More

    ರಾಮನಿಗಾಗಿ ಕಷ್ಟ ನುಂಗಿ ಭಕ್ತರ ಹೋರಾಟ

    ಶಿಕಾರಿಪುರ: ಮೂರು ದಶಕದ ಹಿಂದೆ ಶ್ರೀರಾಮಜನ್ಮ ಭೂಮಿಗಾಗಿ ಹೋರಾಟ ಮಾಡಿದಂತಹ ಕರಸೇವಕನ ಮೇಲೆ ಕ್ರಮ ಜರುಗಿಸುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

    ಅಂಬೇಡ್ಕರ್ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಅಕ್ಷತಾ ಅಭಿಯಾನದಲ್ಲಿ ಮಾತನಾಡಿ, ಈ ಕ್ರಮದ ಹಿಂದೆ ಇರುವ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಜಗತ್ತೇ ಜ.22ನ್ನು ಎದುರು ನೋಡುತ್ತಿದೆ. ಜತೆಗೆ ವಿಜೃಂಭಿಸುತ್ತಿದೆ. ಶ್ರೀ ರಾಮನಿಗಾಗಿ ಎಂತಹ ಕಷ್ಟ ನೋವುಗಳನ್ನು ನುಂಗಿ, ಜೀವವನ್ನು ಪಣಕ್ಕಿಟ್ಟು ರಾಮಭಕ್ತರು ಹೋರಾಟ ಮಾಡಿದ್ದಾರೆ. ಸಾಧು-ಸಂತರು, ಮಹಾಂತರು, ಋಷಿ-ಮುನಿಗಳು ಮಾಡಿದ ತಪಸ್ಸು ಇಂದು ಫಲಿಸಿದೆ ಎಂದರು.
    ಅಯೋಧ್ಯೆಯ ರಾಮಮಂದಿರ ನಿರ್ಮಾಣ ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಕೋಟ್ಯಂತರ ಭಕ್ತರ ಎದೆಯಾಳದಲ್ಲಿ ಸಂತಸ ಚಿಮ್ಮುತ್ತಿದೆ. ಐದು ಶತಮಾನಗಳ ಸುದೀರ್ಘ ಹೋರಾಟ, ಸಂಘರ್ಷ ಕಾನೂನು ಸಮರದ ನಡುವೆ ಅಯೋಧ್ಯೆ ಹಿಂದುಗಳ ವಶವಾಗಿದೆ. ನಮ್ಮೆಲ್ಲರ ನಿರೀಕ್ಷೆಯಂತೆ ಶ್ರೀರಾಮ ಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಶ್ರೀರಾಮ ಭಕ್ತರಿಗೆ ದೊರೆತ ಅಪೂರ್ವ ಜಯವಾಗಿದೆ. ಇಡೀ ಭಾರತ ಸಂಭ್ರಮಿಸುತ್ತಿದೆ. ನಾವೆಲ್ಲರೂ ಆ ಸಂಭ್ರಮದ ಪಾಲುದಾರರು ಎಂದರು.
    ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಕಾರ್ಯದರ್ಶಿ ಸಿದ್ದಲಿಂಗಪ್ಪ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಪುರಸಭೆ ಸದಸ್ಯ ವಿಶ್ವನಾಥ್, ಪ್ರಮುಖರಾದ ಬಿ.ಪಿ.ನಾರಾಯಣಪ್ಪ, ಎಸ್.ಬಿ.ಮಠದ್, ಅಂಗಡಿ ರಾಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts