More

    ಕೆಳಗಿನಕೇರಿ ಕಾಲುಸೇತುವೆ ಲೋಕಾರ್ಪಣೆ

    ಕುಮಟಾ: ಕುಮಟಾ ಹಾಗೂ ಹೊನ್ನಾವರ ತಾಲೂಕಿನ ನಡುವೆ ಕೂಜಳ್ಳಿ, ಚಂದಾವರ ಹಾಗೂ ಕಡತೋಕಾ ಪಂಚಾಯಿತಿಗಳಿಗೆ ಪರಸ್ಪರ ಕೊಂಡಿಯಾಗಿ ಕೆಕ್ಕಾರ ಕೆಳಗಿನಕೇರಿಯಲ್ಲಿ ಬಡಗಣಿ ಹೊಳೆಗೆ ನಿರ್ವಿುಸಿದ ನೂತನ ಕಾಲುಸೇತುವೆಯನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.

    ಬಳಿಕ ಮಾತನಾಡಿದ ಅವರು, ಕೆಕ್ಕಾರ ಕೆಳಗಿನಕೇರಿಯಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಗುಣಮಟ್ಟದ ಕಾಂಕ್ರೀಟ್ ಸೇತುವೆ ನಿರ್ವಿುಸಲಾಗಿದೆ. ಇದೇರೀತಿ ಹೊನ್ನೆಕಂಟದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 400ಮೀ. ಉದ್ದದ ಸೇತುವೆಗೆ ಹಣ ಮಂಜೂರಾಗಿದೆ ಎಂದರು.

    ಜಿಪಂ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಕೆಳಗಿನಕೇರಿಯಲ್ಲಿ ಗ್ರಾಮಸ್ಥರೇ ಮರಮಟ್ಟು ಬಳಸಿ ತಾತ್ಕಾಲಿಕ ಸೇತುವೆ ನಿರ್ವಿುಸಿಕೊಂಡು ಹೊಳೆ ದಾಟುತ್ತಿದ್ದರು. 2006ರಿಂದ ಗ್ರಾಮ ಪಂಚಾಯಿತಿಯಿಂದ ಕಾಲುಸಂಕಕ್ಕೆ ಅಲ್ಪ ಹಣಕಾಸು ನೆರವು ನೀಡಲಾಗುತ್ತಿತ್ತು. ಇಲ್ಲಿ ಶಾಶ್ವತ ಸೇತುವೆ ಬೇಕೆಂಬ ದಶಕಗಳ ಹೋರಾಟಕ್ಕೆ ಈಗ ಫಲ ಸಿಕ್ಕಂತಾಗಿದೆ ಎಂದರು.

    ತಾಪಂ ಸದಸ್ಯೆ ರೂಪಾ ಗೌಡ, ಚಂದಾವರ ಪಂಚಾಯಿತಿ ಅಧ್ಯಕ್ಷ ಚಂದ್ರು ನಾಯ್ಕ, ಕೂಜಳ್ಳಿ ಪಂಚಾಯಿತಿ ಅಧ್ಯಕ್ಷೆ ಯಶೋಧಾ ನಾಯ್ಕ, ಸದಸ್ಯರಾದ ಛಾಯಾ ಉಭಯಕರ, ಶ್ರೀಕಾಂತ ನಾಯ್ಕ, ಸಾವಿತ್ರಿ ಮುಕ್ರಿ, ಕಮಲಾಕರ ನಾಯ್ಕ, ಪ್ರಕಾಶ ನಾಯ್ಕ, ಎಂ.ಎಸ್.ನಾಯ್ಕ, ಸೇತುವೆಗೆ ಸ್ಥಳದಾನ ಮಾಡಿದ ಉಲ್ಲಾಸ ಭಂಡಾರಿ, ಭಾಸ್ಕರ ಭಂಡಾರಿ, ನಿವೃತ್ತ ಸಿಐಡಿ ಮುಖ್ಯಸ್ಥ ವಿಷ್ಣು ಜೆ. ನಾಯ್ಕ, ನಿವೃತ್ತ ಶಿಕ್ಷಕ ಅರುಣ ಉಭಯಕರ, ಪಿಡಬು Éಡಿ ಇಂಜಿನಿಯರ್​ಗಳಾದ ರಾಜು ಶಾನಭಾಗ, ಸೋಮನಾಥ ಭಂಡಾರಿ, ಗುತ್ತಿಗೆದಾರ ಕೃಷ್ಣ ಗೌಡ ಇತರರು ಇದ್ದರು.

    ಸಮಸ್ಯೆ ಪರಿಹರಿಸಿದ ಶಾಸಕ ಶೆಟ್ಟಿ
    ಬಡಗಣಿ ಹೊಳೆಗೆ ಕೆಳಗಿನಕೇರಿಯಲ್ಲಿ ಶಾಶ್ವತ ಸೇತುವೆಗಾಗಿ ಸ್ಥಳೀಯರಾದ ನಿವೃತ್ತ ಸಿಐಡಿ ಮುಖ್ಯಸ್ಥ ವಿಷ್ಣು ಜೆ. ನಾಯ್ಕ ಅವರು ಲಕ್ಷಾಂತರ ರೂ. ವ್ಯಯಿಸಿ ಕಾಂಕ್ರೀಟ್ ಸೇತುವೆಗಾಗಿ ಕಂಬಗಳನ್ನು ನಿರ್ವಿುಸಿದ್ದು ಪ್ರವಾಹದಲ್ಲಿ ಕೊಚ್ಚಿಹೋಯಿತು. ಅಂದಿನಿಂದ ಸೇತುವೆಗಾಗಿ ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟದ ಬಗ್ಗೆ ವಿಜಯವಾಣಿಯಲ್ಲಿ 2019, ಜುಲೈ 20ರಂದು ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಶಾಸಕರ ಪ್ರಯತ್ನದಿಂದ ಸೇತುವೆ ನಿರ್ವಣಕ್ಕೆ 33 ಲಕ್ಷ ರೂ. ಮಂಜೂರಾಗಿತ್ತು. ಆದರೆ, ಸೇತುವೆ ಹಾಗೂ ಕೂಡು ರಸ್ತೆಗೆ ಜಾಗದ ಮಾಲೀಕರ ಅಸಮ್ಮತಿಯಿಂದ ಕಾಮಗಾರಿ ನಿಂತುಹೋಗುವ ಆತಂಕ ಎದುರಾಗಿತ್ತು. ಮಳೆಗಾಲದೊಳಗೆ ಸೇತುವೆ ನಿರ್ವಿುಸಬೇಕೆಂಬ ಸಂಕಲ್ಪಕ್ಕೆ ಬದ್ಧರಾದ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts