More

    ಪರಿಶ್ರಮಪಟ್ಟರೆ ಮಾತ್ರ ನಾಯಕರಾಗಲು ಸಾಧ್ಯ

    ರಂಗಭೂಮಿ ಕೃಷಿ ಇದ್ದಂತೆ. ಇಲ್ಲಿ ರೈತರಾಗಿ ಪರಿಶ್ರಮಪಟ್ಟು ದುಡಿಯುವವರು ನಾಯಕರಾಗಿ ರೂಪುಗೊಳ್ಳಬಹುದು ಎಂದು ಹಿರಿಯ ಕಲಾವಿದ ಸುಂದರ್ ರಾಜ್ ಅಭಿಪ್ರಾಯಪಟ್ಟರು.

    ನೆಲೆ ಹಿನ್ನೆಲೆ, ಜನಮನ ಸಾಂಸ್ಕೃತಿಕ ಸಂಘಟನೆ ವತಿಯಿಂದ ವಿಜಯನಗರದ ಸಂಜೀವಯ್ಯ ಸಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಲೋಕ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.

    ರಂಗಭೂಮಿಯಲ್ಲಿ ಅಹಂ ಇಲ್ಲ. ರಂಗಭೂಮಿಯಲ್ಲಿ ಬೆಳವಣಿಗೆಗೆ ನಿರಂತರ ಕಲಿಕೆ ಅವಶ್ಯ. ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ಬಾಲ್ಯದಲ್ಲಿಯೇ ಕಲೆಗಳನ್ನು ಪರಿಚಯಿಸಿದರೆ ಜೀವನದಲ್ಲಿ ರೂಢಿಸಿಕೊಂಡು ಹವ್ಯಾಸಿವಾಗಿ ಮುನ್ನಡೆದರೆ ನಾಡಿಗೇ ಲಾಭವಾಗುತ್ತದೆ ಎಂದು ತಿಳಿಸಿದರು.

    ರಂಗಭೀಷ್ಮ ಬಿ.ವಿ.ಕಾರಂತರಿಂದ ಕರ್ನಾಟಕದ ರಂಗಭೂಮಿ ಶ್ರೀಮಂತಗೊಂಡಿದೆ. ಬಿ.ವಿ.ಕಾರಂತರ ಇಲ್ಲದಿದ್ದರೆ ಕನ್ನಡ ನಾಡಿಗೆ ಬಹುದೊಡ್ಡ ನಷ್ಟವಾಗುತ್ತಿತ್ತು. ಅವರ ಶಿಷ್ಯರಾದದ್ದು, ನಮ್ಮ ಪೂರ್ವಜನದ ಪುಣ್ಯ ಎಂದು ಹೇಳಿದರು.

    ಸೈಕಲ್ ಫ್ಯೂರ್ ಅಗರಬತ್ತಿ ಎಕ್ಸಿಕ್ಯೂಟಿವ್ ಹರೀಶ್, ರಂಗಭೂಮಿ ಪೋಷಕ ಜಯರಾಮ್ ಪಾಟೀಲ್, ರಂಗಕರ್ಮಿ ಎಚ್.ಜನಾರ್ಧನ್, ಶಿಬಿರದ ನಿರ್ದೇಶಕ ಕೆ.ಆರ್.ಸುಮತಿ, ಸಂಚಾಲಕ ಕೆ.ಆರ್.ಗೋಪಾಲಕೃಷ್ಣ, ಕಲಾವಿದರಾದ ಮಧುಮಳವಳ್ಳಿ, ಮೇಘನಾ, ಮಾನಸಿ ಮುಂತಾದವರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts