More

    ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಕೊನೇ ಪರೀಕ್ಷೆ ಮುಂದೂಡಿಕೆ; ಏಪ್ರಿಲ್​ 1ರ ನಂತರ ಹೊಸ ದಿನಾಂಕ ಘೋಷಣೆ

    ಬೆಂಗಳೂರು: ಕರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್​-19 ಬಾಧಿತ ರಾಜ್ಯದ 9 ಜಿಲ್ಲೆಗಳನ್ನು ಲಾಕ್​​​ಡೌನ್​ ಮಾಡಲಾಗಿದೆ.

    ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮಾ.27ರಿಂದ ನಡೆಯಬೇಕಿದ್ದ ಎಸ್​ಎಸ್​ಎಲ್​​ಸಿ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ಯಾವಾಗ ಎಸ್​​ಎಸ್​ಎಲ್​​​ಸಿ ಪರೀಕ್ಷೆಗಳು ನಡೆಯಲಿವೆ ಎಂಬುದನ್ನು ಮಾ.31ರ ನಂತರ ಘೋಷಿಸಲಾಗುವುದು ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಗ್ಗೆ ಘೋಷಿಸಿದ್ದಾರೆ.

    ಹಾಗೇ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆ (ಮಾ.23) ನಡೆಬೇಕಿದ್ದ ಕೊನೇ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್​ ಕುಮಾರ್ ತಮ್ಮ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    9 ಜಿಲ್ಲೆಗಳು ಮಾರ್ಚ್​ 31ರವರೆಗೂ ಸಂಪೂರ್ಣ ಬಂದ್​ ಆಗಲಿವೆ. ಸಾರಿಗೆ ವ್ಯವಸ್ಥೆ ಕಷ್ಟವಾಗುತ್ತದೆ. ಇದರಿಂದ ಬೇರೆ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಅಲ್ಲದೆ ಕರೊನಾ ವೈರಸ್​ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳಿಗೆ ನಾಳೆ ನಡೆಯಬೇಕಿದ್ದ ಕೊನೆಯ ಇಂಗ್ಲಿಷ್​ ಪರೀಕ್ಷೆಯನ್ನು ಮುಂದೂಡಿದ್ದೇವೆ. ಏಪ್ರಿಲ್ 1ರನಂತರ ಪರೀಕ್ಷಾ ದಿನಾಂಕ ಘೋಷಿಸಲಾಗುವುದು ಎಂದಿದ್ದಾರೆ.

    ಎರಡನೇ ಪಿಯುಸಿಯ ಕೊನೆಯ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ನನ್ನ ಹೇಳಿಕೆ.

    Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮಾರ್ಚ್ 22, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts