More

    ಗಮನ ಸೆಳೆದ ವಿವಿಧತೆಯಲ್ಲಿ ಏಕತೆ ನಾಟಕ

    ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅಕ್ಷತಾ ಮತ್ತು ತಂಡದವರು ಪ್ರದರ್ಶಿಸಿದ ವಿವಿಧತೆಯಲ್ಲಿ ಏಕತೆ ಕಿರು ನಾಟಕ ಎಲ್ಲರ ಗಮನ ಸೆಳೆಯಿತು. ಹಲವು ಭಾಷೆ, ಧರ್ಮಗಳಿದ್ದರೂ ಭಾರತೀಯರೆಲ್ಲ ಒಂದೇ ಎನ್ನುವುದನ್ನು ನಾಟಕ ಬಿಂಬಿಸಿತು.

    ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಆಗಸದಲ್ಲಿ ತ್ರಿವರ್ಣದ ಬಲೂನ್ ಹಾರಿ ಬಿಡಲಾಯಿತು. ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ದೇಶ ಭಕ್ತಿ ಗೀತೆ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿನಾಯಕ ಕೋತಮಿರ ಅವರು ಸ್ವಾತಂತ್ರ್ಯ ಹೋರಾಟ ಕುರಿತು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಅಂಬ್ರೆಪ್ಪ ಮುಖ್ಯ ಅತಿಥಿಯಾಗಿದ್ದರು.

    ಎನ್‍ಎಸ್‍ಎಸ್ ಅಧಿಕಾರಿ ಡಾ. ಹೇಮಾವತಿ ಪಾಟೀಲ್, ಐಕ್ಯೂಎಸಿ ಸಂಚಾಲಕ ಡಾ. ಸಂದೀಪ್ ತಿವಾರಿ, ಖಲೀಲ್, ಆದರ್ಶ, ಡಾ. ಶ್ರೀಕಾಂತ, ಡಾ. ಪ್ರಕಾಶ ವಾಘಮಾರೆ, ಮೊಕದಮ್, ಅಯೂಬ್, ಸತ್ಯಶೀಲ ಇದ್ದರು. ಕಾಲೇಜಿನ ಸಾಂಸ್ಕøತಿಕ ಸಮಿತಿ ಸಂಚಾಲಕಿ ಮಮತಾ ನಿರೂಪಣೆ ಮಾಡಿದರು.  ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸವಿತಾ ಪಾಟೀಲ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts