More

    VIDEO: ಮತ್ತೆ ಜನರ ಮನಗೆದ್ದ ಪ್ರಧಾನಿ ಮೋದಿ! ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡ ಮಹತ್ವದ ಕಾರ್ಯಗಳಲ್ಲಿ ಸ್ವಚ್ಚ ಭಾರತ ಅಭಿಯಾನವೂ ಒಂದು. ಕೇವಲ ಘೋಷಣೆ ಮಾಡಿ ಕೈ ತೊಳೆದುಕೊಳ್ಳುವ ನಾಯಕರ ಪೈಕಿ ಅವರಲ್ಲ ಎಂಬುದನ್ನು ಆಗ್ಗಾಗ್ಗೆ ತಾವು ಮಾಡುವ ಕಾರ್ಯಗಳಿಂದಲೇ ಸಾಬೀತುಪಡಿಸುತ್ತಾರೆ.

    ಪ್ರಧಾನಿ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡಿದ ದಿನವೇ ಸ್ವತಃ ತಾವೇ ಬೀದಿ ಬದಿ ಕಸ ಕುಡಿಸಿದ್ದರು. ಒಬ್ಬ ಪ್ರಧಾನಿ ಈ ರೀತಿ ಸಾಮಾನ್ಯರಂತೆ ನಡೆದುಕೊಳ್ಳುವುದು ಸಾಮಾನ್ಯ ಸಂಗತಿಯೇನಲ್ಲ. ಜನರೂ ಕೂಡ ಅದನ್ನೇ ಪಾಲಿಸಬೇಕೆಂಬುದು ಅವರ ಅಭಿಲಾಷೆಯೂ ಕೂಡ.

    ಇದೀಗ ಇದೇ ಸ್ವಚ್ಛ ಭಾರತ ಅಭಿಯಾನವನ್ನು ಸ್ಮರಿಸಿದ್ದಾರೆ. ಅದು ತಾವೇ ನೆಲದಲ್ಲಿ ಬಿದ್ದ ಕಸವನ್ನು ಎತ್ತಿರುವ ವಿಡಿಯೋ ಭಾರೀ ವೈರಲ್​ ಆಗಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಭಾನುವಾರ ದೆಹಲಿಯಲ್ಲಿ ಐಟಿಪಿಒ ಸುರಂಗ ಉದ್ಘಾಟನೆ ಬಳಿಕ ಬಂದ ಪ್ರಧಾನಿ ಮೋದಿ ಅವರಿಗೆ ನೆಲದಲ್ಲಿ ಕಂಡ ಪೇಪರ್​ ತುಂಡನ್ನು ಬರಿಗೈಯಲ್ಲೇ ಎತ್ತಿದ್ದಾರೆ. ಪೇಪರ್​ ಜತೆಗೆ ಪ್ಲಾಸ್ಟಿಕ್​​ ಬಾಟಲ್​ ಸೇರಿದಂತೆ ಇನ್ನಿತರ ಕಸವನ್ನು ಎತ್ತಿ ಕಸದ ತೊಟ್ಟಿಯಲ್ಲಿ ಹಾಕಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

    ಈ ಹಿಂದೆಯೂ ಹಲವು ಬಾರಿ ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರು ಸ್ವತಃ ಕಸವನ್ನು ಎತ್ತಿರುವುದೂ ಇದೆ. ಅಲ್ಲದೇ ಪ್ಲಾಸ್ಟಿಕ್​ ಕವರ್​ಗಳನ್ನು ಎತ್ತಿ ತಮ್ಮ ಜೇಬಿನಲ್ಲಿರಿಸಿ, ನಂತರ ಕಸದ ತೊಟ್ಟಿಗೆ ಹಾಕಿದ ಉದಾಹರಣೆಗಳು ಕೂಡ ಸಾಕಷ್ಟಿದೆ.ಸದ್ಯ ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಪ್ರಧಾನಿ ಆಗಮನಕ್ಕೆ ಸಕಲ ಸಿದ್ಧತೆ: ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್​ ವೇದಿಕೆ ನಿರ್ಮಾಣ

    ನೀರಲ್ಲಿ ಕೊಚ್ಚಿಹೋಯ್ತು ಬದುಕು, ವಾರದಿಂದ ಮುಂದುವರಿದ ಪ್ರವಾಹಕ್ಕೆ ಮೂರು ರಾಜ್ಯಗಳ ಜನರು ತತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts