More

    ಜೀತ ವಿಮುಕ್ತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಿ

    ಜೀವಿಕಾ ಸಂಘಟನೆಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

    ಎಚ್.ಡಿ.ಕೋಟೆ: ಜೀತ ಪದ್ಧತಿ ರದ್ದತಿ ಕಾನೂನು ಜಾಗೃತಿ ದಿನದ ಅಂಗವಾಗಿ ಜೀತದಿಂದ ವಿಮುಕ್ತಿ ಹೊಂದಿದವರಿಗೆ ಸಮಗ್ರ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ, ಜೀವಿಕಾ ಸಂಘಟನೆ ಸದಸ್ಯರು ತಹಸೀಲ್ದಾರ್ ಸಣ್ಣರಾಮಪ್ಪ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ಸದಸ್ಯರು, ಬಸ್ ನಿಲ್ದಾಣದ ಬಳಿ ಮಾನವಸರಪಳಿ ನಿರ್ಮಿಸಿ ನಂತರ ತಾಲೂಕು ಆಡಳಿತ ಸೌಧ ದತ್ತ ತೆರಳಿದರು.

    ಜೀವಿಕಾ ತಾಲೂಕು ಸಂಚಾಲಕ ಬಸವರಾಜು ಮಾತನಾಡಿ, ಜೀತ ಪದ್ಧತಿ ಇಲ್ಲಿಯವರೆಗೆ ಸಂಪೂರ್ಣವಾಗಿ ತೊಲಗಬೇಕಿತ್ತು. ಅಲ್ಲದೆ, ದುಡಿಯುವವರು ಸ್ವತಂತ್ರವಾಗಿ ಬದುಕುವ ಹಕ್ಕನ್ನು ಸರ್ಕಾರ ಈವರೆಗೆ ಕಲ್ಪಿಸಬೇಕಿತ್ತು ಎಂದರು.

    ಶೇ.90ರಷ್ಟು ದಲಿತರು ಮತ್ತು ಮೂಲನಿವಾಸಿಗಳು ಜೀತದಾರರಾಗಿದ್ದಾರೆ. ಜೀವಿಕಾದ ಪ್ರಯತ್ನ ಹಾಗೂ ಅಧಿಕಾರಿಗಳ ಸಹಕಾರ ಮತ್ತು ಜನಪ್ರತಿನಿಧಿಗಳ ಬೆಂಬಲದಿಂದ ದೊಡ್ಡ ಪ್ರಮಾಣದಲ್ಲಿ ಜೀತದಾಳುಗಳನ್ನು ಬಿಡುಗಡೆಗೊಳಿಸಲಾಗಿದೆ. ಎಲ್ಲರಿಗೂ ಸಮಗ್ರ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಸಂಘಟನೆ ಸದಸ್ಯರಾದ ಚಂದ್ರಶೇಖರ ಮೂರ್ತಿ, ಬಸವರಾಜು, ಮಹಾದೇವು, ಲಕ್ಷ್ಮಮ್ಮ, ಅಕ್ಕಯಮ್ಮ, ಮಲ್ಲಿಗಮ್ಮ, ಕೃಷ್ಣನಾಯ್ಕ, ಶಿವಣ್ಣ, ಚಿಕ್ಕರಾಚಯ್ಯ, ಸದಾಶಿವ, ಮಂಜುನಾಥ, ಮುದ್ದುಮಲ್ಲಯ್ಯ, ಪಾಷಾ, ನಾಗಯ್ಯ, ಚೌಡಳ್ಳಿ ಜವರಯ್ಯ, ಆನಗಟ್ಟಿ ದೇವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts