More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ರೈತಸಂಘ, ಹಸಿರುಸೇನೆ ವಿರೋಧ

    ಶಿಡ್ಲಘಟ್ಟ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಸುಗ್ರೀವಾಜ್ಞೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಪದಾಧಿಕಾರಿಗಳು ತಹಸೀಲ್ದಾರ್ ಕೆ.ಅರುಂಧತಿ ಮೂಲಕ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.

    ಯಾವುದೇ ಜನಾಭಿಪ್ರಾಯ, ಚರ್ಚೆಯಿಲ್ಲದೇ ಸರ್ಕಾರ 1961ರ ಭೂ ಸುಧಾರಣೆ ಕಾಯ್ದೆಯ 79 ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದು ಪಡಿಸಿ 63ನೇ ಕಲಂಗೆ ತಿದ್ದುಪಡಿ ಮಾಡಿರುವುದು ರೈತವಿರೋಧಿ ಧೋರಣೆಯಾಗಿದೆ. ಕಾಯ್ದೆಯಿಂದ ರೈತರ ಭೂಮಿ ಕೈಗಾರಿಕೋದ್ಯಮಿಗಳ, ಬಂಡವಾಳಶಾಹಿಗಳ ಪಾಲಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಬೀದಿಗೆ ಬೀಳುತ್ತಾರೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ ಆತಂಕ ವ್ಯಕ್ತಪಡಿಸಿದರು.

    ಎಪಿಎಂಸಿ ಸುಗ್ರೀವಾಜ್ಞೆಯನ್ನು ವಿಧಾನಸಭೆಯಲ್ಲಿ ಚರ್ಚಿಸಿದ ನಂತರ ಅನುಷ್ಠಾನಗೊಳಿಸಬೇಕು, ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನ ಮಾಡುವುದನ್ನು ಕೈಬಿಡುವುದು, ರೇಷ್ಮೆಗೂಡು ಪ್ರತಿ ಕೆಜಿಗೆ 150 ರೂ. ಹೆಚ್ಚಿಸುವುದು, ಹಿಪ್ಪುನೇರಳೆ ಬೆಳೆಯುವ ಬೆಳೆಗಾರರಿಗೆ ಎಕರೆಗೆ 25 ಸಾವಿರ ಸಹಾಯಧನ ನೀಡುವುದು ಹಾಗೂ ಹೈನುಗಾರರ ಅನುಕೂಲಕ್ಕಾಗಿ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡುವಂತೆ ಒತ್ತಾಯಿಸಿದರು.

    ಸಂಘದ ಪದಾಧಿಕಾರಿಗಳಾದ ಭಕ್ತರಹಳ್ಳಿ ಪ್ರತೀಶ್, ಕೆ.ಅಂಬರೀಶ್, ಬಿ.ಅಭಿಲಾಷ್, ಆರ್.ಹುಸೇನ್‌ಸಾಬ್, ಡಿ.ವಿ.ನಾರಾಯಣಸ್ವಾಮಿ, ಗುಂಡಪ್ಪ, ಕೆ.ಎನ್.ಮಂಜುನಾಥ, ಬಿ.ವಿ.ನಾರಾಯಣಸ್ವಾಮಿ, ಚೌಡಪ್ಪ, ಮುನಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts