More

    ವಿಶ್ವಾಸವಿದ್ದರೆ ಇನ್ನೊಮ್ಮೆ ಅವಕಾಶ ಒದಗಿಸಿ

    ಇಂಡಿ: ನಾನು ಐದು ವರ್ಷ ಸಕ್ಕರೆ ಕಾರ್ಖಾನೆ ನಡೆಸಿಕೊಂಡು ಬಂದಿದ್ದು ರೈತರಿಗೆ ತೃಪ್ತಿ ತಂದಿದ್ದರೆ ಮಾತ್ರ ನಮ್ಮ ಪೆನಲ್‌ಗೆ ಮತ ನೀಡಿ. ನಾನು ಕಾರ್ಖಾನೆಯನ್ನು ಭ್ರಷ್ಟಾಚಾರ ರಹಿತವಾಗಿ ನಡೆಸಿಕೊಂಡು ಹೋಗಿರುವ ವಿಶ್ವಾಸವಿದ್ದರೆ ನಮಗೆ ಇನ್ನೊಮ್ಮೆ ಅವಕಾಶ ನೀಡಿ. ಇಲ್ಲದಿದ್ದರೆ ನಮ್ಮನ್ನು ತಿರಸ್ಕರಿಸಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    2013ರ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿ ಕಬ್ಬು ನುರಿಸಲು ಪ್ರಾರಂಭಿಸಲಾಗಿದೆ. ಈಗ ಇಥೆನಾಲ್ ಘಟಕವನ್ನೂ ಸ್ಥಾಪಿಸಲಾಗುತ್ತಿದೆ. ಅಲ್ಲದೆ ಕಾರ್ಖಾನೆಗೆ ಸಾಲ ನೀಡಿದ ಬ್ಯಾಂಕ್‌ಗಳಿಗೆ ಪ್ರತಿವರ್ಷ ಮಾರ್ಚ್ 31 ರ ಒಳಗಾಗಿ ಕಂತು ಹಾಗೂ ಬಡ್ಡಿಯನ್ನು ನಿಯಮಿತವಾಗಿ ಕಟ್ಟಲಾಗುತ್ತಿದೆ. 184 ಎಕರೆ ಪ್ರದೇಶದಲ್ಲಿ 100 ವರ್ಷ ಬಾಳಿಕೆ ಬರುವ ಟರ್ಬೈನ್ ಅಳವಡಿಸಿ ಕಾರ್ಖಾನೆ ಕಟ್ಟಲಾಗಿದೆ. ಇದು ಮುಂದಿನ 100 ವರ್ಷ ಕೆಲಸ ಮಾಡುವಂತೆ ಕ್ರಮ ಜರುಗಿಸಲಾಗಿದೆ. ನನ್ನ ಶಕ್ತಿ ಮೀರಿ ಕಾರ್ಖಾನೆ ಕಟ್ಟಿದ್ದು, ಇದಕ್ಕೆ ಸಾಲ ಇದ್ದದ್ದು ನಿಜ. ರೈತರಿಗೆ ಎ್ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡುತ್ತಿದ್ದೇವೆ ಎಂದರು.

    ಈ ಕಾರ್ಖಾನೆಯನ್ನು ಷೇರುದಾರ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ. 1 ಸಾವಿರ ರೂ. ಷೇರಿನ ಬೆಲೆ ಇದೀಗ 1 ಲಕ್ಷ ರೂ. ಆಗಿದೆ. ರೈತರು ಸಹಕಾರ ನೀಡಿ ಸಂಪೂರ್ಣ ಬೆಳವಣಿಗೆಯಾದ ಕಬ್ಬನ್ನು ನೀಡಿದರೆ ರಿಕವರಿ ಹೆಚ್ಚಾಗಿ ಕಾರ್ಖಾನೆಗೆ ಲಾಭವಾಗುತ್ತದೆ ಎಂದರು.

    ಕಾರ್ಖಾನೆಗೆ ನಿರ್ದೇಶಕ ಮಂಡಳಿಗೆ 11 ರಂದು ಚುನಾವಣೆ ನಡೆಯಲಿದ್ದು, ಸಾಮಾನ್ಯ ‘ಅ’ ವರ್ಗಕ್ಕೆ 5 ಜನರನ್ನು ಆಯ್ಕೆ ಮಾಡಬೇಕಿದೆ. 8 ಜನ ಕಣದಲ್ಲಿದ್ದಾರೆ. ಇವರಲ್ಲಿ ನನ್ನನ್ನು ಸೇರಿ ಇನ್ನಿತರ ಅಭ್ಯರ್ಥಿಗಳಾದ ಬಸವರಾಜ ಸಿದ್ರಾಮಪ್ಪ ಧನಶ್ರೀ, ಮಲ್ಲನಗೌಡ ರಾಮಚಂದ್ರಗೌಡ ಪಾಟೀಲ, ರೇವಗೊಂಡಪ್ಪ ಅಣ್ಣಾರಾಯ ಪಾಟೀಲ, ಸಿದ್ದಣ್ಣ ರಾಮಣ್ಣ ಬಿರಾದಾರ ಅವರಿಗೆ ಹಾಗೂ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿರುವ ಲಲಿತಾ ಅಡಿವೆಪ್ಪ ನಡಗೇರಿ ಮತ್ತು ಸರೋಜಿನಿ ಸಿದ್ದಾರಾಯ ಪಾಟೀಲ ಅವರಿಗೆ ಪರಿಶಿಷ್ಟ ಜಾತಿಯ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಶೋಕ ಅಂಬಾಜಿ ಗಜಾಕೋಶ ಅವರಿಗೆ ತಮ್ಮ ಅಮೂಲ್ಯಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಇನ್ನೋರ್ವ ಅಭ್ಯರ್ಥಿ ದಾನಮ್ಮ ಕರಬಸಪ್ಪ ಬಿರಾದಾರ ಈಗಾಗಲೇ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಹೇಳಿಕೆ ನೀಡಿದ್ದಾರೆ. ಅವರಿಗೆ ಅಭಿನಂದಿಸುವದಾಗಿ ಹೇಳಿದರು.

    ಚುನಾವಣಾ ಪ್ರಚಾರ ಸಭೆಯಲ್ಲಿ ಎಂ.ಆರ್. ಪಾಟೀಲ ಬಳ್ಳೊಳ್ಳಿ, ಬಿಜೆಪಿ ಹಿರಿಯ ಮುಖಂಡ ಸಿದ್ಧಲಿಂಗ ಹಂಜಗಿ, ಶಾಂತೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ಧನರಾಜ್ ಮುಜಗೊಂಡ, ಇಲಿಯಾಸ್ ಬೋರಾಮಣಿ ಮಾತನಾಡಿದರು. ಡಿ.ಎ.ಮುಜಗೊಂಡ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts