More

    ಬಿರುಸಿನ ಮಳೆಗೆ ಮರಗಳು ನೆಲಕ್ಕೆ

    ಕಲಬುರಗಿ: ಖಡಕ್ ಬಿಸಿಲಿನಿಂದ ಕಾದಹಂಚಿನಂತಾಗಿದ್ದ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಅರ್ಧ ತಾಸಿಗೂ ಅಧಿಕ ಸುರಿದ ಮಳೆ ಕೊಂಚ ತಂಪು ಮೂಡಿಸಿದೆ. ಮಳೆ ಮತ್ತು ಬಿರುಗಾಳಿಯಿಂದಾಗಿ ನಗರ ಸೇರಿ ಜಿಲ್ಲೆಯ ಹಲವೆಡೆ ಬೃಹದಾಕಾರದ ಮರಗಳು ನೆಲಕ್ಕುರುಳಿದರೆ, ವಾಹನ ಸಂಚಾರಕ್ಕೂ ವ್ಯತ್ಯಯ ಉಂಟಾಯಿತು.
    ನಗರದಲ್ಲಿ ಕೆಲ ಮನೆಗಳಿಗೆ ನೀರು ಹೊಕ್ಕರೆ, ಚರಂಡಿ ನೀರು ಕೆಲ ರಸ್ತೆಗಳನ್ನು ಆವರಿಸಿಕೊಂಡಿತು. ಹೀಗಾಗಿ ಕೆಲ ಬೈಕ್ಗಳು ನೀರಿನಲ್ಲಿ ಮುಳುಗಿದ್ದು ಕಂಡಿತು. ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ನಗರ ಸೇರಿ ಹಡಗಿಲ್ ಹಾರೂತಿ, ಕೊಳ್ಳೂರು, ಗೊಬ್ಬೂರ ಬಳಿ ಮರಗಳು ನೆಲಕ್ಕುರುಳಿವೆ.
    ಮಳೆ ಅಬ್ಬರದಿಂದ ಸಿದ್ಧಿಪಾಷಾ ದರ್ಗಾ ಬಳಿ ರಸ್ತೆ ಜಲಾವೃತಗೊಂಡಿತ್ತು. ಅಲ್ಲಿನ ಬೈಕ್ಗಳು ಮತ್ತು ಕಾರ್ಗಳು ನೀರಿನಲ್ಲಿ ಮುಳುಗಿದಂತೆ ಕಂಡವು. ಕೆಬಿಎನ್ ಕಾಂಪ್ಲೆಕ್ಸ್ ಮತ್ತು ಕಿಂಗ್ ಕಾಂಪ್ಲೆಕ್ಸ್ನಲ್ಲಿರುವ ಮಳಿಗೆಗಳಿಗೂ ನೀರು ನುಗ್ಗಿತು. ಜೇವರ್ಗಿ ಹಳೆಯ ರಸ್ತೆ ರೈಲ್ವೆ ಕೆಳಸೇತುವೆಯಲ್ಲೂ ನೀರು ತುಂಬಿ ಕೆಲಹೊತ್ತು ಸಂಚಾರ ಬ್ಲಾಕ್ ಆಗಿತ್ತು. ಲಾಲ್ಗೇರಿ ಕ್ರಾಸ್ನಲ್ಲೂ ನೀರು ಜಮಾಗೊಂಡಿತ್ತು.
    ನಗರದ ಬಹುತೇಕ ಚರಂಡಿಗಳು ಕಸ ಮತ್ತು ಹೊಲಸಿನಿಂದ ತುಂಬಿದ್ದರಿಂದ ಸರಾಗವಾಗಿ ನೀರು ಹರಿದುಕೊಂಡು ಹೋಗಲಿಲ್ಲ. ಒಂದೇ ಮಳೆಗೆ ಪಾಲಿಕೆ ಬಣ್ಣ ಬಯಲು ಮಾಡುವಂತಾಯಿತು. ಏಷಿಯನ್ ಮಾಲ್ ಎದುರಿನ ರಸ್ತೆಯಲ್ಲೂ ನೀರು ನಿಂತಿತ್ತು.

    ಕುಸಿದ ಮಹಡಿ
    ಬಿದ್ದಾಪುರ ಕಾಲನಿ ಗುರುಶಾಂತಮ್ಮ ಲೇಔಟ್ನ ಕಕ್ಕಳಮೇಲಿ ಗುರುರಾಜ ಎಂಬುವರ ಮನೆ ಮಹಡಿ ಸಂಪೂರ್ಣ ಬಿದ್ದಿದೆ. ಸುದೈವವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿದ್ದ ಕೆಲವು ವಸ್ತುಗಳು ಹಾಳಾಗಿವೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜನತೆ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts