More

    ವೈದ್ಯರ ಸೇವಾಬದ್ಧತೆಗೆ ಜನರ ಸಹಕಾರ ಅಗತ್ಯ

    ರೋಣ: ಲಾಕ್​ಡೌನ್ ಉಲ್ಲಂಘಿಸಿದರೆ ಕರೊನಾ ಸೋಂಕಿಗೆ ಒಳಗಾಗಬೇಕಾಗುತ್ತದೆ. ವೈದ್ಯರಿಗೂ ಒತ್ತಡ ಹೆಚ್ಚಿಸಿದಂತಾಗುತ್ತದೆ ಎಂದು ಡಾ. ಶಶಿಧರ ಹಟ್ಟಿ ಹೇಳಿದರು.

    ಲಾಕ್​ಡೌನ್ ಅವಧಿಯಲ್ಲೂ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಖಾಸಗಿ ಕ್ಲಿನಿಕ್ ವೈದ್ಯರಿಗೆ ಮಂಗಳವಾರ ಟಾಸ್ಕ್ ಪೋರ್ಸ್ ಸಮಿತಿಯಿಂದ ತಾಲೂಕಿನ ಹಿರೇಹಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಬೇಕು. ಕರೊನಾ ತಡೆಗಟ್ಟಲು ಮನೆಯಲ್ಲಿಯೇ ಇರುವುದು ಬಹಳ ಮುಖ್ಯ. ಮನೆಗೆ ತೆರಳದೇ ನೂರಾರು ಸಿಬ್ಬಂದಿ ಆಸ್ಪತ್ರೆಯಲ್ಲಿಯೇ ಇದ್ದು ರೋಗಿಗಳನ್ನು ಗುಣಪಡಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರ ಸೇವಾಬದ್ಧತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಹೊರಗಿನಿಂದ ಬಂದವರ ಬಗೆಗೆ ಕೂಡಲೆ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕ್ವಾರಂಟೈನ್​ಗೆ ಒಳಪಡಿಸಲು ಸಹಕರಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷ ರಮೇಶ ಬೇವಿನಗಿಡದ, ಉಪಾಧ್ಯಕ್ಷೆ ಲಲಿತಾ ಕಲ್ಲನಗೌಡ್ರ, ಡಾ. ನಾಗರಾಜ ಜಾವೂರ, ಪಂಚಾಯಿತಿ ವಿಸ್ತೀರ್ಣಾಧಿಕಾರಿ ಬಿ.ಎಸ್. ದಳವಾಯಿ, ಆರೋಗ್ಯ ಸಹಾಯಕ ಸಿದ್ಧೇಶ ಎನ್.ಎಲ್., ಗ್ರಾಪಂ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts