More

    ಸಂಸ್ಕೃತಿ ರಕ್ಷಣೆ ಇಂದಿನ ಅಗತ್ಯ

    ಗೋಕರ್ಣ: ಈ ದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಎಷ್ಟೆಷ್ಟೋ ಅಡ್ಡಾದಿಡ್ಡಿ ಕಾರ್ಯಗಳಾಗಿವೆ. ಸಮುದಾಯ ಭವನ, ಕಲ್ಯಾಣ ಮಂಟಪ, ದೊಡ್ಡ ದೊಡ್ಡ ಬಿಲ್ಡಿಂಗ್ ಮುಂತಾದವುಗಳ ನಿರ್ವಣವೇ ಅಭಿವೃದ್ಧಿ ಎಂಬ ತಪ್ಪು ಕಲ್ಪನೆ ನಮ್ಮಿಂದ ಮೊದಲು ದೂರಾಗಬೇಕು. ಜಗತ್ತಿಗೆ ಮಾದರಿಯಾಗಿದ್ದ ಈ ದೇಶದ ಸಂಸ್ಕೃತಿಯನ್ನು ರಕ್ಷಿಸಿ ಕಾಪಾಡಬಲ್ಲ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

    ಯಂಗ್ ಸ್ಟಾರ್ ಕ್ಲಬ್ ವತಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ಪಂಚಾಯಿತಿ ಸಹಯೋಗದಲ್ಲಿ ರಥಬೀದಿಯಲ್ಲಿ ನಿರ್ವಿುಸಿರುವ ಶುದ್ಧ ಕುಡಿಯುವ ನೀರು ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸದ ಕಣ್ಣು ತೆರೆಯುವ ಮೊದಲೇ ಲೋಕಕ್ಕೆ ಜ್ಞಾನವನ್ನು ಧಾರೆ ಎರೆದ ಕ್ಷೇತ್ರ ಗೋಕರ್ಣ. ಇಲ್ಲಿ ಬುದ್ಧಿಯಿದೆ, ಶಕ್ತಿಯಿದೆ, ಅದಕ್ಕೆ ತಕ್ಕ ಯುಕ್ತಿಯೂ ಇದೆ. ಆದರೆ, ಸಂಘಟನೆ ಮತ್ತು ಸಮುದಾಯ ಭಾಗಿತ್ವದ ಕೊರತೆಯಿತ್ತು. ಅದನ್ನು ಇಂಥ ಅನೇಕ ಜನೋಪಯೋಗಿ ಕೆಲಸಗಳಿಂದ ಯಂಗ್​ಸ್ಟಾರ್ ಕ್ಲಬ್​ನಂಥ ಯುವಕರು ಈಗ ದೂರ ಮಾಡಿ ಗೋಕರ್ಣದ ಸಂಸ್ಕೃತಿ ರಕ್ಷಿಸಬಲ್ಲ ಅಭಿವೃದ್ಧಿಗೆ ಶ್ರೀಕಾರ ಬರೆದಿದ್ದಾರೆ ಎಂದರು.

    ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ವಿುಸಿಕೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಸಾದ ಅವರನ್ನು ಸಂಸದರು ಗೌರವಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮಿ ಭಡ್ತಿ, ಉಪಾಧ್ಯಕ್ಷ ಶೇಖರ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಡಾ.ಎಸ್.ವಿ. ಜಠಾರ, ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಇತರರಿದ್ದರು. ಕ್ಲಬ್​ನ ಅಧ್ಯಕ್ಷ ನಾಗಕುಮಾರ ಗೋಪಿ, ಮಹೇಶ ಹಿರೇಗಂಗೆ, ಗಣೇಶ ಡಿ. ಅಡಿ, ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಜೋಗಭಟ್ಟ, ರವಿ ಸೂರಿ, ಇತರರು ಇದ್ದರು.

    ಅನಂತ ಅಡಿ ಕಾರ್ಯಕ್ರಮ ನಿರ್ವಹಿಸಿದರು.

    ಗಾಯತ್ರಿ ಮಂದಿರಕ್ಕೆ ಭೂಮಿ ಪೂಜೆ

    ಯಂಗ್​ಸ್ಟಾರ್ ಕ್ಲಬ್ 30 ಲಕ್ಷ ರೂ. ವೆಚ್ಚದಲ್ಲಿ ಜೀಣೋದ್ಧಾರ ಮಾಡಿರುವ ಪುರಾಣ ಖ್ಯಾತ ಗಾಯತ್ರಿ ತೀರ್ಥದಲ್ಲಿ ನಿರ್ವಿುಸಲಾಗುವ ಗಾಯತ್ರಿ ಮಾತಾ ಮಂದಿರಕ್ಕೆ ಸಂಸದ ಅನಂತಕುಮಾರ್ ಹೆಗಡೆ ಭೂಮಿ ಪೂಜೆ ನೆರವೇರಿಸಿದರು. ವೇ. ಗಣಪತಿ ಗಜಾನನ ಹಿರೇ, ವೇ.ನಿರಂಜನ ಜೋಶಿ, ವೇ. ಗಣೇಶ ಜೋಶಿ, ಇತರರು ಪೂಜೆ ನಿರ್ವಹಿಸಿದರು.

    =

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts