More

    ಶೇಂಗಾ, ಹತ್ತಿಗೆ ಬೆಂಬಲ ಬೆಲೆ ನಿಗದಿಪಡಿಸಿ

    ಕುಂದಗೋಳ: ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಶೇಂಗಾ, ಹತ್ತಿ ಬೆಳೆಗಳಿಗೆ ಬೆಂಬಲ ನಿಗದಿ ಪಡಿಸಿ, ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ತಾಲೂಕು ಬೆಳೆರಕ್ಷಕ ರೈತರ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್- 2 ತಹಸೀಲ್ದಾರ್ ವಿ.ಎ. ಮುಳಗುಂದಮಠ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲ ಬೆಳೆಗಳು ಹಾನಿಗೊಳಗಾಗಿವೆ. ಅಳಿದುಳಿದ ಶೇಂಗಾ, ಹತ್ತಿ ಬೆಳೆ ರೈತರ ಕೈಗೆ ಬರಲಿದೆ. ಹೀಗಾಗಿ ಮೊದಲೇ ಬೆಂಬಲ ಬೆಲ ನಿಗದಿ ಮಾಡಿ ಖರೀದಿ ಕೇಂದ್ರ ತೆರೆಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

    ಗ್ರೇಡ್- 2 ತಹಸೀಲ್ದಾರ್ ವಿ.ಎ. ಮುಳಗುಂದಮಠ ಮನವಿ ಸ್ವೀಕರಿಸಿ, ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ಸರ್ಕಾರ ಮುಂದಾಗಿದೆ. ಉಳಿದ ಬೆಳೆಗಳಾದ ಶೇಂಗಾ, ಹತ್ತಿ ಬೆಳೆ ಖರೀದಿ ಕೇಂದ್ರ ತೆರೆಯುವ ಕುರಿತು ಮೇಲಧಿಕಾರಿಗಳಿಗೆ ತಮ್ಮ ಮನವಿಯನ್ನು ಕಳುಹಿಸಲಾಗುವುದು ಎಂದರು.

    ಮನವಿ ಸಲ್ಲಿಸುವಾಗ ಬೆಳೆ ರಕ್ಷಕ ರೈತ ಸಂಘ ಅಧ್ಯಕ್ಷ ಸೋಮರಾವ್ ದೇಸಾಯಿ, ಗಂಗಾಧರ ಪಾಣಿಗಟ್ಟಿ, ನಾಗರಾಜ ದೇಶಪಾಂಡೆ, ಬಾಬಾಜಾನ ಮುಗಲಾನಿ, ಪರುಶರಾಮ ಕಲಾಲ, ಬಸವರಾಜ ಬಳ್ಳಾರಿ, ವಸಂತ ಶಿಂಧೆ, ಶಾಮರಾವ್ ಪವಾರ, ಬಾಬೂಲಿ ಮತ್ತೇಖಾನವರ, ಬಿ.ಆರ್. ಪಾಟೀಲ, ಸಿದ್ದಣ್ಣ ಇಂಗಳಹಳ್ಳಿ, ಕಲ್ಲಪ್ಪ ಉಗರಗೋಳ, ಸುಲೇಮಾನ್ ಜಾತಗೇರ, ಶಂಕ್ರಪ್ಪ ಹಡಪದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts