More

    ಶ್ರದ್ಧಾ ಭಕ್ತಿಯ ಅಯ್ಯಪ್ಪ ಮಹೋತ್ಸವ

    ವಿರಾಜಪೇಟೆ: ವಿರಾಜಪೇಟೆ ಬೇಟೋಳಿ ರಾಮನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಅಯ್ಯಪ್ಪ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

    ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ನಡೆದವು. ನೂತನ ಪಾಕ ಶಾಲೆಯಲ್ಲಿ ಗಣಪತಿ ಹೋಮ ನಡೆಯಿತು. ತದನಂತರ ಧರ್ಮಶಾಸ್ತನಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬೇಟೋಳಿ ಮಹಿಳಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ಜರುಗಿತು. ಅಪರಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನ ಸಂತರ್ಪಣ ಸೇವೆ ನಡೆಯಿತು. ಸಂಜೆ ಅಯ್ಯಪ್ಪ ಭಕ್ತರಿಂದ ಭಜನೆ ಹಾಗೂ ಮಕರ ಜ್ಯೋತಿ ಪೂಜೆ ನೆರವೇರಿಸಲಾಯಿತು.

    ಪೂಜಾ ಕಾರ್ಯಕ್ರಮದ ನಂತರ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಸಂತ ನಾಯಕ್, ಇಂತಹ ಕಾರ್ಯಕ್ರಮಗಳು ಪ್ರಸ್ತುತ ಅಗತ್ಯವಿದೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು. ಮುಂದಿನ ಪೀಳಿಗೆಗೆ ಇದು ದಾರಿಯಾಗಬೇಕು. ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.

    ವೇದಿಕೆಯಲ್ಲಿ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಡಾ.ರಾಮಕೃಷ್ಣ ಬೋರ್ಕರ್, ಉಪಾಧ್ಯಕ್ಷ ನಂದ ಬಿ.ಜಿ, ಕಾರ್ಯದರ್ಶಿ ಸುಮನ ಉಪಸ್ಥಿತರಿದ್ದರು.

    ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಹ್ಲಾದ ಆಚಾರ್ಯ ನಡೆಸಿಕೊಟ್ಟ ಮಾತನಾಡುವ ಗೊಂಬೆ ಹಾಗೂ ನೆರಳಿನಾಟ ಪ್ರೇಕ್ಷಕರ ಗಮನ ಸೆಳೆಯಿತು. ಪುತ್ತೂರು ಸಾರಸ್ವತ ಸಂಘದ ಪಧಾದಿಕಾರಿಗಳಾದ ರಮೇಶ್ ಪ್ರಭು, ಹರೀಶ್ ಬೋರ್ಕರ್ ಮತ್ತು ಸುನಿಲ್ ಬೋರ್ಕರ್, ಹೇಮಲತಾ ಬೋರ್ಕರ್, ಚಂದ್ರಶೇಖರ್ ಭಟ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts