More

    ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ 2 ಕರೊನಾ ಪರೀಕ್ಷಾ ಯಂತ್ರ

    ಚಿಕ್ಕಬಳ್ಳಾಪುರ: ಗಂಟಲು ದ್ರವ ಮಾದರಿ ಸಂಗ್ರಹಿಸಿ ತ್ವರಿತವಾಗಿ ವರದಿ ನೀಡುವ 2 ಕೋವಿಡ್ -19 ಪರೀಕ್ಷಾ ಯಂತ್ರಗಳನ್ನು ಸರ್ಕಾರ ಜಿಲ್ಲಾಸ್ಪತ್ರೆಗೆ ನೀಡಿದೆ.

    ಮೇ 16 ರಂದು ಪರೀಕ್ಷಾ ಯಂತ್ರಕ್ಕೆ ಚಾಲನೆ ಸಿಗಲಿದ್ದು ನಿತ್ಯ 20 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. ಕನಿಷ್ಠ 1 ರಿಂದ 2 ಗಂಟೆಯೊಳಗೆ ಸೋಂಕು ದೃಢಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೀಶ್ ಗೌಡ ತಿಳಿಸಿದ್ದಾರೆ.

    ಐಸಿಎಂಆರ್ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಎರಡು ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಯಂತ್ರದ ಸೌಲಭ್ಯದಿಂದ ತುರ್ತಾಗಿ ಮಾದರಿಗಳನ್ನು ಪರೀಕ್ಷಿಸಲು ಅನುಕೂಲಕವಾಗಿದೆ. ಯಂತ್ರದ ನಿರ್ವಹಣೆಗೆ ತರಬೇತಿ ಪಡೆದ ತಂತ್ರಜ್ಞರ ತಂಡವನ್ನು ನಿಯೋಜಿಸಲಾಗಿದೆ ಎಂದರು.

    ಈಗಾಗಲೇ ಜಿಲ್ಲೆಯಲ್ಲಿ 5902 ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದು 5436 ಮಾದರಿಗಳು ನೆಗೆಟಿವ್ ಆಗಿದೆ. ಇನ್ನು 446 ಮಾದರಿಗಳ ವರದಿಗಾಗಿ ಎದುರು ನೋಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ನೋಡಲ್ ಅಧಿಕಾರಿ ನೇಮಕ : ಜಿಲ್ಲೆಗೆ ವಿದೇಶದಿಂದ ಆಗಮಿಸುವವರ ಮೇಲೆ ನಿಗಾವಹಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸೈಫುಲ್ಲಾ ಶರೀಫ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts