More

    ಫೆ.26ಕ್ಕೆ ರಾಜ್ಯ ಮಟ್ಟದ ಚಿತ್ರ ಸಂತೆ 

    ದಾವಣಗೆರೆ: ದಾವಣಗೆರೆ ಚಿತ್ರಕಲಾ ಪರಿಷತ್, ಭರತ್ ಸೇವಾ ಟ್ರಸ್ಟ್ ಹಾಗೂ ಬಾಡಿ ರಾಕರ್ಸ್ ಜಿಮ್ ಸಹಯೋಗದಲ್ಲಿ ಫೆಬ್ರವರಿ 26ರಂದು ಎ.ವಿ.ಕೆ ಕಾಲೇಜು ರಸ್ತೆಯಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಚಿತ್ರಸಂತೆ ಆಯೋಜಿಸಲಾಗಿದೆ.

    ಕಳೆದ ವರ್ಷ ನಡೆಸಿದ್ದ ಚಿತ್ರಸಂತೆ ಯಶಸ್ವಿಯಾಗಿತ್ತು. ಈ ಬಾರಿ 150ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗುವುದು ಎಂದು ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭಾಗವಹಿಸುವರು. ನಗರದಾದ್ಯಂತ ಕಾರ್ಯಕ್ರಮ ಕುರಿತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಟ್ಟಿ ಸಿಂಗರಿಸಲಾಗುವುದು ಎಂದು ಮಾಹಿತಿ ನೀಡಿದರು.
    ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಅರ್ಜಿಗಳನ್ನು ನೀಡಲಾಗುತ್ತಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿ ಫಾರಂಗಳಲ್ಲಿ ಕಳೆದ ವರ್ಷದ ಚಿತ್ರಸಂತೆಯ ಕ್ಯುಆರ್ ಕೋಡ್‌ಗಳನ್ನು ಹಾಕಿದ್ದು, ವೀಕ್ಷಿಸಬಹುದಾಗಿದೆ. ಅರ್ಜಿಗಳಿಗಾಗಿ ಶೇಷಾಚಲ, ಮೊಬೈಲ್ ಸಂಖ್ಯೆ 9844262279 ಹಾಗೂ ರವಿ ಹುದ್ದಾರ್ 9448404419 ಸಂಪರ್ಕಿಸಬಹುದು ಎಂದು ಹೇಳಿದರು.
    ಉತ್ತಮ ಕಲಾಕೃತಿಗಳು ಹಾಗೂ ಬೆಸ್ಟ್ ಸ್ಟಾಲ್‌ಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಕಲಾವಿದರಿಗೆ ಊಟ, ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.
    ಪರಿಷತ್ ಕಾರ್ಯದರ್ಶಿ ಡಿ.ಶೇಷಾಚಲ, ವಿಜಯ್ ಜಾಧವ್, ರವಿ ಹುದ್ದಾರ್, ಅಶೋಕ ಗೋಪನಾಳ್, ಜೀವನ್, ಶಿವಕುಮಾರ್, ರವಿಕಿರಣ್, ರಾಕೇಶ್, ಸಿ.ಎನ್. ಸಂತೋಷ್, ಆನಂದ್, ಸಂಜು, ಗಣೇಶಾಚಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts