More

    ಬಜರಂಗದಳ ಹಿಂದು ಧರ್ಮದ ಶಕ್ತಿ

    ಉಳ್ಳಾಗಡ್ಡಿ-ಖಾನಾಪುರ: ಬಜರಂಗದಳ ಹಿಂದು ಧರ್ಮದ ಶಕ್ತಿ ಮತ್ತು ಅದರ ಉಸಿರೇ ಹಿಂದು ಸಂಸ್ಕೃತಿ ರಕ್ಷಣೆ ಮಾಡುವುದಾಗಿದೆ ಎಂದು ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ಸೂರ್ಯ ನಾರಾಯಣ ಹೇಳಿದರು.

    ಯಮಕನಮರಡಿಯ ವಿದ್ಯಾ ವರ್ಧಕ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಿಗಳ ಭವ್ಯ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವು ವರ್ಷಗಳಿಂದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ಯುವಕರಿಗೆ ಸಂಸ್ಕಾರ ಕಲಿಸಲಾಗುತ್ತಿದೆ. ಧರ್ಮ ರಕ್ಷಣೆ ಹೊಣೆ ಯುವಕರ ಮೇಲಿದೆ ಎಂದರು. ಜಾತ್ಯತೀತ ಹೆಸರಿನಲ್ಲಿ ಹಿಂದು ಧರ್ಮ ಒಡೆಯುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

    ಹನುಮ ಮಾಲಾಧಾರಿಗಳಿಂದ ಭವ್ಯ ಸಂಕೀರ್ತನ ಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗದುಗಿನ ಜಗದ್ಗುರು ಶಿವಾನಂದ, ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಡಾ.ರಾಜೇಶ ನೇರ್ಲಿ, ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಬಿಜೆಪಿ ಮುಖಂಡರಾದ ರವಿ ಹಂಜಿ, ಮಾರುತಿ ಅಷ್ಟಗಿ, ಬಸವರಾಜ ಹುಂದ್ರಿ, ಶಿವಾನಂದ ಮಸಗುಪ್ಪಿ, ಶ್ರೀಶೈಲ ಯಮಕನಮರಡಿ, ಕೃಷ್ಣ ಭಟ್, ಗೋಪಾಲ ಚಿನಗೌಡ್ರ, ವಿಜಯ ಮಠಪತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts