More

    2.87 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ; ಈ ವರ್ಷದ ಕೇಂದ್ರ ಸರ್ಕಾರದ ಮೊದಲ ಕಂತು ಬಿಡುಗಡೆ

    ತುಮಕೂರು : ಕರೊನಾ ಸಂಕಷ್ಟದ ಸಂದರ್ಭದಲ್ಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ 2,87,840 ರೈತರ ಖಾತೆಗೆ ಈ ವರ್ಷದ ಮೊದಲ ಕಂತಿನ ರೂಪದಲ್ಲಿ 57.56 ಕೋಟಿ ರೂ. ವರ್ಗಾವಣೆಯಾಗಿದೆ. ಸಣ್ಣ ಹಿಡುವಳಿದಾರ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಪಾಯಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂ., ನೀಡುತ್ತಿದ್ದು ರಾಜ್ಯದ ಮೊದಲ ಕಂತಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

    ಕೇಂದ್ರ ಸರ್ಕಾರವು 2019ರ ಫೆ.1ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಘೋಷಿಸಿದ್ದು, ಮಾರ್ಚ್ 2021ಕ್ಕೆ 7ನೇ ಕಂತು ಬಿಡುಗಡೆ ಮಾಡಲಾಗಿತ್ತು. ವರ್ಷಕ್ಕೆ 6 ಸಾವಿರ ರೂ.,ಗಳನ್ನು ಪ್ರತೀ 4 ತಿಂಗಳಿಗೊಮ್ಮೆ 3 ಸಮಾನ ಕಂತುಗಳಲ್ಲಿ ನೀಡಲಾಗುತ್ತಿದ್ದು, ಜನತಾಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ವರ್ಷದ ಮೊದಲ ಕಂತು ಬಿಡುಗಡೆ ಮಾಡಿದೆ.

    2.87 ಲಕ್ಷ ರೈತರಿಗೆ ನೆರವು: ಜಿಲ್ಲೆಯಲ್ಲಿ 2, 87,840 ರೈತರು ಈ ಯೋಜನೆ ಅಡಿ ಫಲಾನುಭವಿಗಳಾಗಿದ್ದು, ಈ ವರ್ಷದ ಮೊದಲ ಕಂತಿನ ರೂಪದಲ್ಲಿ 57,56,80,000 ರೂ.,ಗಳು ಈಗಾಗಲೇ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗಿದೆ.

    5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 1 ವರ್ಷಕ್ಕೆ 6 ಸಾವಿರ ರೂ.,ಗಳನ್ನು ಪ್ರತೀ 4 ತಿಂಗಳಿಗೊಮ್ಮೆ 3 ಸಮಾನ ಕಂತುಗಳಲ್ಲಿ ನೀಡಲಾಗುತ್ತಿದೆ. ಇದರ ಜತೆಗೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ 4 ಸಾವಿರ ರೂ.,ಗಳನ್ನು ಸಣ್ಣ, ಅತಿಸಣ್ಣ ರೈತರಿಗೆ ನೀಡುತ್ತಿದೆ. ಈ ವರ್ಷದ ರಾಜ್ಯದ ಪಾಲಿನ 4 ಸಾವಿರ ರೂ.,ಗಳ ಮೊದಲ ಕಂತು 2 ಸಾವಿರ ರೂ.,ಗಳನ್ನು ಸದ್ಯದ ಕರೊನಾ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಬಿಡುಗಡೆ ಮಾಡಲಿದೆ.

    ಜಿಲ್ಲೆಯಲ್ಲಿ 3 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ನೋಂದಾಯಿಸಿಕೊಂಡಿದ್ದಾರೆ. 2.87 ಲಕ್ಷ ರೈತರಿಗೆ ಈ ವರ್ಷದ ಮೊದಲ ಕಂತನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ಉಳಿದ ರೈತರ ಆಧಾರ್ ಜೋಡಣೆಯಲ್ಲಿ ಸಮಸ್ಯೆ ಆಗಿದ್ದು ಎಲ್ಲ ಅರ್ಹರನ್ನೂ ಯೋಜನೆ ವ್ಯಾಪ್ತಿಗೆ ತರಲಾಗುವುದು.
    ಎಂ.ಎನ್.ರಾಜಸುಲೋಚನಾ ಜಂಟಿ ನಿರ್ದೇಶಕರು, ಕೃಷಿ ಇಲಾಖೆ

    ಕಿಸಾನ್ ಸಮ್ಮಾನ್ ಯೋಜನೆಯ 8ನೇ ಕಂತು 2 ಸಾವಿರ ರೂ., ನನ್ನ ಖಾತೆಗೆ ವರ್ಗಾವಣೆಯಾಗಿರುವ ಮೆಸೇಜ್ ಮೊಬೈಲ್‌ಗೆ ಬಂದಿದೆ. ಕೇಂದ್ರ ಸರ್ಕಾರದ ಈ ಯೋಜನೆ ನೆರವಿಗೆ ಬರಲಿದೆ. ರಾಜ್ಯ ಸರ್ಕಾರ 4 ಸಾವಿರ ರೂ., ನೀಡಲಿದ್ದು, ಅದರ ಮೊದಲ ಕಂತು ಇನ್ನೂ ಬಂದಿಲ್ಲ.
    ದೇವರಾಜಪ್ಪ, ಪಟ್ಟನಾಯಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts