More

    ಕ್ಷೌರಿಕರ ಸೇರ್ಪಡೆಗೆ ಈಶ್ವರಪ್ಪ ಸ್ಪಂದನೆ

    ಬೆಂಗಳೂರು : ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಕುರುಬ ಸಮಾಜವನ್ನು ಸೇರ್ಪಡೆ ಹೋರಾಟದಲ್ಲಿ ಕ್ಷೌರಿಕರನ್ನು ಸೇರಿಸಿಕೊಳ್ಳುವ ಮನವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ ಶಿವಕುಮಾರ್ ತಿಳಿಸಿದ್ದಾರೆ.

    ಕುರುಬರ ಹೋರಾಟ ಸಮಿತಿಯ ಮುಂದಾಳತ್ವ ವಹಿಸಿರುವ ಈಶ್ವರಪ್ಪರನ್ನು ನಾನು, ಕ್ಷೌರಿಕರ ಗುರುಪೀಠದ ಡಾ. ಲಿಂಗರಾಜ್ ಗುರೂಜಿ, ಅಭಿಮಾನಿ ಕ್ಷೌರಿಕ ಮುತ್ತುರಾಜ್ ಮತ್ತು ಎಚ್.ಎನ್ ನರಸಿಂಹಮೂರ್ತಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಇದಕ್ಕೆ ಸಚಿವರು ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದು ಶಿವಕುಮಾರ್ ಹೇಳಿದರು.

    ನಿರ್ಗತಿಕ ಕ್ಷೌರಿಕ ಸಮಾಜಕ್ಕೆ ಸ್ವಾತಂತ್ರ ಬಂದು 73 ವರ್ಷ ಕಳೆದರೂ ಸರ್ಕಾರದಿಂದ ಸೌಲಭ್ಯ ಸಿಗುತ್ತಿಲ್ಲ. ಜಾತಿ ಜನಗಣತಿಯ ಸಮೀಕ್ಷೆ ನಡೆದರೆ ಕ್ಷೌರಿಕರ ನಿಜವಾದ ಜನಸಂಖ್ಯೆ ತಿಳಿಯಲಿದೆ. ಆಗ ನಮಗೆ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆ. ಕ್ಷೌರಿಕರ ಹೆಸರಿನಲ್ಲಿ ಕರೆಯಲ್ಪಡುವ ಅಂದಾಜು 24 ಪಂಗಡಗಳಿವೆ. ಮುಂದಿನ ದಿನಗಳಲ್ಲಿ ಕನಕ ಗುರುಪೀಠ ಸ್ವಾಮೀಜಿಯವರಿಗೆ, ಕುರುಬ ಜನಾಂಗದ ಮಂತ್ರಿಗಳಿಗೆ, ಶಾಸಕರುಗಳಿಗೆ, ಮಾಜಿ ಮಂತ್ರಿ ಮತ್ತು ಕುರುಬ ಸಮುದಾಯದ ಮುಖಂಡರುಗಳಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts