More

    ಸಮಾಜ ಸೇವೆ ಮಾಡುವವರನ್ನು ಪ್ರೋತ್ಸಾಹಿಸಿ

    ಕೆ.ಆರ್.ನಗರ: ಸಮಾಜ ಸೇವೆ ಮಾಡುವವರನ್ನು ಕೇವಲ ರಾಜಕೀಯ ಮತ್ತು ಜಾತಿಯಿಂದ ನೋಡದೆ ಅವರು ಮಾಡುವ ಉತ್ತಮ ಕೆಲಸ ಕಾರ್ಯಗಳನ್ನು ನೋಡಿ ಬೆಂಬಲಿಸಬೇಕು ಎಂದು ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ವಿಜಯ್‌ಕುಮಾರ್ ಹೇಳಿದರು.


    ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾ.ರಾ.ಸ್ನೇಹ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು. ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಸಾ.ರಾ.ಸ್ನೇಹ ಬಳಗದ ಮೂಲಕ ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್, ಉಚಿತ ಆಂಬುಲೆನ್ಸ್, ಅಂಗವಿಕಲ ಮಕ್ಕಳಿಗೆ ಉಚಿತ ವಿಮೆ, ಬಡವರಿಗೆ ಆರ್ಥಿಕ ಸಹಾಯ ಸೇರಿದಂತೆ ಹತ್ತಾರು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.


    ಪಾಂಶುಪಾಲ ಡಾ.ಬಿ.ಟಿ.ವಿಜಯ್ ಮಾತನಾಡಿ, ಶಾಸಕರ ನಿರಂತರ ಶ್ರಮದಿಂದ ನಮ್ಮ ಕಾಲೇಜು ಕೆಲವೇ ವರ್ಷಗಳಲ್ಲಿ ಅತ್ಯಧಿಕ ವಿದ್ಯಾರ್ಥಿನಿಯರನ್ನು ಹೊಂದುವ ಮೂಲಕ ಮಾದರಿಯಾಗಿದೆ. ಉನ್ನತ ವಿದ್ಯಾಭ್ಯಾಸದ ಕೋರ್ಸ್‌ಗಳು ಇಲ್ಲದಿದ್ದರೆ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಬೇರೆಡೆ ಹೋಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಕಾಲೇಜಿಗೆ ಫೆಬ್ರವರಿ 2,3 ರಂದು ನ್ಯಾಕ್ ಕಮಿಟಿ ಭೇಟಿ ನೀಡಲಿದ್ದು ಉತ್ತಮ ಗ್ರೇಡ್ ಸಿಗುವ ಭರವಸೆ ಇದೆ ಎಂದರು.


    ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಶೋಭಾ ವೃಷಿಕೇಶ್, ಸಾ.ರಾ.ಜಯಂತ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೆ.ಟಿ.ರಮೇಶ್, ಸದಸ್ಯೆ ರೂಪಾ ಸತೀಶ್, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಸಾ.ರಾ.ಸ್ನೇಹ ಬಳಗದ ಕಾರ್ಯದರ್ಶಿ ಸಿ.ಜೆ.ಆನಂದ್, ಸದಸ್ಯರಾದ ಮಹೇಶ್, ಮುಖಂಡರಾದ ಎಚ್.ಪಿ.ಶಿವಣ್ಣ, ಹಂಪಾಪುರ ಸುರೇಶ್, ಜಗದೀಶ್, ಮಹದೇವ್, ನವಾಜ್, ಕೆ.ಎಸ್.ನಾಗೇಶ್, ಪ್ರಾಧ್ಯಪಕರಾದ ವಿಜಯ್, ಸಿ.ಆರ್.ಸುನೀಲ್, ಡಾ.ಶೃತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts