More

    ಮಳೆ-ಬಿರುಗಾಳಿಗೆ ಧರೆಗುರುಳಿದ ಮರಗಳು

    ಔರಾದ್: ತಾಲೂಕಿನ ಕೆಲವೆಡೆ ಭಾನುವಾರ ಬಿರುಗಾಳಿಸಹಿತ ಮಳೆಗೆ ಮರಗಳು ನೆಲಕ್ಕುರುಳಿದ್ದು, ಮನೆ ಮೇಲಿನ ತಗಡ (ಪತ್ರಾಸ)ಗಳು ಹಾರಿ ಹೋಗಿವೆ.

    ಸಂತಪುರ, ವಡಗಾಂವ(ದೇ), ಚಿಂತಾಕಿ, ಕೊಳ್ಳುರ, ಬರ್ದಾಪುರ ಇತರ ಕಡೆ ಅರ್ಧ ಗಂಟೆಗೂ ಹೆಚ್ಚು ಬಿರುಗಾಳಿಯೊಂದಿಗೆ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಗಿಡ-ಮರಗಳು ಬಿದ್ದಿವೆ.

    ಔರಾದ್-ಚಿಂತಾಕಿ ರಸ್ತೆಯಲ್ಲಿ ಅನೇಕ ಮರಗಳು ಉರುಳಿದ್ದರಿಂದ ಕೆಲಹೊತ್ತು ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ಅರಣ್ಯ ಸಿಬ್ಬಂದಿ ಮರಗಳನ್ನು ಜೆಸಿಬಿ ಮತ್ತು ಕಟಾವು ಯಂತ್ರದಿAದ ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ತೇಗಂಪುರ-ಮಮದಾಪುರ ಮಧ್ಯೆ ಬೃಹತ್ ಗಿಡವೊಂದು ಗಾಳಿ ರಭಸಕ್ಕೆ ರಸ್ತೆ ಮಧ್ಯೆ ಉರುಳಿ ಬಿದ್ದ ಕಾರಣ ಕೆಲಕಾಲ ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಯಿತು.

    ಅರಣ್ಯಾಧಿಕಾರಿ ಮಹ್ಮದ್ ಅಲಿಯೊದ್ದೀನ್, ಉಪ ವಲಯ ಅರಣ್ಯಾಧಿಕಾರಿ ರಘುನಾಥ ರಾಠೋಡ್, ಅಗ್ನಿಶಾಮಪಕ ದಳದ ಠಾಣಾಧಿಕಾರಿ ರಾಮಪ್ಪ, ಸುರೇಶ, ರಫೀಕ್, ಅಮರ, ಶ್ರೀನಿವಾಸ, ಅಜರುದ್ದೀನ್, ಪ್ರಶಾಂತ ಬಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts