More

    ದೇಶದ ಅಭಿವೃದ್ಧಿಗೆ ಹೊಸ ಆಯಾಮ

    ಭಾಲ್ಕಿ: ದೇಶವನ್ನು 56 ವರ್ಷ ಆಳಿದ ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಮಾಡಿದ್ದು ಬಿಟ್ಟರೇ ಬೇರೇನು ಮಾಡಲಿಲ್ಲ. ಆದರೇ ಮೋದಿ ದೇಶದ ಪ್ರಧಾನಿ ಆಗುತ್ತಿದ್ದಂತೆಯೇ ದೇಶದ ಅಭಿವೃದ್ಧಿಗೆ ಹೊಸ ಆಯಮ ಸಿಕ್ಕಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
    ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಒಂದು ವರ್ಷದ ಸಾಧನೆಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಜನಧನ ಖಾತೆ ತೆರೆದ ಫಲಾನುಭವಿಗಳಿಗೆ ತಿಂಗಳಿಗೆ 500 ರೂ ಸಹಾಯ ಧನ ಜಮಾ ಮಾಡಿರುವ ಪರಿಣಾಮ ದೇಶದಲ್ಲಿ 55 ಕೋಟಿ ರೂ ಹಾಗೂ ಜಿಲ್ಲೆಯಲ್ಲಿ 3.85 ಲಕ್ಷ ರೂ ಬಡ ಜನರು ಸದುಪಯೋಗ ಪಡೆದಿದ್ದಾರೆ ಎಂದರು.
    ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ನಾಗರಿಕ ವಿಮಾನಯಾನ ಆರಂಭಿಸಲಾಗಿದೆ. ಆಯುಷ್ಮಾನ, ಅಟಲ್ ಪೆನ್ಷನ್ ಸೇರಿ ಮುಂತಾದ ಯೋಜನೆ ಜಾರಿಯಲ್ಲಿವೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರತಿದಿನ 6-7 ಕಿ.ಮೀ. ಮಾತ್ರ ನಡೆಯುತ್ತಿತ್ತು. ಆದರೇ ಮೋದಿ ಸರಕಾರ ಬಂದ ಮೇಲೆ ಪ್ರತಿದಿನ ಅದರ ವೇಗ 29 ಕಿ.ಮೀ.ಗೆ ಏರಿಸಲಾಗಿದೆ. ರೈಲ್ವೆ ಯೋಜನೆಯಡಿ ಜಿಲ್ಲೆಯಿಂದ ಬೆಂಗಳೂರು, ತಿರುಪತಿ, ಪಂಡರಾಪೂರ್, ಮಚಲಿಪಟ್ಟಣಂ, ಮುಂಬೈ ಸೇರಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸಲು ರೈಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಬಹು ದಿನಗಳ ಕನಸಾಗಿದ್ದ ರಾಮ ಮಂದಿರ ನಿರ್ಮಾಣಕ್ಕೆ ಮೂಲಕ ಮೋದಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
    ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜನಪರ ಆಡಳಿತಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಎಂಎಲ್ಸಿ ರಘುನಾಥ ಮಲ್ಕಾಪೂರೆ, ಪ್ರಮುಖರಾದ ಈಶ್ವರಸಿಂಗ ಠಾಕೂರ್, ದತ್ತಾತ್ರೆಯೇ ತೂಗಾಂವಕರ್, ಶಿವರಾಜ ಗಂದಗೆ, ಮಲ್ಲಿಕಾಜರ್ುನ ಖೂಬಾ, ಪಂಡಿತ ಶಿರೋಳೆ, ಸಂತೋಷ ಪಾಟೀಲ್, ಶಾಂತವೀರ ಕೇಸ್ಕರ್, ಪ್ರತಾಪ ಪಾಟೀಲ್, ಚಂದ್ರಕಾಂತ ಪಾಟೀಲ್, ಸುರೇಶ ಬಿರಾದಾರ್, ಸಂಗಮೇಶ ಭೂರೆ, ಸುರೇಶ ಹುಬಳಿಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts