More

    ಹಿರಿಯ ನಾಗರಿಕರಿಂದ ಸಸಿ ನೆಡುವ ಕಾರ್ಯಕ್ರಮ

    ವಿಜಯಪುರ: ಇಲ್ಲಿನ ಕನಕದಾಸ ಬಡಾವಣೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರು ಶುಕ್ರವಾರ ಸಸಿ ನೆಡುವ ಮೂಲಕ ಸರಳವಾಗಿ ಕಾರ್ಯಕ್ರಮ ಆಚರಿಸಿದರು.
    ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶ್ರೀಶೈಲ ಸಜ್ಜನ ಮಾತನಾಡಿ, ನೈಸರ್ಗಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಪರಿಸರ ರಕ್ಷಣೆ ಮಾಡಬೇಕಿದೆ. ಇಂದಿನ ಪೀಳಿಗೆ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಔಷಧ ಗುಣವುಳ್ಳ ಸಸ್ಯಗಳನ್ನು ಬೆಳೆಸಬೇಕಿದೆ. ಅವುಗಳನ್ನು ಆಹಾರವಾಗಿ, ಕಷಾಯವಾಗಿ ಸೇವಿಸಿದಾಗ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
    ನಿವೃತ್ತ ದೈಹಿಕ ಶಿಕ್ಷಕ ಗುರುನಾಥ ಬಾಗೇವಾಡಿ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರು ಬಸವಣ್ಣ ನಂತರದ ಮಹಾನ್ ಪುರುಷರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅನುಸರಿಸಬೇಕು ಎಂದರು.
    ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಮಾತನಾಡಿ, ಸಿರಿಧಾನ್ಯಗಳ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.
    ನಿವೃತ್ತ ಅರಣ್ಯಾಧಿಕಾರಿ ಮಹೇಶ ಕ್ಯಾತನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಯೋಧ ಶರಣಗೌಡ ಪಾಟೀಲ, ಡಾ.ಗುಬ್ಬೇವಾಡಿ, ಕೆ.ಸುನಂದಾ ಬಡಿಗೇರ, ಪ್ರಭು ಹಡಪದ, ನಾಗರಾಜ ಚಿಂತಪಲ್ಲಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts