More

    ರೈಲು ಮಾರ್ಗ ಕಾಮಗಾರಿ ಪ್ರಧಾನಿಯಿಂದಲೇ ಚಾಲನೆ- ಸಂಸದ ಜಿ.ಎಂ.ಸಿದ್ದೇಶ್ವರ ಇಂಗಿತ

    ದಾವಣಗೆರೆ :ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಗೆ ಈ ವರ್ಷದೊಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಶಂಕುಸ್ಥಾಪನೆ ಮಾಡಿಸುವ ಚಿಂತನೆ ನಡೆದಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
    ಆನಗೋಡು ಸಮೀಪದ ಉಳುಪಿನಕಟ್ಟೆ ಬಳಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿ, ನೇರ ರೈಲು ಮಾರ್ಗ ಮಂಜೂರಾಗಿ 10 ವರ್ಷ ಕಳೆದಿವೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
    ಜಿಲ್ಲೆಯಲ್ಲಿ ಎಫ್‌ಎಂ ಬ್ಯಾಂಡ್ ನಿರ್ಮಿಸಲು 12 ಕೋಟಿ ರೂ. ಅನುಮೋದನೆಯಾಗಿದ್ದಾಗ ಜಾಗ ಸಿಕ್ಕಿರಲಿಲ್ಲ. ಉಳುಪಿನಕಟ್ಟೆ ಬಳಿ 3 ಎಕರೆ ಜಾಗ ಗುರುತಿಸಲಾಗಿದೆ. ಎಫ್‌ಎಂ ಬ್ಯಾಂಡ್‌ಗಳನ್ನು ಖಾಸಗಿಯವರಿಗೆ ವಹಿಸಿರುವ ಕಾರಣಕ್ಕೆ ಸರ್ಕಾರ ಬಂಡವಾಳ ಹಾಕಲು ಸಿದ್ಧವಿಲ್ಲ. ಆದರೂ ಇಲ್ಲಿ ಅಂದುಕೊಂಡ ಉದ್ದೇಶ ಸಾಕಾರಗೊಳಿಸಲು ಯತ್ನಿಸಲಾಗುವುದು ಎಂದರು.
    ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೈತರಿಗೆ 20 ಲಕ್ಷ ಕೋಟಿ ರೂ. ಹಣ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೆರವು ಕಲ್ಪಿಸಿದೆ. 9500 ಕೋಟಿ ರೂ. ಮೊತ್ತದಲ್ಲಿ ಹುಬ್ಬಳ್ಳಿ- ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಹಾಗೂ ಜೋಡಿ ರೈಲು ಮಾರ್ಗಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
    ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ತಡವಾಗಿಯಾದರೂ ಉದ್ಘಾಟನೆಯಾಗಿದೆ. ಇಲ್ಲಿ ಪ್ರದರ್ಶಿಸಲಾದ ವಿಜ್ಞಾನದ ಮಾದರಿಗಳ ಬಗ್ಗೆ ಎಲ್ಲ ಶಾಲೆಗಳಿಗೂ ಮಾಹಿತಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ವೀಕ್ಷಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಇದರಿಂದ ಮಕ್ಕಳಲ್ಲಿ ಪ್ರೇರಣೆ ಸಿಗಲಿದೆ. ಹೊಸ ಅನ್ವೇಷಣೆಯ ಆಲೋಚನೆ ಬರಬಹುದು ಎಂದರು. ಮೂರು ತಿಂಗಳಲ್ಲಿ ಬಾಕಿ ಕಾಮಗಾರಿ ಮುಗಿಸಿ ವ್ಯವಸ್ಥಿತಗೊಳಿಸುವಂತೆಯೂ ಹೇಳಿದರು.
    ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ ವಿಜ್ಞಾನ ಕೇಂದ್ರ ಇಲ್ಲಿಯೇ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಮಾದರಿಗಳನ್ನು ನೋಡಲು ಮಕ್ಕಳು ದೂರದೂರಿಗೆ ಹೋಗುವ ಪ್ರಮೇಯ ತಪ್ಪಿದೆ. ವಿಜ್ಞಾನದ ಸ್ಪರ್ಧೆಗೆ ತಕ್ಕಂತೆ ಬದಲಾವಣೆ ಅಗತ್ಯವಿದೆ ಎಂದರು.
    ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ,ಆನಗೋಡು ಗ್ರಾಪಂ ಅಧ್ಯಕ್ಷ ಎಂ. ಮಾದಪ್ಪ, ಡಯಟ್ ಉಪನಿರ್ದೇಶಕಿ ಗೀತಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಎಲ್.ರವಿ ಇದ್ದರು. ನೋಡಲ್ ಅಧಿಕಾರಿ ವಸಂತಕುಮಾರಿ ಕಾರ್ಯಕ್ರಮ ನಿರೂಪಿಸಿದರು.
    ———————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts