More

    2022 ರೊಳಗೆ ವಿದ್ಯುದೀಕರಣ, ಡಬ್ಲಿಂಗ್

    ಹುಬ್ಬಳ್ಳಿ /ದಾವಣಗೆರೆ: 2022ರ ವೇಳೆಗೆ ದೇಶದ ಎಲ್ಲ ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ಡಬ್ಲಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯಿದೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಸಿ.ಅಂಗಡಿ ಹೇಳಿದರು.

    ಅವರು ಶುಕ್ರವಾರ ರೈಲಿನಲ್ಲಿ ಪ್ರಯಾಣಿಸುತ್ತ ಹುಬ್ಬಳ್ಳಿ- ಬೆಂಗಳೂರು ಮಾರ್ಗ ಮಧ್ಯೆ ಪರಿಶೀಲನೆ ನಡೆಸಿದರು.

    ಮೀರಜ್-ಬೆಂಗಳೂರು ಮಾರ್ಗದ ಡಬ್ಲಿಂಗ್ ಕಾಮಗಾರಿಯನ್ನು ನಿಗದಿತ ಗಡುವಿನೊಳಗೆ ಮುಗಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

    ಕೋಲ್ಕತ್ತ-ಮುಂಬೈ ನಡುವೆ ಸರಕುಗಳ ಆಮದು-ರಫ್ತು ಉದ್ದೇಶಕ್ಕೆ ಮೀಸಲಾದ ಮಾರ್ಗವನ್ನು ಪೂರ್ಣಗೊಳಿಸುವ ಉದ್ದೇಶವಿದೆ. ಅಂಕೋಲಾ ಹುಬ್ಬಳ್ಳಿ ನಡುವಿನ ಮಾರ್ಗದ ಡಬ್ಲಿಂಗ್ ವಿಚಾರವಾಗಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತಿದ್ದಂತೆಯೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಸುರಕ್ಷತೆ, ಸಮಯ ಪಾಲನೆ ಮತ್ತು ಸ್ವಚ್ಛತೆಗೆ ಇಲಾಖೆ ಆದ್ಯತೆ ನೀಡಿದೆ. ಈ ಹಿಂದೆ ರೈಲು ನಿಲ್ದಾಣಗಳಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು. ಪ್ರಧಾನಿ ಮೋದಿ ಅವರ ಆಸಕ್ತಿಯ ಫಲವಾಗಿ ಈಗ ಎಲ್ಲ ನಿಲ್ದಾಣಗಳೂ ಸ್ವಚ್ಛವಾಗಿವೆ.

    ರೈಲ್ವೆ ನಿಮ್ಮ ಆಸ್ತಿಯಾಗಿದ್ದು ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಮಧ್ಯ ರಾತ್ರಿ ಒಂದು ರೈಲು ಸಂಚಾರ ಪ್ರಾರಂಭಿಸುವ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸಚಿವರು, ಶುಕ್ರವಾರದಿಂದಲೇ ರೈಲು ಸಂಚಾರ ಪ್ರಾರಂಭಿಸುವಂತೆ ಸೂಚಿಸಿದರು.

    ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್ ಅವರೊಂದಿಗೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್, ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶೋಕಕುಮಾರ ವರ್ವ ಹಾಜರಿದ್ದರು.

    ಮನವಿ ಬಂದರೆ ರೈಲು ಸಂಚಾರ ಆರಂಭ

    ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದರೆ ರೈಲು ಸಂಚಾರ ಪುನರಾರಂಭಿಸಲು ಸಿದ್ಧ ಎಂದು ಸಚಿವ ಸುರೇಶ ಸಿ. ಅಂಗಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಇರುವುದರಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಇದರ ಜತೆಗೆ ದೇಶದ ಆರ್ಥಿಕತೆಯೂ ಬೆಳೆಯಬೇಕಿದೆ ಎಂದರು. ಪ್ರಸ್ತುತ ಶ್ರಮಿಕ ರೈಲಿನಲ್ಲಿ ಕಾರ್ವಿುಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ರೈಲುಗಳು ವಾಪಸ್ ಖಾಲಿ ಹೋಗುತ್ತಿವೆ. ನಮ್ಮ ಕಾರ್ವಿುಕರನ್ನು ನಮ್ಮ ರಾಜ್ಯದಲ್ಲಿಯೇ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಅವರಿಗೆ ಆದ್ಯತೆಯ ಮೇಲೆ ಕೆಲಸ ನೀಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts