More

    ನಿವೇಶನಕ್ಕಾಗಿ ಕೊಳೆಗೇರಿ ಜನರ ಆಗ್ರಹ -ಸ್ಲಂ ಜನಾಂದೋಲನದಿಂದ ಪ್ರತಿಭಟನೆ 

    ದಾವಣಗೆರೆ: ಬಾಡಿಗೆ ಮನೆಗಳಲ್ಲಿ ವಾಸವಿರುವ ಕೊಳೆಗೇರಿ ಜನರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಫುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಸಹಯೋಗದಲ್ಲಿ ನಿವೇಶನರಹಿತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
    ಸಾವಿರಾರು ಸಂಖ್ಯೆಯ ಕೊಳೆಗೇರಿ ಜನರು ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅವರಿಗೆ ಜಿಎಂಐಟಿ ಕಾಲೇಜು ಸಮೀಪದ 41 ಎಕರೆ ಹಾಗೂ ಬಾತಿ ಸರ್ವೇ ನಂಬರ್‌ನಲ್ಲಿ 20 ಎಕರೆ ಜಾಗದಲ್ಲಿ ನಿವೇಶನ ಕಲ್ಪಿಸುವುದಾಗಿ ಈ ಹಿಂದಿನ ಜಿಲ್ಲಾಡಳಿತಗಳು ಭರವಸೆ ನೀಡಿದ್ದರೂ ಕಾರ್ಯಗತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಮನೆ, ನಿವೇಶನ ಹೊಂದಿದ್ದ ಸಬಲರಿಗೇ ಈ ಹಿಂದೆ ಆಶ್ರಯ ಸಮಿತಿ ಯೋಜನೆಯಡಿ ಆಶ್ರಯ ನಿವೇಶನ ಕಲ್ಪಿಸಲಾಗಿದ್ದು, ಈ ಅಕ್ರಮ ಕುರಿತಂತೆ ಸಂಘಟನೆಯಿಂದ ಶೀಘ್ರವೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿ ನಿವೇಶನ ಕಲ್ಪಿಸಿಕೊಡಬೇಕು. ಈ ಸಂಬಂಧ ಜ.16ರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಆಯೋಜಿಸಲು ನಿರ್ಧರಿಸಿರುವುದಾಗಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಎಚ್. ರೇಣುಕಾ ಯಲ್ಲಮ್ಮ ತಿಳಿಸಿದರು.
    ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆ ಗೌರವಾಧ್ಯಕ್ಷ ಎಸ್.ಎಲ್. ಆನಂದಪ್ಪ, ಅಧ್ಯಕ್ಷ ಎಂ. ಶಬ್ಬೀರ್‌ಸಾಬ್, ಮಂಜುಳಾ, ಜಂಶಿದಾಬಾನು, ಬಾಲಪ್ಪ, ಮುನ್ನಾ ಸಾಬ್, ಚಮನ್‌ಸಾಬ್, ಬೀಬಿಜಾನ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts