More

    ವಿದ್ಯಾರ್ಥಿಗಳಿಗಾಗಿ ವಸತಿನಿಲಯ ಸ್ಥಾಪಿಸಿ

    ಕಲಬುರಗಿ: ಕಾಯಕವನ್ನೇ ನಂಬಿರುವ ಕುಂಬಾರರನ್ನು ಆರ್ಥಿಕವಾಗಿ ಬಲಗೊಳಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಶಿಕ್ಷಕ ನರಸಪ್ಪ ಕುಂಬಾರ ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಕುಂಬಾರ ಸಮಾಜದ ಸಂಘವು ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಕುಂಬಾರ ಸಮಾಜದವರ ಪ್ರಮುಖ ವ್ಯಾಪಾರ ಗಡಿಗೆ(ಮಡಿಕೆ) ತಯಾರಿಕೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಫ್ರಿಜ್ ಕೊಳ್ಳುವ ಭರಾಟೆಯಲ್ಲಿ ಗಡಿಗೆಯತ್ತ ಮುಖ ಮಾಡದ್ದರಿಂದ ಸಮಾಜ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದೆ. ಕೆಲಸ ಇಲ್ಲದೆ ಮಹಾನಗರಗಳಲ್ಲಿ ದುಡಿಯಲು ಹೋಗುವುದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ. ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕುಂಬಾರ ಸಮಾಜದ ಮಕ್ಕಳಿಗಾಗಿ ವಸತಿನಿಲಯ ಆರಂಭಿಸಬೇಕು ಎಂದು ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ ಉದ್ಘಾಟಿಸಿ ಮಾತನಾಡಿದರು. ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕ್ರಣ್ಣ ವಣಿಕ್ಯಾಳ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸ್ವಾಗತಿಸಿದರು. ಎಂ.ಎಸ್. ಭಕ್ತಕುಂಬಾರ ನಿರೂಪಣೆ ಮಾಡಿದರು.
    ಇದಕ್ಕೂ ಮುನ್ನ ಮುನ್ನ ಸೂಪರ್ ಮಾರ್ಕೆಟ್ನಿಂದ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಸರ್ವಜ್ಞ ಭಾವಚಿತ್ರದ ಭವ್ಯ ಮೆರವಣಿಗೆಯು ಜಗತ್ ವೃತ್ತದ ಮಾರ್ಗವಾಗಿ ಪಂಡಿತ ರಂಗಮಂದಿರಕ್ಕೆ ಆಗಮಿಸಿತು.

    ಕುಂಬಾರ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರೂ ವಿದ್ಯಾವಂತರ ಕೊರತೆ ಇದೆ. ಅಂತಲೇ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಹತ್ತು ಹಲವು ಸಮಸ್ಯೆಯಿಂದ ನರಳುತ್ತಿರುವ ಸಮಾಜದ ಕಡೆಗೆ ಸರ್ಕಾರ ಗಮನಹರಿಸುವುದು ಅಗತ್ಯವಾಗಿದೆ.
    | ಶಿವಶರಣಪ್ಪ ಕುಂಬಾರ
    ಕುಂಬಾರ ಸಮಾಜ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts