More

    ಕೆ.ಆರ್.ಸಾಗರದಲ್ಲಿ ಸಾಂಪ್ರದಾಯಿಕ ಮತಗಟ್ಟೆ

    ಕೆ.ಆರ್.ಸಾಗರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್. ಸಾಗರದಲ್ಲಿ ಸಾಂಪ್ರದಾಯಿಕ ಮತಗಟ್ಟೆ ನಿರ್ಮಿಸಿದ್ದು, ಮತದಾರರನ್ನು ಸೆಳೆಯಲು ತಯಾರಾಗಿದೆ.
    ಕೆ.ಆರ್. ಸಾಗರದ ಅರಳಿಕಟ್ಟೆ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 207ರಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಮಾರ್ಗದರ್ಶನದಲ್ಲಿ ಕೆ.ಆರ್. ಸಾಗರ ಗ್ರಾಮ ಪಂಚಾಯಿತಿ ಸುಂದರ, ಸಾಂಪ್ರದಾಯಿಕ ಮತಗಟ್ಟೆ ನಿರ್ಮಿಸಿದೆ.
    ಹಳ್ಳಿಯ ವಾತಾವರಣದಲ್ಲಿ ಮತಗಟ್ಟೆ ಮುಂದೆ ಹಸಿರು ಚಪ್ಪರ ನಿರ್ಮಿಸಿ, ಎರಡೂ ಬದಿಯಲ್ಲೂ ಬಾಳೆಕಂದುಗಳನ್ನು ಕಟ್ಟಿ, ಹೂಗಳಿಂದ ಅಲಂಕರಿಸಲಾಗಿದೆ. ಸಾಂಪ್ರದಾಯಿಕ ಮತಗಟ್ಟೆಯ ಸಿದ್ಧತೆಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ವೀಣಾ ಮಂಗಳವಾರ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಶೈಲಿಯ ಈ ಮತಗಟ್ಟೆ ವಾತಾವರಣದಿಂದ ಮತದಾನಕ್ಕೆ ಬರುವ ಮತದಾರರ ಆಕರ್ಷಿಸುವ ಉದ್ದೇಶವಾಗಿದೆ.
    ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಫೀಕ್ ಕರ್ಜಗಿ ಮತ್ತು ತಾಲೂಕು ಸಂಯೋಜಕಿ ಸುಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts