ಥೆಯನ್ನು ಬೆಳೆಸಿದರು. ಅವರ ತರುವಾಯ ಪುತ್ರರಾದ ಬಿ.ಸಿ. ಉಮಾಪತಿ, ಬಿ.ಸಿ. ಚಂದ್ರಶೇಖರ್​, ಬಿ.ಸಿ. ಶಿವಕುಮಾರ್​ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಈಗ ನಾಲ್ಕನೇ ತಲೆಮಾರು ಕೂಡ ಕೈ ಜೋಡಿಸಿದೆ.

    ದಾವಣಗೆರೆ ಬಿಎಸ್​ಸಿ ಸಂಸ್ಥೆಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಬಿ.ಎಸ್​.ಸಿ. ಬ್ರ್ಯಾಂಡ್​ ಗ್ರಾಹಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಎಷ್ಟರಮಟ್ಟಿಗೆ ಎಂದರೆ 60 ವರ್ಷಗಳ ಹಿಂದೆ ತಮ್ಮ ಮದುವೆ ಸಂದರ್ಭದಲ್ಲಿ 100 ರೂ. ಕೊಟ್ಟು ಇವರ ಅಂಗಡಿಯಲ್ಲಿ ಖರೀದಿಸಿದ್ದ ಸೀರೆಯನ್ನು 80 ವರ್ಷದ ವೃದ್ಧೆಯೊಬ್ಬರು ಈಗಲೂ ಇಟ್ಟುಕೊಂಡಿದ್ದಾರೆ ಎಂದರೆ ಈ ಅಂಗಡಿಯ ಬಗ್ಗೆ ಅವರಿಗಿರುವ ಅಭಿಮಾನಕ್ಕೆ ಸಾಕ್ಷಿ. ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಸಣ್ಣದಾಗಿ ಆರಂಭವಾಗಿ ಅದೇ ರಸ್ತೆಯಲ್ಲೇ ಈಗ 7 ಕಟ್ಟಡಗಳಲ್ಲಿ ಪ್ರತ್ಯೇಕ ವಿಭಾಗಗಳಾಗಿವೆ. 2002ರಲ್ಲಿ ಪಿ.ಜೆ. ಬಡಾವಣೆಯಲ್ಲಿ ಶಾಖೆ ತೆರೆಯಲಾಯಿತು. ಅಲ್ಲಿ ಮಹಿಳೆಯರು ಮತ್ತು ಮಕ್ಕಳ ಉಡುಪುಗಳು, ಪುರುಷರ ಸಿದ್ಧ ಉಡುಪುಗಳು ಮತ್ತು ಹೋಮ್​ ಫರ್ನಿಶಿಂಗ್​ ಉತ್ಪನ್ನಗಳ ಮಾರಾಟ 3 ಕಟ್ಟಡಗಳಲ್ಲಿ ನಡೆಯುತ್ತದೆ.

    ದಾವಣಗೆರೆ ಬಿಎಸ್​ಸಿ ಸಂಸ್ಥೆಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನಡೆಂಟಲ್​ ಕಾಲೇಜು ರಸ್ತೆಯಲ್ಲಿ 2016 ರಲ್ಲಿ ಬಿಎಸ್​ಸಿ ಎಕ್ಸ್​ ಕ್ಲೂಸಿವ್​ ಶೋರೂಮ್​ ಆರಂಭಿಸಲಾಯಿತು. ಇಡೀ ಕುಟುಂಬಕ್ಕೆ ಬೇಕಾಗುವ ಎಲ್ಲ ಬಗೆಯ ಉಡುಪುಗಳು ಒಂದೇ ಸೂರಿನಡಿ ಸಿಗುವುದು ವಿಶೇಷ. ಇತ್ತೀಚೆಗೆ ಬೆಳಗಾವಿಯಲ್ಲಿ 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅತಿದೊಡ್ಡ ಶೋರೂಮ್​ ಉದ್ಘಾಟನೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 5 ಮಹಡಿಗಳ ವಿಶಾಲ ಜಾಗದಲ್ಲಿ ಶೋರೂಮ್​ ನೆಲೆಗೊಂಡಿದೆ. ಹುಬ್ಬಳ್ಳಿಯಲ್ಲಿ ಬಿಎಸ್​ಸಿ ಶಾಖೆ ತೆರೆಯಲು ಪ್ರಯತ್ನಗಳು ನಡೆದಿವೆ. ದಾವಣಗೆರೆಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಶೋರೂಮ್​ 2.50 ಲಕ್ಷ ಚದರ ಅಡಿ ಜಾಗದಲ್ಲಿ 2 ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ.

    ಸಮಾಜಸೇವೆಗೂ ಸೈ: ಬಿಎಸ್​ಸಿ ಸಂಸ್ಥೆ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು 1984 ರಲ್ಲಿ ಬಡ ಮಕ್ಕಳಿಗೆ ಶಾಲೆ ಆರಂಭಿಸಿತು. ಅಲ್ಲದೆ 1988ರಲ್ಲಿ ತಂದೆ, ತಾಯಿ ಹೆಸರಿನಲ್ಲಿ ಪ್ರಾಥಮಿಕ ಶಾಲೆ, 1991ರಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು, 2004ರಲ್ಲಿ ಪುರುಷರಿಗೆ ಪದವಿ ಕಾಲೇಜು ಸ್ಥಾಪಸಿಲಾಗಿದೆ. ಉಳುವಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅನೇಕ ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡಿದ್ದಾರೆ.

    ಒಂದು ಕಾಲಕ್ಕೆ ಹತ್ತು ಅಂಗಡಿಗಳಲ್ಲಿ ಒಂದಾಗಿದ್ದ ನಮ್ಮ ಸಂಸ್ಥೆಯು ಈಗ ನಂ.1 ಸ್ಥಾನದಲ್ಲಿದೆ. ಲಾಭವೇ ಮುಖ್ಯವಲ್ಲ, ನಾವು ಮಾಡುವ ವ್ಯಾಪಾರ ನ್ಯಾಯಪರ ಆಗಿರುವಂತೆ ನೋಡಿಕೊಂಡಿದ್ದೇವೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬಂದಿದ್ದೇವೆ. ಕಡಿಮೆ ಬೆಲೆ, ಉತ್ತಮ ಗುಣಮಟ್ಟ ನಮ್ಮ ಸಂಸ್ಥೆಯ ವಿಶೇಷತೆಯಾಗಿದೆ. ಶ್ರಾವಣ ಸಂಭ್ರಮ ಹೆಸರಿನಲ್ಲಿ ವರ್ಷಕ್ಕೊಮ್ಮೆ ಡಬಲ್​ ಡಿಸ್ಕೌಂಟ್​ ನೀಡಲಾಗುತ್ತಿದ್ದು ಜನರು ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ.
    |ಬಿ.ಸಿ. ಚಂದ್ರಶೇಖರ್​ ಬಿ.ಎಸ್​.ಸಿ. ಅಂಗಡಿಯ ಮಾಲೀಕರು

    ಕಾಯಕವೇ ಕೈಲಾಸ, ದೈವ ಭಕ್ತಿ ಮತ್ತು ಸರಳ ಜೀವನ ನಮ್ಮ ಹಿರಿಯರಿಂದ ಕಲಿತ ಗುಣಗಳಾಗಿವೆ. ಅಜ್ಜನವರು ಹಾಕಿಕೊಟ್ಟ ದಾರಿಯಲ್ಲೇ ತಂದೆಯವರೂ ಸಾಗಿದರು. ಅದನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಪ್ರಾಮಾಣಿಕತೆ, ಸತ್ಯ, ಪರಿಶ್ರಮದ ದುಡಿಮೆಯಲ್ಲಿ ನಂಬಿಕೆ ಇಟ್ಟಿದ್ದೇವೆ.
    |ಬಿ.ಸಿ. ಉಮಾಪತಿ ಬಿ.ಎಸ್​.ಸಿ. ಅಂಗಡಿಯ ಮಾಲೀಕರು

    84 ವರ್ಷಗಳ ಇತಿಹಾಸವಿರುವ ನಮ್ಮ ಸಂಸ್ಥೆಯು ನಿಂತ ನೀರಾಗದೆ ಹರಿಯುವ ನದಿಯಂತೆ ಜೀವಂತಿಕೆಯಿಂದ ಕೂಡಿದೆ. ಹಂತ ಹಂತವಾಗಿ ಬೆಳೆದು ಈ ಮಟ್ಟಕ್ಕೆ ತಲುಪಿದ್ದೇವೆ. ನಮ್ಮ ಅಂಗಡಿಗಳು ಬದಲಾವಣೆಗೆ ತಕ್ಕಂತೆ ಆಧುನಿಕ ಸ್ವರೂಪವನ್ನು ಪಡೆದುಕೊಂಡಿದ್ದು, ಮಾಲ್​ ಪ್ರವೇಶಿಸಿದ ಅನುಭವ ನೀಡುತ್ತವೆ.
    | ಬಿ.ಸಿ. ಶಿವಕುಮಾರ್​ ಬಿ.ಎಸ್​.ಸಿ. ಅಂಗಡಿಯ ಮಾಲೀಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts