More

    ಚಿನ್ನಾಭರಣ, ಹಣ ದೋಚಿದ್ದವರ ಬಂಧನ

    ರಾಮಾಪುರ ಪೊಲೀಸರ ಕಾರ್ಯಾಚರಣೆ


    ಹನೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಹಾಗೂ ಹಣ ದೋಚಿದ್ದ ಇಬ್ಬರನ್ನು ಶುಕ್ರವಾರ ರಾಮಾಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 100 ಗ್ರಾಂ ಚಿನ್ನಭಾರಣ, 6 ಸಾವಿರ ರೂ. ಮೌಲ್ಯದ ಬೆಳ್ಳಿ ಹಾಗೂ 47 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

    ರಾಮಾಪುರ ಗ್ರಾಮದ ವೇಲುಸ್ವಾಮಿ ಹಾಗೂ ಶಿವರಾಜು ಬಂಧಿತರು. ಗ್ರಾಮದ ಮಲ್ಲಿಗಾ ಎಂಬುವರು ಅ.19ರಂದು ಮನೆಗೆ ಬೀಗ ಹಾಕಿಕೊಂಡು ತಮಿಳುನಾಡಿಗೆ ಹೋಗಿದ್ದರು. ಇದನ್ನು ತಿಳಿದಿದ್ದ ಈ ಇಬ್ಬರು ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣ ಹಾಗೂ ಹಣ ದೋಚಿದ್ದರು. ಈ ಬಗ್ಗೆ ಮಲ್ಲಿಗೆ ನೀಡಿದ ದೂರಿನನ್ವಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಎಸ್ಪಿ ಶಿವಕುಮಾರ್, ಎಎಸ್ಪಿ ಸುಂದರರಾಜು ಹಾಗೂ ಡಿವೈಎಸ್ಪಿ ನಾಗರಾಜು ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ ಅವರು 2 ಪತ್ಯೇಕ ತಂಡಗಳನ್ನು ರಚಿಸಿ ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಶುಕ್ರವಾರ ನಾಲ್‌ರೋಡ್- ಹಂದಿಯೂರು ಮುಖ್ಯರಸ್ತೆಯ ಗರಿಕೆಕಂಡಿ ಸೇತುವೆ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

    ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್, ಎಎಸೈ ಗುರುಸ್ವಾಮಿ, ಮುಖ್ಯಪೇದೆಗಳಾದ ನಾಗೇಂದ್ರ, ಲಿಂಗರಾಜು, ಗಿರೀಶ್, ಪೇದೆಗಳಾದ ಲಿಯಾಖತ್ ಆಲಿಖಾನ್, ಬಿರಾದರ್, ಅಣ್ಣದೊರೆ, ಮಕಂದರ್, ರಮೇಶ್‌ಕುಮಾರ್, ಮಹೇಂದ್ರ, ಮಹದೇವಸ್ವಾಮಿ ಹಾಗೂ ಚಾಲಕರಾದ ರಾಚಪ್ಪ, ಪರಮೇಶ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts