More

    ನಾನು ಬಣಜಿಗ ಸಮಾಜದ ಅವಹೇಳನ ಮಾಡಿಲ್ಲ

    ಬಾಗಲಕೋಟೆ: ಈಚೆಗೆ ನಡೆದ ಹುಕ್ಕೇರಿಯಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಅನಗತ್ಯವಾಗಿ ನನ್ನ ವಿರುದ್ದ ಅವಹೇಳನ, ಬೆದರಿಕೆ ಕರೆಗಳು ಬರುತ್ತಿದ್ದು, ಇದು ಮುಂದುವರೆದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಎಚ್ಚರಿಕೆ ನೀಡಿದ್ದಾರೆ.
    ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಈಚೆಗೆ ಹುಕ್ಕೇರಿಯಲ್ಲಿ ಸಮಾಜದ ಮುಖಂಡರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂದು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಬಾಗಲಕೋಟೆಯಲ್ಲಿ ಕಾಶಪ್ಪನವರ ತುರ್ತು ಸುದ್ದಿಗೋಷ್ಠಿ ನಡೆಸಿದರು.
    ಹುಕ್ಕೇರಿಯಲ್ಲಿ ನಡೆದ ಸಭೆಯಲ್ಲಿ ನಾನು ಎಲ್ಲೂ ಕೂಡ ಬಣಜಿಗ ಸಮಾಜದ ಹೆಸರು ಬಳಕೆ ಮಾಡಿಲ್ಲ. ಅಂದು ನಡೆದ ಸಮಾವೇಶ ನಮ್ಮ ಸಮಾಜಕ್ಕೆ ಸಂಬಂಧಿಸಿದ್ದು. ಯಾವ ಸಮುದಾಯವರು ಅಲ್ಲಿ ಭಾಗವಹಿಸುವುದು ಬೇಡ ಎಂದಿದ್ದರೂ ಕತ್ತಿ ಅವರ ಪುತ್ರ ಬಂದಿದ್ದಲ್ಲದೇ ನಮ್ಮ ಭಾಷಣದ ಬಗ್ಗೆ ತಕರಾರು ಮಾಡಿದ್ದರು. ಅಲ್ಲಿ ಯಾರೋ ಅವರು ಮಾಜಿ ಮಂತ್ರಿ ಮಗ ಎಂದಿದ್ದಕ್ಕೆ ನಾನು ಮಂತ್ರಿ ಮಗ ಎಂದಿದ್ದೇನೆ. ಅಲ್ಲಿ ಸಮಾಜದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
    ಅದಾಗ್ಯೂ ನಾನು ಬಣಜಿಗ ಸಮಾಜದ ಬಗ್ಗೆ ಮಾತನಾಡಿದ್ದೇನೆ ಎಂದು ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಿ ನನ್ನ ಭಾವಚಿತ್ರ ಸುಟ್ಟು ಹಾಕಿದ್ದರೆ. ಚುನಾವಣೆ ಬಂದಾಗೆಲ್ಲ ಈ ರೀತಿ ಆಗುತ್ತಿದೆ. ಕಳೆದ ಸಲ ನನ್ನ ಪತ್ನಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದಾಗಲೂ ಇದೇ ರೀತಿ ಆಗಿತ್ತು. ಇದೆಲ್ಲ ಪಟ್ಟಭದ್ರ ಶಕ್ತಿಗಳು ಮಾಡುತ್ತಿವೆ. ಇದಕ್ಕೆ ನಾನು ಬಗ್ಗಲ್ಲ, ಜಗ್ಗಲ್ಲ. ನನಗೆ ಟಿಕೆಟ್ ಕೊಡಬಾರದು ಎಂದು ಪ್ರತಿಭಟನಾಕರರ ಹೇಳಲು ಯಾರು ಎಂದು ಪ್ರಶ್ನಿಸಿದರು.
    ಇನ್ನೂ ಈ ವಿಚಾರವಾಗಿ ನನಗೆ ಜೀವಬೆದರಿಕೆ ಕರೆಗಳು ಬರುತ್ತೀವೆ. ಇದು ಮುಂದುವರೆದಲ್ಲಿ ನಾನು ಕಾನೂನಿನ ಮೊರೆ ಹೋಗುತ್ತೇನೆ. ಇದನ್ನು ನಾನು ಹುಕ್ಕೇರಿ ಜನರಿಗೆ ಮತ್ತು ರಮೇಶï ಕತ್ತಿಯವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ಎಂದರು.
    ಲಿಂಗಾಯತ ಎಲ್ಲ ಒಳಪಂಗಡಗಳು ಒಂದೇ ಎನ್ನುವ ಭಾವನೆ ನಮ್ಮದಾಗಿದೆ. ಅದಾಗ್ಯೂ ಮತ್ತೆ ಮತ್ತೆ ನನ್ನ ಬಗ್ಗೆ ಈ ರೀತಿ ಮಾತುಗಳು ಕೇಳಿ ಬರುತ್ತೀವೆ. ನಾನು ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಪದೇ ಪದೇ ನನ್ನ ವಿರುದ್ದ ಹೋರಾಟ ಮಾಡುವುದು ಸರಿಯಲ್ಲ. ಈ ಬೆದರಿಕೆಗಳಿಗೆ ಬಗ್ಗುವ ಮಗನೇ ಅಲ್ಲ ಎಂದು ಕಿಡಿಕಾರಿದರು.
    ಬಣಜಿಗರು ಸೇರಿದಂತೆ ಲಿಂಗಾಯತ ಒಳಪಂಗಡಗಳ ಜೊತೆಗೆ ನಮ್ಮ ಸಂಬಂಧಗಳು ಇವೆ. ಬಣಜಿಗರನ್ನು ನಾವು ಬೀಗರು ಎಂದೇ ಕರೆಯುತ್ತೇವೆ. ಅನೇಕ ಸಭೆಗಳಲ್ಲಿ ನಮ್ಮ ಸಮಾಜದ ಜಗದ್ಗುರುಗಳು ಹಾಗೂ ನಾನು ಜಗದೀಶ ಶೆಟ್ಟರ ಅವರನ್ನು ಬೀಗರು ಎಂದೇ ಕರೆಯುತ್ತೇವೆ. ನಮ್ಮ ಕುಟುಂಬದಲ್ಲಿ ನಮ್ಮ ತಂದೆ, ನಮ್ಮ ತಾಯಿ, ನಾನು ಶಾಸಕರಾಗಿದ್ದವರು. ನಮಗೂ ಅರಿವು ಇದೆ. ಇನ್ನೊಂದು ಸಮಾಜದ ಬಗ್ಗೆ ಮಾತನಾಡಿಲ್ಲ. ನಮ್ಮ ಮೀಸಲಾತಿ ಹೋರಾಟದಲ್ಲಿ ನಮ್ಮ ಸಮಾಜದ ಬಗ್ಗೆ ಮಾತನಾಡುತ್ತೇವೆ. ನಾವು ಬೇಕಾದನ್ನು ಮಾತನಾಡುತ್ತೇವೆ. ಅಲ್ಲಿ ಬೇರೆ ಸಮಾಜದವರು ಯಾಕೆ ಬರಬೇಕು? ಇದು ಪ್ರಜಾಪ್ರಭುತ್ವ ಮಾತನಾಡುವ ಹಕ್ಕು ಇದೆ. ನಮ್ಮ ಸಮಾಜದವರಿಗೆ ರಾಜಕೀಯ ಶಕ್ತಿ ಕೊಡಿ ಎನ್ನುತ್ತೇವೆ. ಮುಂದೆಯೂ ಹೇಳುತ್ತೇವೆ ಎಂದರು.
    ಯತ್ನಾಳ ಸಮರ್ಥನೆಗೆ ಹೋಗಿ ಪೇಚು :
    ಇನ್ನು ತಾವು ಬಣಜಿಗ ಸಮಾಜದ ಬಗ್ಗೆ ಮಾತನಾಡಿಲ್ಲ ಎಂದ ಕಾಶಪ್ಪನವರ, ಯತ್ನಾಳ ಅವರು ಏನೂ ಅಂದಿಲ್ಲ ಎಂದು ಸಮರ್ಥನೆಗೆ ಇಳಿದರು. ಆದರೆ, ಯತ್ನಾಳ ಅವರು ಅವಹೇಳನ ಮಾತನ್ನು ಎಳೆ ಎಳೆಯಾಗಿ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದಾಗ, ಅಲ್ಲಿಯೂ ಮೊಂಡು ವಾದಕ್ಕೆ ಇಳಿದ ಕಾಶಪ್ಪನವರ, ವ್ಯಾಪಾರಸ್ಥರು ಅಂದರೆ ಅದು ಬಣಜಿಗರು ಅಂತ ಯಾಕೆ ತಿಳಿಯಬೇಕು? ಎಲ್ಲ ಸಮಾಜದವರು ವ್ಯಾಪಾರ ಮಾಡುತ್ತಾರೆ ಎಂದು ವಾದಿಸಿದರು.
    ಆದರೆ, ಯತ್ನಾಳ ಅವರು ಏಳು ಜನ ಸಿಎಂ ಉದಾಹರಿಸಿ, ಒಂದು ಸಮುದಾಯದ ಕಾಯಕವನ್ನು ಅವಹೇಳನ ಮಾಡಿದ್ದು, ಅಲ್ಲಿ ನೀವು ಹಾಗೂ ಜಗದ್ಗುರುಗಳು ಮೌನ ವಹಿಸಿದ್ದೇಕೆ ಎನ್ನುವ ಪ್ರಶ್ನೆಗೆ ಪೇಚಿಗೆ ಸಿಲುಕಿದ ಕಾಶಪ್ಪನವರ, ಈ ಬಗ್ಗೆ ನನಗೆ ಗೊತ್ತಿಲ್ಲ. ಯತ್ನಾಳ ಅವರನ್ನೆ ಕೇಳಬೇಕು. ಅದರೂ, ಈ ಬಗ್ಗೆ ಯತ್ನಾಳ ಅವರನ್ನು ಕೇಳುತ್ತೇವೆ. ಯಾವ ಸಮಾಜ ಉದ್ದೇಶಿಸಿ ಅವರು ಮಾತನಾಡಿದ್ದರೇ ಎಂದು ಗೊತ್ತಾಗಲಿ ಎಂದು ಜಾರಿಕೊಂಡರು.

    ಯತ್ನಾಳ, ಬೆಲ್ಲದ ಹೇಳಿಕೆ ನಿಂದೆಸಿದ್ದೇವೆ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅನ್ಯ ಜಾತಿ, ಧರ್ಮಗಳ ಬಗ್ಗೆ ಮಾತನಾಡಬಾರದು ಎಂದು ನಮ್ಮ ಸ್ವಾಮೀಜಿ ಹಾಗೂ ನಾನು ಹೇಳಿದ್ದೇವೆ. ಇತ್ತೀಚಿಗೆ ಯತ್ನಾಳ ಹಾಗೂ ಬೆಲ್ಲದ ಅವರು ಮುಸ್ಲಿಂರನ್ನು ೨ಬಿ ಮೀಸಲಾತಿಯಿಂದ ತೆಗೆಯಬೇಕು ಎನ್ನುವ ವಾದವನ್ನು ನಾವು ನಿಂದಿಸಿದ್ದೇವೆ. ಮೀಸಲಾತಿ ಹೋರಾಟದಲ್ಲಿ ಇವೆಲ್ಲ ಬರಬಾರದು. ಯಾವುದೇ ಸಮಾಜದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದೇವೆ. ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ನಾವು ಯಾವುದೇ ಸಮಾಜಕ್ಕೆ ಸಿಕ್ಕ ಮೀಸಲಾತಿ ಬಗ್ಗೆ ಅಪಸ್ವರ ಎತ್ತಿಲ್ಲ ಎಂದರು.

    ೨ಎ ಮೀಸಲಾತಿ ಪ್ರಮಾಣ ಹೆಚ್ಚಳವಾಗಲಿ :
    ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ರೀತಿಯಲ್ಲಿ ೨ಎ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎನ್ನುವ ಹೋರಾಟಕ್ಕೆ ಯಾರಾದರೂ ಮುಂದಾದರೆ ಅದಕ್ಕೆ ಪಂಚಮಸಾಲಿ ಸಮಾಜದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ಮುಖಂಡ ಕಾಶಪ್ಪನವರ ಸ್ಪಷ್ಟಪಡಿಸಿದರು. ೨ಎ ಮೀಸಲಾತಿ ಪ್ರಮಾಣ ಹೆಚ್ಚಳ ಆಗಬೇಕು ಎನ್ನುವ ಬೇಡಿಕೆ ತಪ್ಪೇನಿಲ್ಲ. ಆ ಬಗ್ಗೆ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮಾಜಗಳು ಬೇಡಿಕೆ ಇಟ್ಟು ಹೋರಾಟಕ್ಕೆ ಇಳಿದರೆ ಅದಕ್ಕೆ ತಾವು ಬೆಂಬಲವಾಗಿ ಹೋರಾಟ ಮಾಡುವುದಾಗಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಪ್ರಭುದೇವ ಹರಟಗಿ, ಅಂಬರೀಶ ನಾಗೂರ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಮೋಹನ ನಾಡಗೌಡ, ವಿಜಯ ಗದ್ದನಕೇರಿ, ಶರಣು ಬೆಲ್ಲದ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts