More

    ಮುಗಿದ ರೈಲ್ವೆ ದ್ವಿಪಥ ನಿರ್ಮಾಣ

    ಹುಬ್ಬಳ್ಳಿ: ಲಚ್ಯಾಣ-ಹುಟಗಿ ಮಧ್ಯದ 33 ಕಿಮೀ ಉದ್ದದ ರೈಲ್ವೆ ದ್ವಿಪಥ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಮಾರ್ಗ ಸಿದ್ಧಗೊಂಡಿದೆ.

    2014-15ರಲ್ಲಿ ಮಂಜೂರಾಗಿದ್ದ ಹುಟಗಿ-ಕೂಡಗಿ-ಗದಗ (284 ಕಿಮೀ) ದ್ವಿಪಥ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯಡಿ ಈ ಕಾಮಗಾರಿ ಇದೀಗ ಪೂರ್ಣಗೊಂಡಿದೆ. 1,870 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಂಡಿರುವ ಈ ದ್ವಿಪಥ ಮಹಾರಾಷ್ಟ್ರ, ಕರ್ನಾಟಕದ ವಿಜಯಪುರ ಮತ್ತು ಸೊಲ್ಲಾಪುರ ಜಿಲ್ಲೆಗಳ ಮೂಲಕ ಹಾದು ಹೋಗಿದೆ.

    ದ್ವಿಪಥ ನಿರ್ವಣದಿಂದಾಗಿ ರೈಲುಗಳ ಮಾರ್ಗದ ಸಾಮರ್ಥ್ಯ ಹೆಚ್ಚಿದೆ ಹಾಗೂ ಕ್ರಾಸಿಂಗ್ ಸಮಯದಲ್ಲಿ ರೈಲುಗಳು ಕಾಯುವುದು ತಪ್ಪಿದಂತಾಗಿದೆ. ಸರಕು ಸಾಗಣೆಯ ಹಾಗೂ ಪ್ರಯಾಣಿಕರ ರೈಲುಗಳು ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ. ಬೆಂಗಳೂರು ಮತ್ತು ಮುಂಬೈ ಮಹಾನಗರಗಳನ್ನು ಜೋಡಿಸುವ ಮಾರ್ಗವೂ ಇದಾಗಿದೆ.

    ಲಚ್ಯಾಣ-ಹುಟಗಿ ಮಧ್ಯದ 33 ಕಿಮೀ ಉದ್ದದ ಮಾರ್ಗದಲ್ಲಿ ಸುರಕ್ಷತಾ ಕ್ರಮಗಳನ್ನು ಕಳೆದ ಮೇ 18ರಂದು ಪರಿಶೀಲಿಸಲಾಗಿತ್ತು. ಜು. 29ರಂದು ನೈಋತ್ಯ ರೈಲ್ವೆ ವಲಯ ದ್ವಿಪಥ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದಾಗಿ ತಿಳಿಸಿದೆ.

    ಈ ಮಾರ್ಗದಲ್ಲಿ ಭೀಮಾ ನದಿಗೆ 670 ಮೀ. ಉದ್ದದ ಸೇತುವೆ ನಿರ್ವಿುಸಲಾಗಿದೆ. ಸೇತುವೆ ಮೇಲೆಯೂ ದ್ವಿಪಥ ಮಾರ್ಗ ನಿರ್ವಣಗೊಂಡಿದೆ. ವಂದಾಲ್-ಹುಟಗಿ ಮಧ್ಯದ 148 ಕಿಮೀ ಉದ್ದದ ದ್ವಿಪಥ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 284 ಕಿಮೀ ಉದ್ದದ ಹುಟಗಿ-ಗದಗ ಮಧ್ಯದ ಕಾಮಗಾರಿ 2022ರೊಳಗೆ ಪೂರ್ಣಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts