More

    ಶಾಸಕ ಎಂ.ಬಿ. ಪಾಟೀಲರ ಸಲಹೆಗೆ ಸ್ಪಂದನೆ, ಗ್ರಾಮ ಮಟ್ಟದಲ್ಲಿ ಸಕ್ರಿಯಗೊಂಡ ಕಾರ್ಯಪಡೆ, ಮನೆ-ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ

    ವಿಜಯಪುರ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು ಹಾಗೂ ಸಾವಿನ ಪ್ರಮಾಣ ತಡೆಯುವ ಬಗ್ಗೆ ಶಾಸಕ ಡಾ.ಎಂ.ಬಿ. ಪಾಟೀಲ ನೀಡಿದ ಸಲಹೆ ಸೂಚನೆಗಳು ಎರಡೇ ದಿನದಲ್ಲಿ ಅನುಷ್ಟಾನಕ್ಕೆ ಬಂದಿದ್ದು, ಸೋಮವಾರದಿಂದಲೇ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಿಸಲಾಗುತ್ತಿದೆ.
    ಶನಿವಾರವಷ್ಟೇ ಶಾಸಕ ಎಂ.ಬಿ. ಪಾಟೀಲ ಜಿಲ್ಲಾಡಳಿತ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗ್ರಾಮೀಣ ಭಾಗದ ಜನರ ಸಾವು-ನೋವಿನ ಬಗ್ಗೆ ಗಮನ ಸೆಳೆದಿದ್ದರು. ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯನ್ನು ಎಚ್ಚರಿಸಿದ್ದರು. ಇದೀಗ ಗ್ರಾಮ ಮಟ್ಟದ ಕಾರ್ಯಪಡೆ ಮೂಲಕ ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
    ಕರೊನಾ ಹೆಮ್ಮಾರಿ ಹಳ್ಳಿ ಹಳ್ಳಿಗಳನ್ನು ತಲುಪಿದೆ. ಅಲ್ಲಿನ ಜನ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದೇ ಸಾವಿಗೀಡಾಗುತ್ತಿದ್ದಾರೆ. ಈ ಸಾವಿನ ವರದಿಯೂ ಸಮಪರ್ಕವಾಗಿ ದಾಖಲಾಗುತ್ತಿಲ್ಲ ಎಂದು ಎಂ.ಬಿ. ಪಾಟೀಲ ತಮ್ಮ ತವರೂರಾದ ತೊರವಿಯನ್ನು ಉದಾಹರಿಸಿದ್ದರು. ತೊರವಿಯಲ್ಲಿ 71 ಜನ ಸಾವಿಗೀಡಾಗಿದ್ದು ಅದರಲ್ಲಿ ಸುಮಾರು 41 ಜನ ತೀವ್ರ ಉಸಿರಾಟದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದರು. ಇದು ಒಂದೇ ಗ್ರಾಮದ ಸ್ಥಿತಿ ಹೀಗಿರುವಾಗ ಇಡೀ ಜಿಲ್ಲೆಯ ಎಲ್ಲ ಹಳ್ಳಿಗಳ ಸ್ಥಿತಿ ಹೇಗಿರಬಹುದು? ಎಂದು ಪ್ರಶ್ನಿಸಿದರು.
    ಅಲ್ಲದೇ, ಕರೊನಾ ಕಾಯಿಲೆ ಹರಡುವಿಕೆ ತಪ್ಪಿಸಲು ಜಿಲ್ಲಾಡಳಿತ ವತಿಯಿಂದ ಸ್ಥಳೀಯ ಗ್ರಾಪಂ ಸಹಯೋಗದಿಂದ ಮನೆ-ಮನೆ ಸಮೀಕ್ಷೆಯನ್ನು ನಡೆಸಿ, ವ್ಯಕ್ತಿವಾರು ಆರೋಗ್ಯ ಮಾಹಿತಿ ದಾಖಲಿಸಬೇಕು. ಅನಾರೋಗ್ಯ ಪೀಡಿತರ ಪಟ್ಟಿ ಸಿದ್ದಪಡಿಸಿ, ರೋಗಲಕ್ಷಣಗಳ ಅನುಸಾರ ಚಿಕಿತ್ಸಗೆ ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ತರುವುದು ಆರೋಗ್ಯ ಇಲಾಖೆಯಿಂದ ಅಗತ್ಯವಿದ್ದ ಆರ್‌ಟಿಪಿಸಿಆರ್ ತಪಾಸಣೆಗಳನ್ನು ಮಾಡುವುದು. ಎಲ್ಲ ಗ್ರಾಮಗಳನ್ನು ಸೈನಿಟೈಜೆಸನ್ ಮಾಡುವುದು. ಡಂಗುರ ಸಾರಿ ತಿಳುವಳಿಕೆ ಮೂಡಿಸಬೇಕೆಂದಿದ್ದರು. ಇದೀಗ ಆ ಕಾರ್ಯ ಕಾರ್ಯರೂಪಕ್ಕೆ ಬಂದಿದ್ದು ಹಳ್ಳಿಗರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ.
    ಈ ಬಗ್ಗೆ ‘ವಿಜಯವಾಣಿ’ಯೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಎಂ.ಬಿ. ಪಾಟೀಲ, ನಿಜಕ್ಕೂ ಹಳ್ಳಿಗಳ ಸ್ಥಿತಿ ಚಿಂತಾಜನಕವಾಗಿದೆ. ಹಳ್ಳಿಗರ ಆರೋಗ್ಯ ರಕ್ಷಣೆ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇದೊಂದು ಆರಂಭ ಶೂರತ್ವ ಆಗಬಾರದಷ್ಟೆ. ಪ್ರಾಮಾಣಿಕವಾಗಿ ನಡೆಯಲಿ. ಎಲ್ಲ ಶಾಸಕರು, ಜಿಪಂ ಮತ್ತು ತಾಪಂ ಮಾಜಿ ಸದಸ್ಯರು, ಗ್ರಾಪಂ ಹಾಲಿ ಸದಸ್ಯರು ಹಾಗೂ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಒಕ್ಕೋರಲಿನಿಂದ ಕರೊನಾ ವಿರುದ್ಧ ಹೋರಾಡಬೇಕು. ಅಂದಾಗ ಗ್ರಾಮೀಣರ ರಕ್ಷಣೆ ಸಾಧ್ಯ. ನನ್ನ ಸಲಹೆ ಪಾಲಿಸಿದ ಅಧಿಕಾರಿ ವರ್ಗಕ್ಕೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts