More

    3 ಹೊಸ ಶಾಲಾ ಕೊಠಡಿ ಮಂಜೂರಿ

    ಸಂಶಿ: ಸಮೀಪದ ಚಾಕಲಬ್ಬಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೆ. ಸ್ವರೂಪ ಗ್ರಾಮದಲ್ಲಿ ನೀರಿನ ಸಮಸ್ಯೆ ಹಾಗೂ ಸ.ಹಿ.ಪ್ರಾ. ಶಾಲಾ ಕೊಠಡಿ ವೀಕ್ಷಣೆ ಮಾಡಿದರು.

    ಶಿಥಿಲಾವಸ್ಥೆಯಲ್ಲಿರುವ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿನ 4 ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಶಾಲೆಯಲ್ಲಿನ ಎಲ್ಲ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಇದರಿಂದಾಗಿ ಕಲಿಯುವ ಮಕ್ಕಳಿಗೆ ತೊಂದರೆಯಾಗಬಾರದೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕೋಲ್ ಇಂಡಿಯಾದಡಿ 13.90 ಲಕ್ಷ ರೂ. ಅನುದಾನದಲ್ಲಿ ಹೊಸದಾಗಿ 3 ಕೊಠಡಿಗಳು ಮಂಜೂರಾಗಿದ್ದು, ಹಳೆಯ ಕಟ್ಟಡ ತೆಗೆದು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಮಕ್ಕಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ತಾಪಂ ಇಒ ಮಹೇಶ ಕುರಿ ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿ ವಿದ್ಯಾವತಿ ಕುಂದರಗಿ ಅವರಿಗೆ ಆದೇಶಿಸಿದರು.

    ನೀರಿನ ಸಮಸ್ಯೆ ಕುರಿತು ಈಗಾಗಲೇ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಮೂಲಕ ನನ್ನ ಗಮನಕ್ಕೆ ತಂದಿದ್ದಾರೆ. ಹೊಸ ಬೋರವೆಲ್ ಕೊರೆಸಲು ಪಾಯಿಂಟ್ ಗುರುತಿಸುತ್ತಿದ್ದು, ಶೀಘ್ರದಲ್ಲೇ ಬೋರ್‌ವೆಲ್ ಕೊರೆಸಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.

    ಗ್ರಾಪಂ ಅಧ್ಯಕ್ಷೆ ಕಾವ್ಯಾ ಬಾರಕೇರ, ಉಪಾಧ್ಯಕ್ಷೆ ರೇಣುಕಾ ಮುದೇನಾಯ್ಕರ, ಸದಸ್ಯರಾದ ಗುರುನಾಥ ಹೊನ್ನಿಹಳ್ಳಿ, ವಿಠ್ಠಲ ಘಾಟಗೆ, ಟೋಪಣ್ಣ ಕಟಗಿ, ಅಂಜುಮಾ ನದಾಫ್, ದೇವಕ್ಕ ಕಾಳಿ, ಎಸ್‌ಡಿಎಂಸಿ ಅಧ್ಯಕ್ಷ ಮಾಲತೇಶ ಹೊನ್ನಿಹಳ್ಳಿ, ಪರಶುರಾಮ ಮೋರೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts