ಕ್ರೀಡೆಗಳ ಪ್ರಗತಿಗೆ ತಂತ್ರಜ್ಞಾನ ಅವಶ್ಯ

8
ಬೆಳಗಾವಿ ನಗರದ ವಿಟಿಯು ಆವರಣದಲ್ಲಿ ಭಾನುವಾರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಸಹನಾ ಕುಮಾರಿ, ನಾಗರಾಜ ಬಿ.ಜಿ., ಪ್ರೊ.ವಿದ್ಯಾಶಂಕರ ಚಾಲನೆ ನೀಡಿದರು. ಪ್ರೊ.ಟಿ.ಎನ್.ಶ್ರೀನಿವಾಸ, ಪ್ರೊ.ಬಿ.ಈ.ರಂಗಸ್ವಾಮಿ ಇತರರಿದ್ದರು.

ಬೆಳಗಾವಿ: ಕ್ರೀಡೆಯಲ್ಲಿ ತಂತ್ರಜ್ಞಾನ ಹೇಗೆ ಬಸಳಬೇಕು ಎಂಬುದರ ಕುರಿತು ಸಂಶೋಧನೆಗಳು ನಡೆಯಬೇಕು. ಆಗ ಮಾತ್ರ ಕ್ರೀಡಾ ಕ್ಷೇತ್ರ ಇನ್ನಷ್ಟು ಶ್ರೀಮಂತವಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ ಅಭಿಪ್ರಾಯಪಟ್ಟರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಮೈದಾನದಲ್ಲಿ ಭಾನುವಾರ ಜರುಗಿದ 24ನೇ ವಿತಾವಿ ಅಂತರ್ ವಿದ್ಯಾಲಯ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸುವುದು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಕಲಿಕೆ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುವ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ತಾಂತ್ರಿಕ ವಿದ್ಯಾರ್ಥಿಗಳಾಗಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವುದನ್ನು ಕಂಡು ಖುಷಿಯಾಗಿದೆ. ಎಲ್ಲ ಕ್ರೀಡಾಪಟುಗಳು ಸತತ ಪರಿಶ್ರಮದ ಮೂಲಕ ಯಶಸ್ಸು ಗಳಿಸಬೇಕು. ದೇಶಕ್ಕೆ ನಮ್ಮ ಕೈಯಿಂದ ಸಾಧ್ಯವಾದ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಮಾತನಾಡಿ, ಈ ಬಾರಿ ಟೂರ್ನಿಯಲ್ಲಿ ವಿಟಿಯು ವ್ಯಾಪ್ತಿಗೆ ಒಳಪಟ್ಟಿರುವ 115 ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಮುಂದಿನ ಬಾರಿ ಬೆಳಗಾವಿಯಲ್ಲೇ ನಡೆಯಲಿರುವ ಟೂರ್ನಿಯಲ್ಲಿ ಎಲ್ಲ ಕಾಲೇಜುಗಳಿಗೆ ಭಾಗವಹಿಸುವಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದರು.
ವಿಟಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜತೆಗೆ ಕ್ರೀಡೆಗೂ ಪ್ರಾಶಸ್ತ್ಯ ಕೊಡುತ್ತ ಬಂದಿದ್ದೇವೆ. ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಕ್ರೀಡೆ, ಯೋಗ ಮತ್ತು ರಾಷ್ಟ್ರೀಯ ಸೇವಾ ಯೋಜನೆಯನ್ನು ಒಂದು ವಿಷಯವಾಗಿ ಅಳವಡಿಸಿದ್ದೇವೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಅವಶ್ಯವಾಗಿದೆ ಎಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ನಾಗರಾಜ ಬಿ.ಜಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಆದ್ಯತೆ ನೀಡಿದಷ್ಟು ಕ್ರೀಡೆಗಳಿಗೂ ನೀಡಬೇಕು. ಪ್ರತಿಯೊಂದು ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ವಿಟಿಯು ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಡಾ.ಪಿ.ಪುಟ್ಟಸ್ವಾಮಿ ಗೌಡ, ವಿವಿಧ ವಿಭಾಗಗಳ 25 ಸ್ಪರ್ಧೆಗಳಲ್ಲಿ 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

10000 ಮೀ ಓಟ (ಮಹಿಳಾ ವಿಭಾಗ)
ಪ್ರಥಮ ಸ್ಥಾನ- ವಿದ್ಯಾ ಸಿ.ಎಸ್. ವಿವೇಕಾನಂದ ಕಾಲೇಜು ಆಪ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಪುತ್ತೂರು
ದ್ವಿತೀಯ ಸ್ಥಾನ- ಮಂಜುಳಾ ಸುನಗಡ್ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು, ಧಾರವಾಡ
ತೃತೀಯ ಸ್ಥಾನ- ಮಂಜುಶ್ರೀ ಎ. ವಿವೇಕಾನಂದ ಕಾಲೇಜು ಆ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಪುತ್ತೂರು

ಜಾವಲಿನ್ ಎಸೆತ -ಮಹಿಳಾ ವಿಭಾಗ
ಪ್ರಥಮ ಸ್ಥಾನ- ಮೇಘಶ್ರೀ ಕೆ., ಸಹ್ಯಾದ್ರಿ ಕಾಲೇಜು ಆ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್, ಮಂಗಳೂರು
ದ್ವಿತೀಯ ಸ್ಥಾನ- ವಿದ್ಯಾ ಸಿ.ಎಂ., ನಾಗಾರ್ಜುನ ಕಾಲೇಜು ಆ್ ಇಂಜಿನಿಯರಿಂಗ್ ಟೆಕ್ನಾಲಜಿ, ೆಂಗಳೂರು
ತೃತೀಯ ಸ್ಥಾನ- ವರ್ಷಿತಾ ಪಿ. ಆಳ್ವ, ವಿವೇಕಾನಂದ ಕಾಲೇಜು ಆ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು

ಎತ್ತರ ಜಿಗಿತ-ಮಹಿಳಾ ವಿಭಾಗ
ಪ್ರಥಮ ಸ್ಥಾನ- ಯಶಿತಾ ಎನ್., ವಿವೇಕಾನಂದ ಕಾಲೇಜು ಆ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಪುತ್ತೂರು
ದ್ವಿತೀಯ ಸ್ಥಾನ- ಮೇಘನಾ ಪಿ.ಇ., ವಿವೇಕಾನಂದ ಕಾಲೇಜು ಆ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು
ತೃತೀಯ ಸ್ಥಾನ- ಸೃಷ್ಟಿ ಬಾಲಿ, ಕೆಎಲ್ಎಸ್ ಗೋಗಟೆ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ (ಜಿಐಟಿ), ಬೆಳಗಾವಿ.

ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ

ಸಿಎಂಆರ್‌ಐಟಿ ಬೆಂಗಳೂರಿಗೆಗೆ ದ್ವಿತೀಯ ಸ್ಥಾನ

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿಗೆ ತೃತೀಯ ಸ್ಥಾನ