More

    ಮಾರುಕಟ್ಟೆಯಲ್ಲಿ ಜಾಸ್ತಿ, ಸಾಕಣೆೆದಾರರಿಗೆ ನಾಸ್ತಿ

    ಶಿರಸಿ: ಕರೊನಾ ಕರ್ಫ್ಯೂ ಪರಿಣಾಮ ಬಾಯ್ಲರ್ ಕೋಳಿ ಧಾರಣೆ ದಿಢೀರ್ ಕುಸಿತ ಕಂಡಿದ್ದು, ಸಾಕಣೆದಾರರು ಕಂಗಾಲಾಗಿದ್ದಾರೆ.

    ಕಳೆದ ವಾರ ಒಂದು ಕೆ.ಜಿ. ಕೋಳಿಗೆ ಅಂದಾಜು 160 ರೂಪಾಯಿ ಸಾಕಣೆದಾರರಿಗೆ ಸ್ಥಳದಲ್ಲಿ ಸಿಗುತ್ತಿತ್ತು. ಪ್ರಸ್ತುತ ಕರೊನಾ ಕರ್ಫ್ಯೂ ಕಾರಣಕ್ಕೆ ಮಾರುಕಟ್ಟೆಯಲ್ಲಿ ವಹಿವಾಟು ಕಡಿಮೆಯಾಗಿದೆ. ಇದರ ಜತೆ ದರವೂ ಹಿಮ್ಮುಖವಾಗಿದೆ. ಈ ನಡುವೆ ವ್ಯಾಪಾರಿಗಳು ಕರೊನಾ ನೆಪವೊಡ್ಡಿ ಸಾಕಣೆದಾರರಿಂದ ಒಂದು ಕೆ.ಜಿ.ಗೆ 40 ರೂಪಾಯಿ ನೀಡಿ ಕೆಜಿ ಕೋಳಿ ಖರೀದಿ ಮಾಡುತ್ತಿದ್ದಾರೆ. ಇದೇ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ 100 ರೂಪಾಯಿಗಳಿಗೂ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಅತ್ತ ಸಾಕಣೆದಾರರಿಗೂ ಲಾಭವಿಲ್ಲ, ಇತ್ತ ಗ್ರಾಹಕರಿಗೂ ಲಾಭವಿಲ್ಲದೆ ನಡುವೆ ವ್ಯಾಪಾರಿಗಳು ಮಾತ್ರ ಹೆಚ್ಚಿನ ಲಾಭ ಮಾಡುತ್ತಿದ್ದಾರೆ. ಇದು ಸಾಕಣೆೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೂಡಿದ ಬಂಡವಾಳವೂ ಸಾಕಣೆದಾರರ ಕೈಸೇರುತ್ತಿಲ್ಲ ಎಂದು ಅಸಹಾಯಕವಾಗಿ ಹೇಳುತ್ತಿದ್ದಾರೆ.

    ತಾಲೂಕಿನಲ್ಲಿ 35ಕ್ಕೂ ಹೆಚ್ಚು ಜನರು ಹಲವಾರು ವರ್ಷಗಳಿಂದ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ದಿಢೀರನೇ ಬೆಲೆ ಕುಸಿತದಿಂದ ಯಾವುದೇ ಲಾಭ ಕಾಣಲಿಲ್ಲ. ಸರ್ಕಾರ ಮಧ್ಯಸ್ಥಿಕೆ ವಹಿಸಿ ಸೂಕ್ತ ದರ ನಿಗದಿ ಪಡಿಸಬೇಕು ಎಂದು ಕೋಳಿ ಸಾಕಣೆದಾರರು ಒತ್ತಾಯಿಸುತ್ತಿ ದ್ದಾರೆ. ಕುಕ್ಕುಟೋದ್ಯಮ ನಂಬಿಕೊಂಡು ನೂರಾರು ಜನರು ಜೀವನ ಸಾಗಿಸುತ್ತಿದ್ದು, ಇದೀಗ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ಕೋಳಿ ಸಾಕಣೆೆದಾರರಿಗೆ ಕರೊನಾ ಕರ್ಫ್ಯೂನಲ್ಲಿಯೂ ಮಾರಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂಬುದು ಬಹುತೇಕ ಕೋಳಿ ಫಾರಂ ಮಾಲೀಕರ ಒತ್ತಾಯವಾಗಿದೆ.

    ನಷ್ಟದಿಂದ ಹೊರಬರಬೇಕು

    ಪ್ರಸ್ತುತ ಕೋವಿಡ್ ಕರ್ಫ್ಯೂ ಇರುವ ಕಾರಣ ಮಾಂಸದ ಅಂಗಡಿಗಳಿಗೆ ಬೆಳಗ್ಗೆ 6ರಿಂದ 10ರತನಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಂದೊಮ್ಮೆ ಕೋಳಿ ಉದ್ಯಮಕ್ಕೆ ನಿಯಮಾವಳಿ ಸರಳೀಕರಿಸಿದರೆ ಉಳಿದೆಲ್ಲ ಕ್ಷೇತ್ರಗಳಿಗೂ ಅನುಮತಿ ನೀಡುವುದು ಅನಿವಾರ್ಯ. ಹಾಗಾಗಿ ಕೋಳಿ ಸಾಕಣೆದಾರರು ತಮಗೆ ಇರುವ ಅವಕಾಶಗಳನ್ನೇ ಬಳಸಿಕೊಂಡು ನಷ್ಟದಿಂದ ಹೊರಬರಬೇಕು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಕಳೆದ ತಿಂಗಳಿನಲ್ಲಿ ಕೋಳಿ ಆಹಾರ ಒಂದು ಕೆ.ಜಿ.ಗೆ 25 ರೂಪಾಯಿ ಇತ್ತು. ಈಗ 30 ರೂ.ಗೆ ಏರಿಕೆಯಾಗಿದೆ. ಕೋಳಿಯ ಆಹಾರ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದ ಕೋಳಿ ಮಾಂಸದ ಉತ್ಪಾದನೆ ಕಡಿಮೆಯಾಗಿದೆ. ಕೋಳಿಮರಿಯ ಬೆಲೆಯೂ ಏರುತ್ತಿದೆ. ಕುಕ್ಕುಟೋದ್ಯಮ ನಷ್ಟದ ಸುಳಿಗೆ ಸಿಲುಕಿದೆ. ಸರ್ಕಾರ ಪ್ರೋತ್ಸಾಹಧನ ನೀಡಬೇಕು.

    | ಗಣಪತಿ ನಾಯ್ಕ ಕೋಳಿ ಸಾಕಣೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts