More

    ಶಿಶುಪಾಲನಾ ಕೇಂದ್ರಗಳನ್ನು ಮುಂದುವರಿಸಿ -ಸುವರ್ಣ ಕರ್ನಾಟಕ ವೇದಿಕೆ ಮನವಿ ಸಲ್ಲಿಕೆ 

    ದಾವಣಗೆರೆ: ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ನಡೆಸುತ್ತಿರುವ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆ ಸಂಘಟನೆ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಕಾರ್ಮಿಕ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
    ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾರ್ಮಿಕ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನಡೆಯುತ್ತಿರುವ ಶಿಶುಪಾಲನಾ ಕೇಂದ್ರಗಳನ್ನು ಎನ್‌ಜಿಒಗಳ ನಿರ್ವಹಣೆಯಲ್ಲಿವೆ, ಆದರೆ ಕೆಲವೆಡೆ ಈ ಕೇಂದ್ರಗಳಿಗೆ ಬಾಡಿಗೆ ಬರುತ್ತಿಲ್ಲ. ಕೆಲವೆಡೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ಕೂಡ ಪೂರೈಕೆಯಾಗುತ್ತಿಲ್ಲ ಎಂದು ಸುವರ್ಣ ಕರ್ನಾಟಕ ವೇದಿಕೆ ಅಧ್ಯಕ್ಷ ಸಂತೋಷ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
    ಮಂಡಳಿ ವತಿಯಿಂದ ಆರಂಭಿಸಲಾದ ಶಿಶುಪಾಲನಾ ಕೇಂದ್ರಗಳಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ 2ರಿಂದ 5 ವರ್ಷದೊಳಗಿನ ಮಕ್ಕಳಿಗೆ ಉತ್ತಮ ಶಿಕಣ ಕಲ್ಪಿಸಲಾಗುತ್ತಿದೆ. ಆದರೆ ಅಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು, ಆಯಾಗಳಿಗೆ ಕೆಲ ತಿಂಗಳ ವೇತನ ಬರುತ್ತಿಲ್ಲ ಎಂದು ದೂರಿದರು.
    ಕೂಡಲೆ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚದೆ ಯಥಾರೀತಿ ನಡೆಸಬೇಕು. ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎನ್. ಪರಶುರಾಂ, ಮಂಜುಳಾ, ಫಾತಿಮಾ, ಎ. ದಿವ್ಯಾ, ರುಕ್ಮಿಣಿ, ಎಸ್.ಉಮಾ, ಯಾಸ್ಮಿನ್. ಮೇಘನಾ, ಜ್ಯೋತಿ, ಶ್ರುತಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts