More

    ತೊಗರಿ ಖರೀದಿ ಮಿತಿ ಹೆಚ್ಚಳ ಸಿಎಂ ಹೇಳಿಕೆ ಘೋಷಣೆಗೆ ಸೀಮಿತ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಬೆಂಬಲ ಬೆಲೆಯಲ್ಲಿ ರೈತರ ತೊಗರಿ ಖರೀದಿ ಮಿತಿ 10ರಿಂದ 20 ಕ್ವಿಂಟಾಲ್ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಘೋಷಣೆ ಒಂದು ವಾರದಿಂದ ಹೇಳಿಕೆಗಷ್ಟೇ ಸೀಮಿತವಾಗಿದೆ. ತೊಗರಿ ಖರೀದಿ ಪ್ರಕ್ರಿಯೆ ಆರಂಭವಾದರೂ ಮಿತಿ ಹೆಚ್ಚಳದ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬರದಿರುವುದು ರೈತರಲ್ಲಿ ತಳಮಳ ಸೃಷ್ಟಿಸಿದೆ.
    ಕಳೆದ 7ರಂದು ಇಲ್ಲಿ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಿದ್ದ ಮುಖ್ಯಮಂತ್ರಿಗಳು, ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಭಾರ ಬೀಳಲಿದ್ದರೂ ರೈತರ ಹಿತದಿಂದ ತೊಗರಿ ಖರೀದಿ ಮಿತಿ 10ರಿಂದ 20 ಕ್ವಿಂಟಾಲ್ಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದರು. ಈ ಕುರಿತು ನಾಳೆಯೇ(ಫೆ.8) ಸರ್ಕಾರದಿಂದ ಅಧಿಕೃತ ಆದೇಶವೂ ಹೊರಬೀಳಲಿದೆ ಎಂದಿದ್ದರು. ಆದರೆ ಒಂದು ವಾರ ಕಳೆದರೂ ಆದೇಶ ಬಂದಿಲ್ಲ. ಹೀಗಾಗಿ ರೈತರು ಹೊಸ ಆದೇಶಕ್ಕಾಗಿ ಕಾದು ಕೂಡುವ ಸ್ಥಿತಿ ಬಂದಿದೆ.
    ಮುಂಚೆ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿ ಆದೇಶ ಬಂದಿದೆ. ಆದರೆ ಮುಖ್ಯಮಂತ್ರಿ ಮಾಡಿದ ಹೆಚ್ಚುವರಿ ಘೋಷಣೆ ಬಗ್ಗೆ ಅಧಿಕೃತವಾಗಿ ಆದೇಶ ಬಂದಿಲ್ಲ. ಆದೇಶ ಶೀಘ್ರ ಬರುವ ನಿರೀಕ್ಷೆಯಿದೆ. ಬೀದರ್ ಜಿಲ್ಲೆಯ 106 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಗಳಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲೆಡೆ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 15ರವರೆಗೆ ನಡೆಯಲಿದೆ ಎಂದು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಗಳು ವಿಜಯವಾಣಿಗೆ ತಿಳಿಸಿವೆ.
    ರಾಜ್ಯದ 9 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ 1,11,536 ರೈತರು ಈಗಾಗಲೇ ಹೆಸರು ನೋಂದಣಿ ಮಾಡಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 82,304, ಬೀದರ್-44,202, ರಾಯಚೂರು-22,224, ಯಾದಗಿರಿ-16,879, ಬಾಗಲಕೋಟೆ- 8,609, ಕೊಪ್ಪಳ-3,741, ಬೆಳಗಾವಿ-3,149, ಬಳ್ಳಾರಿ ಜಿಲ್ಲೆಯಲ್ಲಿ 467 ಸೇರಿ 9 ಜಿಲ್ಲೆಗಳಲ್ಲಿ 2,93,111 ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಈ ಮೂಲಗಳು ವಿವರಿಸಿವೆ.
    ಮಾರುಕಟ್ಟೆಯಲ್ಲಿ ಹೆಚ್ಚಿದ ಬೆಲೆ: ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಕಾರ್ಯಾರಂಭಿಸಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ದಿಢೀರ್ ಏರಿಕೆ ಕಂಡಿದೆ. ಬೀದರ್ ಗಾಂಧಿಗಂಜ್ ಮಾರುಕಟ್ಟೆಯಲ್ಲಿ ಶುಕ್ರವಾರ ಪ್ರತಿ ಕ್ವಿಂಟಾಲ್ ತೊಗರಿ 5200-5400 ರೂ.ಗೆ ಮಾರಾಟ ನಡೆದಿದೆ. ಮಾರುಕಟ್ಟೆಯಲ್ಲಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ನಾಫೆಡ್ ಹಾಗೂ ಎಫ್ಸಿಐ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಮಾರ್ಕಡ್​ ಮತ್ತು ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯನ್ನು ರಾಜ್ಯದ ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಈಗಿರುವ ಸರ್ಕಾ ರಿ ಆದೇಶದಂತೆ ತೊಗರಿ ಬೆಳೆಯುವ ಈ 9 ಜಿಲ್ಲೆಗಳಲ್ಲಿ ಎಕರೆಗೆ 5 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಮಾತ್ರ ಖರೀದಿಗೆ ಅವಕಾಶವಿದೆ. ಇದರಂತೆ 1,82,875 ಮೆಟ್ರಿಕ್ ಟನ್ ರಾಜ್ಯದಿಂದ ತೊಗರಿ ಖರೀದಿಸಲು ಸಕರ್ಾರ ಅವಕಾಶ ನೀಡಿದೆ. ಸಿಎಂ ಘೋಷಣೆಯಂತೆ 20 ಕ್ವಿಂಟಾಲ್ಗೆ ಹೆಚ್ಚಾದರೆ ಖರೀದಿ ಪ್ರಮಾಣ 3 ಲಕ್ಷ ಮೆಟ್ರಿಕ್ ಟನ್ಗೆ ಹೆಚ್ಚಾಗುವ ಅಂದಾಜಿದೆ.
    ಕ್ವಿಂಟಾಲ್ಗೆ 6100 ರೂ. ಬೆಲೆ: ಕ್ವಿಂಟಾಲ್ಗೆ 5800 ರೂ. ದರದಲ್ಲಿ ಕೇಂದ್ರ ಸಕರ್ಾರ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ತೊಗರಿ ಖರೀದಿಸಲಾಗುತ್ತಿದೆ. ಕೇಂದ್ರದ ಬೆಂಬಲ ಬೆಲೆಯೊಂದಿಗೆ ರಾಜ್ಯ ಸಕರ್ಾರ ಕ್ವಿಂಟಾಲ್ಗೆ 300 ರೂ. ಪ್ರೋತ್ಸಾಹಧನ ನೀಡುತ್ತಿದೆ. ಹೀಗಾಗಿ ಕ್ವಿಂಟಾಲ್ ತೊಗರಿಗೆ 6100 ರೂ. ರೈತರ ಕೈಸೇರಲಿದೆ.

    ಬೀದರ್ ಜಿಲ್ಲೆಯ 106 ಪಿಕೆಪಿಎಸ್ಗಳಲ್ಲಿ ತೊಗರಿ ಖರೀದಿಗೆ ಚಾಲನೆ ಸಿಕ್ಕಿದೆ. ಜಿಲ್ಲಾದ್ಯಂತ 44202 ರೈತರು ನೋಂದಣಿ ಮಾಡಿಸಿದ್ದಾರೆ. ಈಗಾಗಲೇ ಜಿಲ್ಲೆಯ 3,972 ರೈತರಿಂದ 27,712 ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಮಾರ್ಚ್ 15ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು.
    | ತುಳಸಿರಾಮ ಇಲಾಖೆ ಎಪಿಎಂಸಿ ಸಹಾಯಕ ನಿರ್ದೇಶಕ

    ತೊಗರಿ ಖರೀದಿ ಮಿತಿ 20 ಕ್ವಿಂಟಾಲ್ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ ಘೋಷಣೆ ಒಂದು ವಾರ ಕಳೆದರೂ ಕಾರ್ಯರೂಪಕ್ಕೆ ಬರದಿರುವುದು ವಿಚಿತ್ರ. ಮುಖ್ಯಮಂತ್ರಿಗಳೇ ಈ ರೀತಿ ರೈತರಿಗೆ ಸುಳ್ಳು ಹೇಳಿದರೆ ಹೇಗೆ?
    | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts