More

    ಕೊಡ್ಲಿಪೇಟೆ ಸಹಕಾರ ಸಂಘಕ್ಕೆ 81 ಲಕ್ಷ ರೂ. ಲಾಭ

    ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಮಹಾಸಭೆ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

    ಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್.ಡಿ.ತಮ್ಮಯ್ಯ ಮಾತನಾಡಿ, ಸಂಘದಲ್ಲಿ 5233 ಸದಸ್ಯರಿದ್ದು, ಹೊಸದಾಗಿ 120 ಮಂದಿ ಸೇರ್ಪಡೆಯಾಗಿದ್ದಾರೆ. 2021-22ನೇ ಸಾಲಿನಲ್ಲಿ ಸಂಘವು ಒಟ್ಟು 81.77 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡುವಂತೆ ತೀರ್ಮಾನಿಸಲಾಯಿತು.

    ಸದಸ್ಯ ಗೋಕುಲ್ ಮಾತನಾಡಿ, ಸಂಘದ ಮೂಲಕ ರೈತರು ಖರೀದಿಸಿದ ರಸಾಯಿನಿಕ ಗೊಬ್ಬರ ಕಳಪೆಯಾಗಿದ್ದು, ಈ ಬಗ್ಗೆ ಸಂಘವು ರಸಗೊಬ್ಬರ ಪೂರೈಕೆ ಮಾಡಿದ ಕಂಪನಿಯ ಮೇಲೆ ಕ್ರಮ ಜರುಗಿಸಿ ರೈತರ ಹಣವನ್ನು ಹಿಂದಿರುಗಿಸುವಂತೆ ಆಗ್ರಹಿಸಿದರು.

    ಸಂಘದ ಉಪಾಧ್ಯಕ್ಷ ಕೆ.ಬಿ.ಸುಬ್ರಮಣ್ಯಾಚಾರ್, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಬಿ.ಕೆ.ಯತೀಶ್, ಕೆ.ಸಿ.ಪ್ರಸನ್ನ, ಎ.ಎನ್.ಭಾನುಮತಿ, ಬಿ.ಇ.ರಾಜು, ಜೆ.ಕೆ.ತೇಜಕುಮಾರ್, ಬಿ.ಪಿ.ಅಶೋಕ್‌ಕುಮಾರ್, ಬಿ.ಕೆ.ರಂಜಿತಾ, ಕೆ.ಎಂ.ವಹಾಬ್, ಕೆ.ವಿ.ಮಲ್ಲೇಶ್, ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಿ.ಆರ್.ಬಲರಾಮ್, ಸಂಘದ ಪ್ರಭಾರ ಸಿಇಒ ಬಿ.ಡಿ.ಅಮೃತಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts